ETV Bharat / city

ಗಡಿ ಗ್ರಾಮಗಳ ಹೆಸರು ಬದಲಾಯಿಸಿದರೆ ಕೇರಳ ಸರ್ಕಾರ ವಿರುದ್ಧ ಹೋರಾಟ: T.S ನಾಗಾಭರಣ ಎಚ್ಚರಿಕೆ

author img

By

Published : Jun 27, 2021, 4:43 AM IST

Village name change issue; Nagabharana warns to kerala govt.
ಗಡಿ ಗ್ರಾಮಗಳ ಹೆಸರು ಬದಲಾಯಿಸಿದರೆ ಕೇರಳ ಸರ್ಕಾರ ವಿರುದ್ಧ ಹೋರಾಟ: T.S ನಾಗಾಭರಣ ಎಚ್ಚರಿಕೆ

ಕರ್ನಾಟಕದ ಗಡಿ ಭಾಗ ಹಾಗೂ ಕೇರಳದಲ್ಲಿರುವ ಕನ್ನಡದ ಕೆಲ ಹಳ್ಳಿಗಳ ಹೆಸರನ್ನು ಬದಲಾಯಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್‌ ನಾಗಾಭರಣ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

ಬೆಂಗಳೂರು: ಕೇರಳ ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿನ ಕನ್ನಡ ಭಾಷಿಗರು ಹೆಚ್ಚು ವಾಸಿಸುವ ಹಳ್ಳಿಗಳಲ್ಲಿನ ಕನ್ನಡ ಹೆಸರು ಬದಲಾವಣೆ ಮಾಡಿದರೆ ಅಲ್ಲಿನ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಎಚ್ಚರಿಕೆ ನೀಡಿದ್ದಾರೆ. ಕೇರಳದ ಸ್ಥಳೀಯ ಸಂಸ್ಥೆಗಳು ರಾಜ್ಯದ ಗಡಿಭಾಗವಾಗಿರುವ ಕಾಸರಗೋಡಿನ ಮಂಜೇಶ್ವರ ಸೇರಿದಂತೆ ಹತ್ತಾರು ಗ್ರಾಮಗಳ ಕನ್ನಡದ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರನ್ನಾಗಿ ಬದಲಾವಣೆ ಮಾಡಲು ಮುಂದಾಗಿರುವುದು ಕನ್ನಡಿಗರ ಸ್ವಾಭಿಮಾನ ಕೆಣಕಿದಂತೆ ಆಗುತ್ತದೆ ಎಂದು ನಾಗಾಭರಣ ತಿಳಿಸಿದ್ದಾರೆ.

ಕಾಸರಗೋಡಿನ ಗಡಿಭಾಗದ ಸಮಸ್ಯೆಗಳ ಬಗ್ಗೆ ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳು ಬದ್ಧತೆಯಿಂದ ನಡೆದುಕೊಳ್ಳಬೇಕಾಗಿದೆ. ಮಂಜೇಶ್ವರ ಸೇರಿದಂತೆ ಹಲವಾರು ಗ್ರಾಮಗಳಿಗೆ ಈಗಿರುವ ಕನ್ನಡದ ಹೆಸರನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಕೇರಳ ಸರ್ಕಾರ ಕಂದಾಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು, ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಮತ್ತು ಹೊರನಾಡಿನ ಸಂಘಟನೆಗಳ ಜತೆಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.