ETV Bharat / city

ಕಾಂಗ್ರೆಸ್‌ನವರು ಒಳ್ಳೇ ಕೆಲಸ ಮಾಡಿದಾರೆ, ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಹಣ ಖರ್ಚು ಮಾಡಿದೆ.. ಮಾಜಿ ಪಿಎಂ ಹೆಚ್​ಡಿಡಿ

author img

By

Published : Nov 2, 2021, 3:38 PM IST

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ

ನನ್ನ ಚುನಾವಣೆ ಸೋತ ಮೇಲೆ ಗುಬ್ಬಿ ಶ್ರೀನಿವಾಸ್ ನೇತೃತ್ವದಲ್ಲೇ ಜಿಲ್ಲಾ ಪ್ರವಾಸ ಮಾಡೋಣ ಎಂದಿದ್ದೆ. ಮಂತ್ರಿ ಆಗಿದ್ದಾಗಲೇ ಕೇಳಿದ್ದೆ. ಜನರಿಗೆ ಧನ್ಯವಾದ ಹೇಳಲು ಮುಂದಾಗಿದ್ದೆ. ಆದರೆ, ಏನಾಯಿತು? ಅಲ್ಲಿನ ಜನತೆ ಅರ್ಥ ಮಾಡಿಕೊಳ್ಳುತ್ತಾರೆ. ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಅವರು ಅಭ್ಯರ್ಥಿ ಘೋಷಣೆ ಮಾಡಿದ್ರೆ ನಾವು ಸುಮ್ಮನೆ ಕೂರಬೇಕಾ? ನಾವು ಆಲ್ಟರ್ನೇಟಿವ್ ಹುಡುಕಬೇಕಾಗುತ್ತದೆ..

ಬೆಂಗಳೂರು/ನವದೆಹಲಿ : ಉಪಚುನಾವಣೆಯಲ್ಲಿ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಇಷ್ಟು ಹಣ ಸುರಿಯೋಕೆ‌ ಆಗಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಉಪಸಮರದ ಫಲಿತಾಂಶದ ಬಗ್ಗೆ ಅಭಿಪ್ರಾಯಪಟ್ಟರು.

ಬರೀ ಕಾಂಗ್ರೆಸ್, ಬಿಜೆಪಿ ಆದ್ರೆ ನಾವೇನು ಮನೆಗೆ ಹೋಗಬೇಕಾ?: ದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ನಾನು ಪ್ರವಾಸ ಮಾಡುತ್ತೇನೆ. ಇದೇ ಭಾಗದಲ್ಲಿ ಹೆಚ್ಚು ಪ್ರವಾಸ ಮಾಡುತ್ತೇನೆ. ಒಂದು ತಿಂಗಳಲ್ಲಿ ಎರಡು ಜಿಲ್ಲೆಗೆ ಭೇಟಿ ನೀಡುತ್ತೇನೆ. ಬಳಿಕ ನಾನೇ ಅಭ್ಯರ್ಥಿ ಆಯ್ಕೆ ಮಾಡುತ್ತೇನೆ.

ದಕ್ಷಿಣದಲ್ಲಿ ಕುಮಾರಸ್ವಾಮಿ ನೋಡಿಕೊಳ್ತಾರೆ. ಪಕ್ಷದ ಎಲ್ಲ ಮುಖಂಡರ ಜೊತೆ ಸೇರಿ ಒಟ್ಟಾಗಿ ಹೋರಾಡುತ್ತೇವೆ, ಧೃತಿಗೆಡುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ತೆಗೆದುಕೊಂಡು ಹೋಗಿ ಕಾಂಗ್ರೆಸ್ ಪಡೆದ ಮತ ಎಷ್ಟು? ಹಾನಗಲ್ ಬಗ್ಗೆ ನಾನು ಮಾತನಾಡುವುದಿಲ್ಲ. ಬರೀ ಕಾಂಗ್ರೆಸ್, ಬಿಜೆಪಿ ಆದ್ರೆ ನಾವೇನು ಮನೆಗೆ ಹೋಗಬೇಕಾ? ದೇವೇಗೌಡ ಇನ್ನು ಜೀವಂತ ಬದುಕಿದ್ದಾರೆ. 89 ವರ್ಷ ಆಗಿದ್ರು ಹೋರಾಟ ಮಾಡುತ್ತೇನೆ ಎಂದರು.

ಆ ಭಾಗಕ್ಕೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ : ಈವರೆಗೂ ನಾನು ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ. ಆದರೆ, ಸಿಂದಗಿ ಉಪಚುನಾವಣೆಗೆ ಹೋಗಿದ್ದೆ. ಸಿಂದಗಿ ಜನರು ಕಷ್ಟದಲ್ಲಿದ್ದರು. ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ಆ ಭಾಗದ ಜನರಿಗೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ. ಮನಗೊಳಿಯವರು ಸಮಾಜವಾದಿ ಜನತಾ ಪಾರ್ಟಿಯಿಂದ ನಿಂತು ಸೋತರು.

