ETV Bharat / city

ಕೆ.ಆರ್.ಪುರಂನಲ್ಲಿ ಪ್ರಥಮ ಬಾರಿಗೆ ಮಾವು, ಸಿರಿಧಾನ್ಯ ಮೇಳ

author img

By

Published : Jun 9, 2019, 12:29 PM IST

ಕೆ ಆರ್ ಪುರಂನಲ್ಲಿ ಪ್ರಥಮ ಬಾರಿಗೆ ಮಾವು ಹಾಗೂ ಸಿರಿಧಾನ್ಯ ಮೇಳ

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ, ಹಣ್ಣು, ತರಕಾರಿಗಳು ರಾಸಾಯನಿಕ ವಸ್ತುಗಳಿಂದ ಬೆಳೆಯುವುದರಿಂದ ವಿಷ ಮಿಶ್ರಿತವಾಗಿದ್ದು, ಜನರ ಆರೋಗ್ಯ ಕೆಡುತ್ತಿದೆ. ಇದಕ್ಕಾಗಿಯೇ ಪುಣ್ಯಭೂಮಿ ಸೇವಾ ಸಂಸ್ಥೆ ಇದೇ ಪ್ರಥಮ ಬಾರಿಗೆ ಕೆ ಆರ್ ಪುರಂನಲ್ಲಿ ಮಾವು ಹಾಗೂ ಸಿರಿಧಾನ್ಯ ಮೇಳ ಆಯೋಜಿಸಿದೆ.

ಬೆಂಗಳೂರು: ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಆರೋಗ್ಯಕರ ಮಾವು, ಹಲಸು, ಸಿರಿಧಾನ್ಯ ಹಾಗೂ ತರಕಾರಿಗಳ ಕೃಷಿ ಮೇಳವನ್ನು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬಾಯಲ್ಲಿ ನೀರುರಿಸುವಂತೆ ಘಮಘಮಿಸುತ್ತಿರುವ ವಿವಿಧ ಬಗೆಯ ಮಾವಿನ ಹಣ್ಣುಗಳು, ಚಿನ್ನದಂತೆ ಹೊಳೆಯುತ್ತಿರುವ ಹಲಸಿನ ತೊಳೆಗಳು, ಅನಾರೋಗ್ಯವನ್ನ ದೂರ ಮಾಡುವ ಸಿರಿಧಾನ್ಯಗಳು... ಇಂತಹ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮೇಳ ಆಯೋಜನೆಗೊಂಡಿರುವುದು ಬೆಂಗಳೂರು ಹೊರವಲಯ ಕೆ ಆರ್ ಪುರ ಕ್ಷೇತ್ರದ ಎನ್ಆರ್​ಐ ಬಡಾವಣೆಯಲ್ಲಿ. ಪುಣ್ಯಭೂಮಿ ಸೇವಾ ಸಂಸ್ಥೆ ಇದೇ ಪ್ರಥಮ ಬಾರಿಗೆ ಈ ಭಾಗದಲ್ಲಿ ಇಂತಹ ಮೇಳ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೆ ಆರ್ ಪುರಂನಲ್ಲಿ ಪ್ರಥಮ ಬಾರಿಗೆ ಮಾವು ಹಾಗೂ ಸಿರಿಧಾನ್ಯ ಮೇಳ

ಇನ್ನು ನಾವು ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಖರೀದಿಸಿ ಸೇವಿಸುವ ಹಣ್ಣುಗಳನ್ನು ರಾಸಾಯನಿಕ ವಸ್ತುಗಳಿಂದ ಬೆಳೆದು, ಅದು ಬೇಗ ಹಣ್ಣಾಗಲು ಕೆಲವು ಕೆಮಿಕಲ್ಸ್ ಸಿಂಪಡಿಸುವುದರಿಂದ ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗಿದೆ. ಸಾರ್ವಜನಿಕರು ಆರೋಗ್ಯವಾಗಿರುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ರಾಮಮೂರ್ತಿನಗರ, ಕಲ್ಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಆಯೋಜಕರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಗುಣಮಟ್ಟವಲ್ಲದ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ಉತ್ಪಾದಿಸಲ್ಪಟ್ಟ ಆಹಾರ ಪದಾರ್ಥಗಳ ಸೇವನೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದವರಿಗೆ ಒಂದೇ ಸೂರಿನಡಿ ಸಾವಯವ ಕೃಷಿ ಪದ್ಧತಿಯಿಂದ ಬೆಳೆದಂತ ವಸ್ತುಗಳು ದೊರಕಿದ್ದು ಸಂತಸವನ್ನುಂಟು ಮಾಡಿದೆ.

