ETV Bharat / city

2021ರ ನೆರೆ ಸಂತ್ರಸ್ತರಿಗೆ 300 ಕೋಟಿ ರೂ. ಮನೆ ಹಾನಿ ಪರಿಹಾರ ಬಿಡುಗಡೆ

author img

By

Published : Aug 5, 2022, 6:33 AM IST

2021ನೇ ಸಾಲಿನ ಜುಲೈಯಿಂದ ನವೆಂಬರ್​ವರೆಗೆ ರಾಜ್ಯದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಮನೆಗಳಿಗೆ ಮೂಲ ಸೌಕರ್ಯ ಒದಗಿಸಲು ರಾಜ್ಯ ಸರ್ಕಾರ 300 ಕೋಟಿ ರೂ. ಮನೆ ಹಾನಿ ಪರಿಹಾರ ಅನುದಾನ ಬಿಡುಗಡೆ ಮಾಡಿದೆ.

govt
ವಿಧಾನಸೌಧ

ಬೆಂಗಳೂರು: 2021ನೇ ಸಾಲಿನ ಜುಲೈಯಿಂದ ನವೆಂಬರ್ ವರೆಗೆ ಅತಿವೃಷ್ಟಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಮನೆ ಹಾನಿ ಪರಿಹಾರವನ್ನು ಪರಿಷ್ಕೃತ ದರದಲ್ಲಿ ಪಾವತಿಸಲು 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೊದಲ ಕಂತಿನಲ್ಲಿ 'ಎ' ಮತ್ತು 'ಬಿ' ವರ್ಗದ ಮನೆ ಹಾನಿ ಪ್ರಕರಣಗಳಿಗೆ SDRF/NDRE ಮಾರ್ಗ ಸೂಚಿಯಂತೆ 95,100 ರೂ. ಗಳ ಪರಿಹಾರ ಹಾಗೂ 'ಸಿ' ವರ್ಗದ ಮನೆಗಳಿಗೆ 50,000 ರೂ.ಗಳಂತೆ ಪಾವತಿಸಲು ಒಟ್ಟು 400.86 ಕೋಟಿ ರೂ. ಬಿಡುಗಡೆಗೊಳಿಸಲಾಗಿತ್ತು. ಇದೀಗ 2021ನೇ ಸಾಲಿನ ಅತಿವೃಷ್ಟಿ/ಪ್ರವಾಹದಿಂದ ಮನೆ ಹಾನಿಗೆ ಮೊದಲ ಕಂತಿನ ಪರಿಹಾರ ಪಡೆದಿರುವ ಫಲಾನುಭವಿಗಳಿಗೆ ಜಿಪಿಎಸ್ ಆಧಾರಿತ ಪ್ರಗತಿಗನುಗುಣವಾಗಿ ಜಿಲ್ಲಾಧಿಕಾರಿಗಳು ತಂತ್ರಾಂಶದಲ್ಲಿ ನಮೂದಿಸಿರುವ 53,368 ಫಲಾನುಭವಿಗಳ ಮನೆಗಳಿಗೆ ಬಿಡುಗಡೆ ಮಾಡಲು 500 ಕೋಟಿ ರೂ. ಅನುದಾನ‌ ಅಗತ್ಯವಿತ್ತು.

ಈ ಹಿನ್ನೆಲೆ ಸರ್ಕಾರ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ 2021ನೇ ಸಾಲಿನ ಜುಲೈಯಿಂದ ನವೆಂಬರ್​ವರೆಗೆ ಅತಿವೃಷ್ಟಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೆ ಮನೆ ಹಾನಿ ಪರಿಹಾರವನ್ನು ಪರಿಷ್ಕೃತ ದರದಲ್ಲಿ ಪಾವತಿಸಲು 300 ಕೋಟಿ ರೂ. ಬಿಡುಗಡೆ ಮಾಡಿದ್ದು, ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲೂ ಸ್ಕ್ರ್ಯಾಪ್ ನೀತಿ ಜಾರಿ: 15 ವರ್ಷಕ್ಕಿಂತ ಹಳೆಯ ವಾಹನಗಳಿನ್ನು ಗುಜರಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.