ETV Bharat / city

ಸ್ವಾಮಿನಾಥನ್ ವರದಿ ಜಾರಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ: ಲಕ್ಷ್ಮಣ ಸವದಿ

author img

By

Published : Jan 18, 2020, 7:25 PM IST

ಕೃಷಿಮೇಳವನ್ನು ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಯೋಜನೆ ಮಾಡುತ್ತಿದ್ದೆವು.‌ ಆದ್ರೆ, ಈ ಬಾರಿ‌ ಪ್ರವಾಹದ ಹಿನ್ನೆಲೆ ಜನವರಿಯಲ್ಲಿಯೇ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

Lakshman savadhi
ಲಕ್ಷ್ಮಣ ಸವದಿ

ಧಾರವಾಡ: ಕೃಷಿಮೇಳವನ್ನು ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಆಯೋಜನೆ ಮಾಡುತ್ತಿದ್ದೆವು.‌ ಆದ್ರೆ, ಈ ಬಾರಿ‌ ಪ್ರವಾಹದ ಹಿನ್ನೆಲೆ ಜನವರಿಯಲ್ಲಿಯೇ ಮಾಡುತ್ತಿದ್ದೇವೆ ಎಂದು ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ಕೃಷಿಮೇಳದಲ್ಲಿ ಭಾಗವಹಿಸಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಧಾರವಾಡದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ ಕೃಷಿಮೇಳ

ಕೃಷಿಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿನಾಥನ್ ವರದಿ ಜಾರಿ ರೈತರ ಬೇಡಿಕೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಹೆಜ್ಜೆ ಇಟ್ಟಿದ್ದೆ. ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‌ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಿದೆ. ಕಬ್ಬು ಬೆಳೆಯಲ್ಲಿ ಇಳುವರಿ ಜೊತೆಗೆ ಹೆಚ್ಚು ರಿಕವರಿ ಬರುವ ಸಂಶೋಧನೆಗಳನ್ನು ಕೃಷಿ ವಿಜ್ಞಾನಿಗಳು ಮಾಡಬೇಕಿದೆ. ಕೃಷಿ ವಿವಿ ಕುಲಪತಿಗಳು ಮೇಳ ಮಾಡಬೇಕೋ ಬೇಡವೋ ಅಂತ ಗೊಂದಲದಲ್ಲಿದ್ದರು. ಯಾವುದೇ ಕಾರಣಕ್ಕೂ ಬಿಡುವುದು ಬೇಡ, ಮಾಡೋಣ ಅಂತ ನಿರ್ಣಯ ಮಾಡಿ ಕೃಷಿಮೇಳ ಮಾಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಇಳುವರಿ ಜೊತೆಗೆ ರಿಕವರಿ ಬಂದಾಗ ಮಾತ್ರ ಶುಗರ್ ಫ್ಯಾಕ್ಟರಿಗಳು ಹೆಚ್ಚಿನ ದರ ಕೊಡಬಲ್ಲವು. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು. ಜಗತ್ತಿಗೆ ಅನ್ನ ಕೊಡುವ ರೈತ ಸಮುದಾಯ ದುರಾಸೆಗೆ ಒಳಗಾಗಬಾರದು. ಮನುಷ್ಯನಿಗೆ ಆಯುಷ್ಯ, ಐಶ್ವರ್ಯ ಮತ್ತು ಅಧಿಕಾರ ಯಾವತ್ತೂ ಶಾಶ್ವತ ಅಲ್ಲ. ಹಂಪಿಯ ಸಾಮ್ರಾಜ್ಯದಲ್ಲಿ ಮುತ್ತು ರತ್ನ ಬೀದಿಯಲ್ಲಿ ಅಳೆಯುತ್ತಿದ್ದರಂತೆ. ಆದರೆ ಈಗ ಹಂಪಿ ಏನಾಗಿ?, ಹಾಳಾಗಿ‌ ಹೋಗಿದೆ ಎಂದು ವಿವರಿಸಿದರು.

ರೈತರು ಸಾವಯವ ಕೃಷಿಗೆ ಒತ್ತು ಕೊಟ್ಟು ಸಮಾಜಕ್ಕೆ ಆಸರೆಯಾಗಿ ನಿಲ್ಲಬೇಕು. ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 3-4 ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕ್ಯಾಬಿನೆಟ್ ಸಭೆ ಕರೆದು, ಶೇಂಗಾ ಖರೀದಿ ಕೇಂದ್ರದ ಕುರಿತು ನಿರ್ಣಯ ಮಾಡುತ್ತೇವೆ ಎಂದರು.

ಕೃಷಿಮೇಳಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಶೇಕಡಾ 400 ರಷ್ಟು ಹಣ ಭಾರತ ಸರ್ಕಾರ ತೆಗೆದು ಇಟ್ಟಿದೆ. ಸ್ವಾಮಿನಾಥನ್ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಾಗಿದೆ.‌ ಈ ನಿಟ್ಟಿನಲ್ಲಿ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ನಿರ್ಧಾರ ಮಾಡಲಾಗಿದೆ. ಹನ್ನೆರಡು ಸಾವಿರ ಕೋಟಿ ಹಣವನ್ನು ಜಾನುವಾರುಗಳಿಗೆ ಬರುವ ಕಾಲುಬೇನೆ ರೋಗ ನಿಯಂತ್ರಣ ಮಾಡಲು ತೆಗೆದಿಡಲಾಗಿದೆ ಎಂದರು.

ಇನ್ನು ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು. ಕೆಲ ಕೃಷಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯ ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ್, ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ‌. ನಿಂಬಣ್ಣವರ ಸೇರಿದಂತೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

Intro:ಧಾರವಾಡ: ಕೃಷಿ ಮೇಳವನ್ನು ಸೆಪ್ಟೆಂಬರ್‌ನಲ್ಲಿ ಆಯೋಜನೆ ಮಾಡುತ್ತಿದ್ದಿವಿ.‌ ಆದರೆ‌ ಪ್ರವಾಹದ ಹಿನ್ನೆಲೆ ಜನವರಿಯಲ್ಲಿ ಮಾಡುತ್ತಿದ್ದೇವೆ.‌ ಕೃಷಿ ವಿವಿ ಕುಲಪತಿಗಳು ಮೇಳ ಮಾಡಬೇಕೋ ಬೇಡ್ವೊ ಅಂತಾ ಗೊಂದಲದಲ್ಲಿದ್ದರು. ಯಾವುದೇ ಕಾರಣಕ್ಕು ಬಿಡುವುದು ಬೇಡ ಮಾಡೋಣ ಅಂತಾ ನಿರ್ಣಯ ಮಾಡಿ ಕೃಷಿಮೇಳ ಮಾಡಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು...

ಧಾರವಾಡದ ಕೃವಿವಿ ಆವರಣದಲ್ಲಿ ಆಯೋಜಿಸಿದ ಕೃಷಿಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾಮಿನಾಥನ್ ವರದಿ ಜಾರಿ ರೈತರ ಬೇಡಿಕೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಗ ಹೆಜ್ಜೆ ಇಟ್ಟಿದ್ದೆ. ಬೆಂಬಲ ಬೆಲೆ ವಿಷಯದಲ್ಲಿ 75 ವರ್ಷಗಳ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.‌ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಿದೆ. ಕಬ್ಬು ಬೆಳೆಯಲ್ಲಿ ಇಳುವರಿ ಜೊತೆಗೆ ಹೆಚ್ಚು ರಿಕವರಿ ಬರುವ ಸಂಶೋಧನೆಗಳನ್ನು ಕೃಷಿ ವಿಜ್ಞಾನಿಗಳು ಮಾಡಬೇಕಿದೆ ಎಂದರು..

