ETV Bharat / city

ಎಸ್​ಐಟಿ ತನಿಖೆಯಿಂದ 'ಸಿಡಿ'ಯ ಸತ್ಯಾಂಶ ಶೀಘ್ರವೇ ಹೊರಬರಲಿದೆ: ಬಿ.ವೈ ವಿಜಯೇಂದ್ರ

author img

By

Published : Mar 31, 2021, 2:14 PM IST

ಸಿಡಿ ಪ್ರಕರಣದ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಬಹಳಷ್ಟು ಜನರ ಅಭಿಮತವಾಗಿದೆ. ರಾಜ್ಯದ ಜನರು ದಡ್ಡರಲ್ಲ. ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

State BJP vice president BY Vijayendra
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ

ದಾವಣಗೆರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದ್ದಾರೆ ಎನ್ನಲಾದ ವಿಡಿಯೋದ ಸಿಡಿ ಪ್ರಕರಣದ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಬಹಳಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಎಸ್​ಐಟಿ ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಸತ್ಯಾಂಶ ಹೊರಬರಲಿದೆ ಎಂದು ಬಿಜೆಪಿ ರಾಜ್ಯಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಿಡಿ ಪ್ರಕರಣದ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಬಹಳಷ್ಟು ಜನರ ಅಭಿಮತವಾಗಿದೆ. ರಾಜ್ಯದ ಜನರು ದಡ್ಡರಲ್ಲ, ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದರು.

ಶಾಸಕ ಯತ್ನಾಳ್ ಅವರ ಸರ್ಕಾರದ ವಿರುದ್ಧದ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದಕ್ಕೂ ತಲೆ ಕೆಡಸಿಕೊಳ್ಳುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ನನಗೆ ಉಪಾಧ್ಯಕ್ಷನ ಸ್ಥಾನ ನೀಡಿದ್ದರಿಂದ ನಾನು ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತೇನೆ. ಇದ್ಯಾವುದು ನನಗೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.

ಎಸ್​ಐಟಿ ತನಿಖೆ ನಡೆಯುತ್ತಿದ್ದು, ಸದ್ಯದಲ್ಲೇ ಸತ್ಯಾಂಶ ಹೊರಬರಲಿದೆ

ಬೆಳಗಾವಿ ಉಪಚುನಾವಣೆ ಮೇಲೆ ಸಿಡಿ ಪ್ರಕರಣ ಯಾವುದೇ ಪರಿಣಾಮ ಬೀರುವುದಿಲ್ಲ. ಬೆಳಗಾವಿಯಲ್ಲಿ ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ಈ ಹಿಂದೆ ಒಟ್ಟು 17 ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ. ನಮಗೆ ವಿಶ್ವಾಸವಿದೆ ಒಂದು ಲೋಕಸಭೆ, ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವುದು ನಿಶ್ಚಿತ. ಬಿಜೆಪಿಯ ಗೆಲುವಿನ ನಾಗಲೋಟ ತಡೆಯಲು ಯಾವುದೇ ಪಕ್ಷದಿಂದ ಸಾದ್ಯವಿಲ್ಲ. ಅಭಿವೃದ್ಧಿ ಆಧಾರದ ಮೇಲೆ ನಾಯಕತ್ವದ ಆಧಾರದ ಮೇಲೆ ಬೆಳಗಾವಿಯನ್ನು ಗೆಲ್ಲುತ್ತೇವೆ ಎಂದರು.

ಓದಿ: "ನಾನು ವಿಡಿಯೋ ಮಾಡಿಕೊಂಡು ಪಿಜಿಯಲ್ಲಿಟ್ಟಿದ್ದೆ, ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ"- ಎಸ್​ಐಟಿ ಮುಂದೆ ಯುವತಿ ಹೇಳಿಕೆ.!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.