Intro:ಕೆ.ಆರ್.ಪುರಂ ನಲ್ಲಿ ಪ್ರಥಮ ಭಾರಿಗೆ ಮಾವು ಹಾಗೂ ಸಿರಿದಾನ್ಯ ಮೇಳೆ


ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ, ಹಣ್ಣು, ತರಕಾರಿಗಳು ರಾಸಾಯನಿಕ ವಸ್ತುಗಳಿಂದ ಬೆಳೆಯುವುದರಿಂದ ವಿಷ ಮಿಶ್ರಿತವಾಗಿದ್ದು ಜನರ ಆರೋಗ್ಯ ಕೆಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ನಡೆಯಿವಂತೆ ರೈತರಿಂದ ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆದ ಆರೋಗ್ಯಕರ ಮಾವು, ಹಲಸು, ಸಿರಿದಾನ್ಯ ಹಾಗೂ ತರಕಾರಿಗಳ ಕೃಷಿ ಮೇಶವನ್ನುಯ ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.



ಹೀಗೆ ಬಾಯಲ್ಲಿ ನೀರುರಿಸುವಂತೆ ಗಮಗಮಿಸುತ್ತಿರುವ ವಿವಿಧ ಬಗೆಯ ಮಾವಿನ ಹಣ್ಣುಗಳು, ಚಿನ್ನದಂತೆ ಹೊಳೆಯುತ್ತಿರುವ ಹಲಸಿನ ತೊಳೆಗಳು, ಅನಾರೋಗ್ಯವನ್ನಹ ದೂರ ಮಾಡುವ ಸಿರಿದಾನ್ಯಗಳು. ಇಂತಹ ರೈತರ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮೇಳೆ ಆಯೋಜನೆಗೊಂಡಿರುವುದು ಬೆಂಗಳೂರು ಹೊರವಲಯ ಕೆ.ಆರ್.ಪುರ ಕ್ಷೇತ್ರದ ಎನ್.ಆರ್.ಐ ಬಡಾವಣೆಯಲ್ಲಿ. ಪುಣ್ಯಭೂಮಿ ಸೇವಾ ಸಂಸ್ಥೆ ಇದೇ ಪ್ರಥಮಭಾರಿಗೆ ಈ ಭಾಗದಲ್ಲಿ ಇಂತಹ ಮೇಳೆ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


Body:ಇನ್ನು ನಾವು ಪ್ರತಿನಿತ್ಯ ಮಾರುಕಟ್ಟೆಯಲ್ಲಿ ಕರೀದಿಸಿ ಸೇವಿಸುವ ಹಣ್ಣುಗಳಿ ರಾಸಾಯನಿಕ ವಸ್ತುಗಳಿಂದ ಬೆಳೆದು, ಅದು ಬೇಗ ಹಣ್ಣಾಗಲು ಕೆಲವು ಕೆಮಿಕಲ್ಸ್ ಸಿಂಪಡಿಸುವುದರಿಂದ ಮನುಷ್ಯನ ಜೀವಕ್ಕೆ ಭಾರಿ ಹಾನಿಕಾರಕವಾಗಿದ್ದು, ಸಾರ್ವಜನಿಕರು ಆರೋಗ್ಯವಾಗಿರುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು ಇದರ ಸದುಪಯೋಗವನ್ನು ರಾಮಮೂರ್ತಿನಗರ, ಕಲ್ಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಯೋಜಕರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.



Conclusion:ಗುಣಮಟ್ಟವಲ್ಲದ ಹಾಗೂ ರಾಸಾಯನಿಕ ವಸ್ತುಗಳ ಬಳಕೆಯಿಂದ ಉತ್ಪಾದಿಸಲ್ಪಟ್ಟ ಆಹಾರ ಪದಾರ್ಥಗಳ ಸೇವನೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದವರಿಗೆ ಒಂದೇ ಸೂರಿನಡಿ ಸಾವಯವ ಕೃಷಿಯಿಂದ ಬೆಳೆದಂತಹ ವಸ್ತಗಳು ದೊರಕಿದ್ದು ಸಂತಸವನ್ನುಂಟು ಮಾಡಿತ್ತು..

ಧರ್ಮರಾಜು ಎಂ ಕೆಆರ್ ಪುರ.


ಬೈಟ್ : ಬಿಎ ಬಸವರಾಜ್ ಕೆಆರ್ ಪುರ. ಶಾಸಕರು.

ಬೈಟ್ : ಕೃಷ್ಣ ಮೂರ್ತಿ ಆಯೋಜಕರು.

ಶಾಂತ ಸ್ಥಳೀಯರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.