ಇಳುವರಿ ಜೊತೆಗೆ ರಿಕವರಿ ಬಂದಾಗ ಮಾತ್ರ ಶುಗರ್ ಫ್ಯಾಕ್ಟರಿಗಳು ಹೆಚ್ಚಿನ ದರ ಕೊಡಬಲ್ಲವು. ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು. ನಾವು ಸತ್ತರೇ ಮಣ್ಣಿಗೆ ಹೋಗತೇವಿ. ಆದರೆ ಅದೇ ಮಣ್ಣು ಸತ್ತರೇ ನಾವೆಲ್ಲಿ ಹೋಗಬೇಕು. ಮಣ್ಣಿನ ಸಂರಕ್ಷಣೆ ಬಗ್ಗೆ ರೈತರು ಒತ್ತು ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಜಗತ್ತಿಗೆ ಅನ್ನ ಕೊಡುವ ರೈತ ಸಮುದಾಯ ದುರಾಸೆಗೆ ಒಳಗಾಗಬಾರದು. ಮನುಷ್ಯನಿಗೆ ಆಯುಷ್ಯ, ಐಶ್ವರ್ಯ ಮತ್ತು ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರ ಒಂದು ದಿನ ಬಿಟ್ಟು ಹೋಗುತ್ತೆ. ಆಯಷ್ಯನೂ ಹೋಗಲೇಬೇಕು ಐಶ್ವರ್ಯ ಕೂಡ ಹೋಗಿಯೇ ಹೋಗುತ್ತದೆ. ಹಂಪಿಯ ಸಾಮ್ರಾಜ್ಯದಲ್ಲಿ ಮುತ್ತು ರತ್ನ ಬೀದಿಯಲ್ಲಿ ಅಳೆಯುತ್ತಿದ್ದರಂತೆ. ಆದರೆ ಈಗ ಹಂಪಿ ಏನಾಗಿ? ಹಾಳಾಗಿ‌ ಹೋಗಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಹೀಗಾಗಿ ನಾವು ಪುಣ್ಯ ಕೆಲಸ ಮಾಡಬೇಕಿದೆ. ರೈತರು ಸಾವಯವ ಕೃಷಿಗೆ ಒತ್ತು ಕೊಟ್ಟು ಸಮಾಜಕ್ಕೆ ಆಸರೆಯಾಗಿ ನಿಲ್ಲಬೇಕು. ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರದ ಮೂಲಕ ಖರೀದಿಸಲು 3-4 ದಿನದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕ್ಯಾಬಿನೆಟ್ ಸಭೆ ಕರೆದು ಶೇಂಗಾ ಖರೀದಿ ಕೇಂದ್ರದ ನಿರ್ಣಯ ಮಾಡುತ್ತೇವೆ ಎಂದರು..

ಕೃಷಿಮೇಳಕ್ಕೆ ಚಾಲನೆ ನೀಡಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಶೇಕಡಾ ೪೦೦ ರಷ್ಟು ಹಣ ಭಾರತ ಸರ್ಕಾರ ತೆಗೆದು ಇಟ್ಟಿದೆ. ಸ್ವಾಮಿನಾಥನ್ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರ ಮಾಡಲಾಗಿದೆ.‌ ಈ ನಿಟ್ಟಿನಲ್ಲಿ ೩೦ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದರು.

ಹನ್ನೆರಡು ಸಾವಿರ ಕೋಟಿ ಹಣವನ್ನು ಜಾನುವಾರುಗಳಿಗೆ ಬರುವ ಕಾಲು ಬೇನೆ ರೋಗವನ್ನು ನಿಯಂತ್ರಣ ಮಾಡಲು ತೆಗೆದಿಡಲಾಗಿದೆ. ಈ ಹಿಂದೆ ದೇಶದಲ್ಲಿ ಯೂರಿಯಾ ಗೊಬ್ಬರವನ್ನು ಸ್ಮಗ್ಲಿಂಗ್ ಮಾಡಿ ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು. ಇದರಿಂದ ೮೦ ಸಾವಿರ ಕೋಟಿ ಉಳಿತಾಯವಾಗಿದೆ. ದೇಶದಲ್ಲಿ ಆಧಾರ ಕಾರ್ಡ್ ಮಾಡಿದಾಗಿನಿಂದ ಒಂದು ಲಕ್ಷ ೨೫ ಸಾವಿರ ಕೋಟಿ ಮಧ್ಯವರ್ತಿಗಳಿಗೆ ಹೋಗುವುದು ತಪ್ಪಿದೆ ಎಂದರು...Body:ಕೃಷಿಮೇಳದಲ್ಲಿ ಕೃಷಿಗೆ ಸಂಬಂದಿಸಿದ ಪುಸ್ತಕಗಳನ್ನು ಬಿಡುಗಡೆ ಗೊಳಿಸಲಾಯಿತು. ಶ್ರೇಷ್ಠ ಕೃಷಿಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ, ರಾಜ್ಯ ಸಚಿವರಾದ ಜಗದೀಶ ಶೆಟ್ಟರ್, ಸಿ.ಸಿ. ಪಾಟೀಲ್, ಶಾಸಕರಾದ ಶಂಕರ್ ಪಾಟೀಲ್ ಮುನೇನಕೊಪ್ಪ, ಅಮೃತ ದೇಸಾಯಿ, ಸಿ.ಎಂ‌. ನಿಂಬಣ್ಣವರ ಸೇರಿದಂತೆ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು...

ಬೈಟ್: ಲಕ್ಷ್ಮಣ ಸವದಿ, ಡಿಸಿಎಂ

ಬೈಟ್: ಪ್ರಲ್ಹಾದ ಜೋಶಿ, ಕೇಂದ್ರ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.