ಮತ್ತೆ ನಮ್ಮ ಪಕ್ಷಕ್ಕೆ ಬಂದು ಗೆದ್ದರು. ಅವರನ್ನು 2 ಬಾರಿ ಮಂತ್ರಿ ಕೂಡ ಮಾಡಿದ್ದೆವು. ಆದರೆ, ಈಗ ಅವರ ಮಗ ಕಾಂಗ್ರೆಸ್​ಗೆ ಹೋಗಿದ್ದನ್ನು ನಾನು ಚರ್ಚೆ ಮಾಡಲ್ಲ. ಅಲ್ಲಿನ ಜನತೆ ಮನಗೂಳಿ ಹಾಗೂ ನನ್ನ ಪ್ರತಿಮೆ ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಈ ಬಾರಿಯ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಸಿಂದಗಿಯಲ್ಲಿ ಹಿಂದೂ-ಮುಸ್ಲಿಂ ಎಂಬ ಬೇಧ ಇಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ಗಿಂತ ಹೆಚ್ಚು ಹಣವನ್ನು ಬಿಜೆಪಿ ಖರ್ಚು ಮಾಡಿದೆ : ಕಾಂಗ್ರೆಸ್‌ನವರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ಗಿಂತ ಹೆಚ್ಚು ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಒಟ್ಟು 10 ಸಾವಿರ ರೂ. ಕೊಟ್ಟಿದ್ದಾರೆ ಅಂತಾ ಚರ್ಚೆ ಇದೆ. ಕಾಂಗ್ರೆಸ್‌ನವರು ಚೆನ್ನಾಗಿ ಖರ್ಚು ಮಾಡಿದ್ದಾರೆ ಅಂತಾ ಹೇಳ್ತಾರೆ. ನಮ್ಮವರು ಎಷ್ಟು ತಗೊಂಡಿದ್ದಾರೆ ಎಂದು ನಾನು ಕೇಳಿಲ್ಲ.

ಮೂರನೇ ಸ್ಥಾನಕ್ಕೆ ಹೋಗಿದ್ದಾರೆ ಅನ್ನಿಸುತ್ತೆ. ನಾನ್ಯಾಕೆ ಸಿಂದಗಿ ಪ್ರಚಾರಕ್ಕೆ ಹೋದೆ ಅಂದ್ರೆ ಸಿಂದಗಿಯಲ್ಲಿ ಹಸಿರು ತುಂಬಿದೆ. ಅಭಿವೃದ್ಧಿಯಾಗಿದೆ. ಇದಕ್ಕೆ‌ ಯಾರು ಕಾರಣ? ಈ ಉಪಚುನಾವಣೆ ಫಲಿತಾಂಶದಿಂದ ಧೃತಿಗೆಟ್ಟಿಲ್ಲ. ಇನ್ನು ಒಂದೂವರೆ ವರ್ಷ ಹೋರಾಡುತ್ತೇನೆ. ವಿಜಯಪುರ, ಬಾಗಲಕೋಟೆ ಪ್ರದೇಶದಲ್ಲಿ 20 ಸಕ್ಕರೆ ಕಾರ್ಖಾನೆ ಕೊಟ್ಟಿದ್ದೇನೆ ಎಂದು ವಿವರಿಸಿದರು.

ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ, ಹೋರಾಡುತ್ತೇವೆ : ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ, ಹೋರಾಡುತ್ತೇವೆ. ನನ್ನ ಚುನಾವಣೆ ಸೋತ ಮೇಲೆ ಗುಬ್ಬಿ ಶ್ರೀನಿವಾಸ್ ನೇತೃತ್ವದಲ್ಲೇ ಜಿಲ್ಲಾ ಪ್ರವಾಸ ಮಾಡೋಣ ಎಂದಿದ್ದೆ. ಮಂತ್ರಿ ಆಗಿದ್ದಾಗಲೇ ಕೇಳಿದ್ದೆ. ಜನರಿಗೆ ಧನ್ಯವಾದ ಹೇಳಲು ಮುಂದಾಗಿದ್ದೆ. ಆದರೆ, ಏನಾಯಿತು? ಅಲ್ಲಿನ ಜನತೆ ಅರ್ಥ ಮಾಡಿಕೊಳ್ಳುತ್ತಾರೆ.

ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಅವರು ಅಭ್ಯರ್ಥಿ ಘೋಷಣೆ ಮಾಡಿದ್ರೆ ನಾವು ಸುಮ್ಮನೆ ಕೂರಬೇಕಾ? ನಾವು ಆಲ್ಟರ್ನೇಟಿವ್ ಹುಡುಕಬೇಕಾಗುತ್ತದೆ. ಜಿ.ಟಿ.ದೇವೇಗೌಡ ಪಕ್ಷ ಬಿಟ್ಟಿದ್ದೇನೆ ಎಂದು ಹೇಳಿದ್ದಾರಾ? ಮಕ್ಕಳು ಕೂತು ಮಾತನಾಡಿದ್ದಾರೆ. ಜಿಟಿಡಿ ಮಗ, ನಿಖಿಲ್ ಮಾತನಾಡಿದ್ದಾರೆ ಮುಂದೆ ಏನಾಗುತ್ತೆ ನೋಡೋಣ ಎಂದರು.

ಓದಿ: 'ಉಪಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ, ಜನರ ಎಚ್ಚರಿಕೆಯ ಗಂಟೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.