ETV Bharat / city

ನಾ ಹಣ ಕೊಟ್ಟಿಲ್ಲ ಅಂದ್ರೆ ಪೂರಕ ಅಂದಾಜು ಯಾಕಿರೋದು?; ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

author img

By

Published : Sep 20, 2021, 3:12 PM IST

ex cm siddaramaiah, hd kumaraswamy talking in assembly
ನಾನು ಹಣ ಕೊಟ್ಟಿಲ್ಲ ಅಂದರೆ ಪೂರಕ ಅಂದಾಜು ಯಾಕಿರೋದು?; ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಅನ್ನಭಾಗ್ಯಕ್ಕೂ ನಾನೇ ಹಣ ಕೊಟ್ಟೆ ಅಂದಿದ್ದೀರಿ. ಒಂದೊಮ್ಮೆ ನಾನು ಹಣ ಕೊಟ್ಟಿಲ್ಲ ಅಂದರೆ ಪೂರಕ ಅಂದಾಜು ಯಾಕಿರೋದು? ಪೂರಕ ಅಂದಾಜಿನಲ್ಲಿ ಹಣ ಕೊಡೋದಕ್ಕೆ ಅವಕಾಶ ಇದೆ. ಯಾವುದೇ ಸರ್ಕಾರ ಬಂದರೂ ಹಿಂದಿನ ಸರ್ಕಾರದ ಯೋಜನೆ ಮುಂದುವರಿಸಬೇಕು. ಅದು ಸರ್ಕಾರದ ಜವಾಬ್ದಾರಿಯೂ ಆಗಿರಬೇಕು. ಸದನಕ್ಕೆ ಸುಮ್ಮನೆ ಸುಳ್ಳು ಮಾಹಿತಿ ಕೊಡಬೇಡಿ..

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ‌ ನಡುವಿನ ಜಟಾಪಟಿಗೆ ವಿಧಾನಸಭೆ ಅಧಿವೇಶನ ಸಾಕ್ಷಿಯಾಯಿತು. ಪ್ರಶ್ನೋತ್ತರ ವೇಳೆ ವಸತಿ ಯೋಜನೆ ಸಂಬಂಧ ಚರ್ಚೆ ವೇಳೆ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಕುಮಾರಸ್ವಾಮಿಯವರೇ, ನೀವು ಸದನದಲ್ಲಿ ಹೇಳಿದ್ದನ್ನು ಕೇಳಿದ್ದೇನೆ.

ವಸತಿ ಯೋಜನೆಗೆ ಹಣ ಕೊಟ್ಟಿಲ್ಲ, ನಾನು ಕೊಟ್ಟಿದ್ದೇನೆ ಎಂದಿದ್ದೀರಿ‌. ಆಗ ಇದ್ದಿದ್ದು ನಿಮ್ಮ ಸರ್ಕಾರ ಅಲ್ಲ. ಸಮ್ಮಿಶ್ರ ಸರ್ಕಾರ. ನೀವು ಕೊಟ್ಟಿದ್ದಲ್ಲ. ಸಮ್ಮಿಶ್ರ ಸರ್ಕಾರ ಕೊಟ್ಟಿದ್ದು ಎಂದು ಟಾಂಗ್ ನೀಡಿದರು.

ನಾನು ಹಣ ಕೊಟ್ಟಿಲ್ಲ ಅಂದರೆ ಪೂರಕ ಅಂದಾಜು ಯಾಕಿರೋದು?; ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

ಅನ್ನಭಾಗ್ಯಕ್ಕೂ ನಾನೇ ಹಣ ಕೊಟ್ಟೆ ಅಂದಿದ್ದೀರಿ. ಒಂದೊಮ್ಮೆ ನಾನು ಹಣ ಕೊಟ್ಟಿಲ್ಲ ಅಂದರೆ ಪೂರಕ ಅಂದಾಜು ಯಾಕಿರೋದು? ಪೂರಕ ಅಂದಾಜಿನಲ್ಲಿ ಹಣ ಕೊಡೋದಕ್ಕೆ ಅವಕಾಶ ಇದೆ. ಯಾವುದೇ ಸರ್ಕಾರ ಬಂದರೂ ಹಿಂದಿನ ಸರ್ಕಾರದ ಯೋಜನೆ ಮುಂದುವರಿಸಬೇಕು. ಅದು ಸರ್ಕಾರದ ಜವಾಬ್ದಾರಿಯೂ ಆಗಿರಬೇಕು. ಸದನಕ್ಕೆ ಸುಮ್ಮನೆ ಸುಳ್ಳು ಮಾಹಿತಿ ಕೊಡಬೇಡಿ ಎಂದರು.

ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ವಸತಿ ಸಮಸ್ಯೆ ಬಗ್ಗೆ ಎಲ್ಲಾ ಚರ್ಚೆ ಆಗಲಿ ಅಂತಾ ನಾನು ಮಾತಾಡಿದ್ದೇನೆ. ಯಾವುದೇ ದುರುದ್ದೇಶದಿಂದ ನಾನು ಮಾತಾಡಿರಲಿಲ್ಲ. ನನಗೂ ಗೊತ್ತಿದೆ, ಯಾವುದೇ ಸರ್ಕಾರ ಬಂದರೂ ಹಿಂದಿನದು ಜಾರಿಯಾಗಬೇಕು. ವಸತಿ ಯೋಜನೆಯಲ್ಲಿ ಸಮಸ್ಯೆಯಾಗಿರೋದನ್ನು ಹೇಳಿದ್ದೇನೆ ಅಷ್ಟೇ ಎಂದು ಹೇಳಿದರು.

ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಯಾವ ಸರ್ಕಾರದ ಅವಧಿಯಲ್ಲಿ ಏನೇನಾಗಿದೆ ಅಂತಾ ದಾಖಲೆ ಇಡಿ. ಕಟ್ಟಿದ ಮನೆ ಎಷ್ಟು? ಎಷ್ಟು ಕೊರತೆಯಾಗಿದೆ ಅಂತಾ ಸದನಕ್ಕೆ ದಾಖಲೆ ಇಡಿ. ಕುಮಾರಸ್ವಾಮಿ ಅವರೇ ನಿಮ್ಮ ಬಳಿ ಇರುವ ದಾಖಲೆ ಬಹಿರಂಗಪಡಿಸಿ. ನನ್ನ ಸರ್ಕಾರದ ಅವಧಿಯಲ್ಲಿ ಆಗಿರೋ ಕೆಲಸ, ಸಮ್ಮಿಶ್ರ ಸರ್ಕಾರದ ಅವಧಿಯ ಕೆಲಸ ಬಹಿರಂಗ ಮಾಡಿ ಎಂದು ಗುರುವಾರ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ್ದ ಟೀಕೆಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಟೀಕೆಗೆ ಎದ್ದುನಿಂತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ವೇಳೆ ನಾನು ಹಲವು ಸಭೆ ನಡೆಸಿದ್ದೇನೆ. ಪ್ರಗತಿ ಪರಿಶೀಲನೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ವಸತಿ ಯೋಜನೆಗಳಿಗೆ ಬೇಕಾದ ಹಣ 29,000 ಕೋಟಿ ರೂ. ಆದರೆ 3,000 ಕೋಟಿ ಮಾತ್ರ ಮೀಸಲಿಟ್ಟಿದ್ದರು. ಅದನ್ನು ನಾನು ಪ್ರಸ್ತಾಪಿಸಿದ್ದೇನೆ.

ಇದು ವಾಸ್ತವ ವಿಚಾರ. ಸದನದ ದಾರಿ ತಪ್ಪಿಸಬೇಡಿ. ಆರ್ಥಿಕ‌ ಇಲಾಖೆಯಿಂದ ವಾಸ್ತವಾಂಶ ಪಡೆಯಿರಿ. ಇಲ್ಲಿ ಯಾರದ್ದೋ ತೇಜೋವಧೆ ಮಾಡುವ ಉದ್ದೇಶ ಇಲ್ಲ. ಹಿಂದಿನ ಸರ್ಕಾರಗಳು ಮಾಡಿದ ಬದ್ಧತೆಯನ್ನು ಪ್ರತಿ ಸರ್ಕಾರಗಳು ಈಡೇರಿಸುವುದು ಜವಾಬ್ದಾರಿ. ವಾಸ್ತವಾಂಶವನ್ನು ಸದನದ‌ ಮುಂದೆ ಇಡಬೇಕು ಎಂದರು.

ಕಲಾಪದಲ್ಲಿ ಹೆಚ್‌ಡಿ ಕುಮಾಸ್ವಾಮಿ-ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು

ಹೊಸ ಸರ್ಕಾರ ಬಂದ ಬಳಿಕ ಮೂರು ವರ್ಷದಲ್ಲಿ ಮನೆ ಹಂಚಿಕೆ ಬಗ್ಗೆ ಅಸಮಾಧಾನ ಇದೆ. ವಸತಿ ಇಲಾಖೆಯ ಅಧಿಕಾರಿಗಳ ಸಭೆ ಮಾಡಿ ದಾಖಲೆ ಸದನಕ್ಕೆ ಇಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಸಲಹೆ ನೀಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವಸತಿ ಸಚಿವ ವಿ.ಸೋಮಣ್ಣ, ವಸತಿ ಯೋಜನೆಯ ಎಲ್ಲಾ ಸಮಸ್ಯೆಗಳು ನನ್ನ ಗಮನದಲ್ಲಿದೆ. ಸದನದಲ್ಲಿ ವಿಸ್ತೃತವಾದ ವಿವರ ಕೊಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.