ETV Bharat / city

ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ: ಜೈರಾಮ್ ರಮೇಶ್​​ಗಿಂತ ಮನ್ಸೂರ್ ಅಲಿಖಾನ್ ಶ್ರೀಮಂತ

author img

By

Published : Jun 1, 2022, 8:48 AM IST

ಕಾಂಗ್ರೆಸ್​​ನಿಂದ ಸ್ಪರ್ಧಿಸಿರುವ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿಖಾನ್ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ.

Property Details of Rajya Sabha Candidates
ಆಸ್ತಿ ವಿವರ ಸಲ್ಲಿಸಿದ ಕಾಂಗ್ರೆಸ್​​ ಅಭ್ಯರ್ಥಿಗಳು

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್​​​ನ ಇಬ್ಬರು ಅಭ್ಯರ್ಥಿಗಳು ಕೋಟಿಗಳ ಲೆಕ್ಕದಲ್ಲಿ ಆಸ್ತಿ ಹೊಂದಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ಕರ್ನಾಟಕದಿಂದ ನಾಲ್ವರು ಸದಸ್ಯರ ಆಯ್ಕೆಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಸದ್ಯ ಒಟ್ಟು ಆರು ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿರುವ ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿಖಾನ್ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ತಾವು ಕೋಟ್ಯಧಿಪತಿಗಳು ಎಂಬುದನ್ನು ದಾಖಲೆಯ ರೂಪದಲ್ಲಿ ಒದಗಿಸಿದ್ದಾರೆ.

ಜೈರಾಮ್ ರಮೇಶ್ ಒಟ್ಟು 4.5 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಎರಡನೇ ಅಭ್ಯರ್ಥಿಯಾಗಿರುವ ಮನ್ಸೂರ್ ಅಲಿ ಖಾನ್ ಒಟ್ಟು 79.11 ಕೋಟಿ ಆಸ್ತಿಯ ಒಡೆಯ. ವಿಶೇಷ ಎಂದರೆ ಜೈರಾಮ್ ರಮೇಶ್ ಯಾವುದೇ ರೀತಿಯ ಸಾಲ ಹೊಂದಿಲ್ಲ. ಆದರೆ, ಮನ್ಸೂರ್ ಅಲಿ ಖಾನ್ ಒಟ್ಟು 39.53 ಕೋಟಿ ರೂ.ಸಾಲ ಹೊಂದಿದ್ದಾರೆ.

Jairam Ramesh Property Details
ಆಸ್ತಿ ವಿವರ ಸಲ್ಲಿಸಿದ ಕಾಂಗ್ರೆಸ್​​ ಅಭ್ಯರ್ಥಿ ಜೈರಾಮ್ ರಮೇಶ್

ಜೈರಾಮ್ ರಮೇಶ್ ಆಸ್ತಿ ವಿವರ:

  • ಘೋಷಿಸಿಕೊಂಡ ಒಟ್ಟು ಆಸ್ತಿ 4.56 ಕೋಟಿ ರೂ.
  • ನಗದು- 25 ಸಾವಿರ ರೂ.
  • ಚರಾಸ್ತಿ- 1.72 ಕೋಟಿ ರೂ.
  • ಸ್ಥಿರಾಸ್ತಿ- 2.84 ಕೋಟಿ ರೂ.
  • ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಸಾಲ- 35.47 ಲಕ್ಷ ರೂ.
  • ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ- 27.41 ಲಕ್ಷ ರೂ.
  • ಚಿನ್ನಾಭರಣ- 50.70 ಲಕ್ಷ ರೂ. ಇದರಲ್ಲಿ 900 ಗ್ರಾಂ ಚಿನ್ನ (45 ಲಕ್ಷ ಮೌಲ್ಯ) ಮತ್ತು 9 ಕ್ಯಾರೆಟ್ ವಜ್ರ (4.50 ಲಕ್ಷ ಮೌಲ್ಯ)
  • ವಾಹನ- ಮಾರುತಿ ರಿಟ್ಜ್ ಕಾರು (4 ಲಕ್ಷ ಮೌಲ್ಯ)
    Property Details of Mansur Ali Khan
    ಆಸ್ತಿ ವಿವರ ಸಲ್ಲಿಸಿದ ಕಾಂಗ್ರೆಸ್​​ ಅಭ್ಯರ್ಥಿ ಮನ್ಸೂರ್ ಅಲಿಖಾನ್

ಮನ್ಸೂರ್ ಅಲಿ ಖಾನ್ ಆಸ್ತಿ ವಿವರ:

  • ಘೋಷಿಸಿಕೊಂಡ ಒಟ್ಟು ಆಸ್ತಿ- 79.11 ಕೋಟಿ ರೂ.
  • ಚರಾಸ್ತಿ- 13.11 ಕೋಟಿ ರೂ.
  • ಸ್ಥಿರಾಸ್ತಿ- 65.91 ಕೋಟಿ ರೂ.
  • ನಗದು- 6.50 ಲಕ್ಷ ರೂ.
  • ಚಿನ್ನಾಭರಣ- 54.08 ಲಕ್ಷ ರೂ.
  • ವಾಹನ- ಮಿನಿ ಕೂಪರ್ ಕಾರು (48.32 ಲಕ್ಷ ಮೌಲ್ಯ)
  • ಅಭ್ಯರ್ಥಿ ಹೆಸರಲ್ಲಿನ ಚರಾಸ್ತಿ- 8.39 ಕೋಟಿ ರೂ.
  • ಸ್ಥಿರಾಸ್ತಿ- 5.69 ಕೋಟಿ ರೂ.
  • ಪತ್ನಿ ಹೆಸರಿನಲ್ಲಿರುವ ಚರಾಸ್ತಿ- 4.41 ಕೋಟಿ ರೂ.
  • ಸ್ಥಿರಾಸ್ತಿ- 8.93 ಕೋಟಿ ರೂ.
  • ಕೈಯಲ್ಲಿರುವ ನಗದು- 2.50 ಲಕ್ಷ ರೂ.
  • ವಾಹನ- ಬಿಎಂಡಬ್ಲೂ ಕಾರು (17.50 ಲಕ್ಷ ಮೌಲ್ಯ)
  • ಚಿನ್ನಾಭರಣ- 79.07 ಲಕ್ಷ ರೂ.
  • ಅವಲಂಬಿತರಿಬ್ಬರ ಕೈಯಲ್ಲಿನ ನಗದು- 37.79 ಲಕ್ಷ ರೂ.
  • ಒಟ್ಟಾರೆ ಸಾಲ- 39.53 ಕೋಟಿ ರೂ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಬಳಿ ಒಂದೂ ಕಾರಿಲ್ಲ.. ಕುಪ್ಪೇಂದ್ರ ರೆಡ್ಡಿ 817 ಕೋಟಿಯ ಒಡೆಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.