ETV Bharat / city

ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ; 659ಕ್ಕೆ ಏರಿದ ಸೋಂಕಿತರ ಸಂಖ್ಯೆ

author img

By

Published : May 5, 2020, 12:58 PM IST

ಇಂದು ಬೆಂಗಳೂರಿನಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 324 ಮಂದಿ ಗುಣಮುಖರಾಗಿದ್ದಾರೆ.

corona
ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 659ಕ್ಕೆ ಏರಿದೆ. ಇಂದು 8 ಹೊಸ ಪಾಸಿಟಿವ್ ಕೇಸ್​ಗಳು ವರದಿಯಾಗಿದ್ದು, ವಿಜಯಪುರದಲ್ಲಿ 62 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.‌‌

ಒಟ್ಟಾರೆ ಈವರೆಗೆ ರಾಜ್ಯದಲ್ಲಿ 28 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಇಂದು ಬೆಂಗಳೂರಿನಲ್ಲಿ 3, ಬಾಗಲಕೋಟೆಯಲ್ಲಿ 2, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇಂದು ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 324 ಮಂದಿ ಗುಣಮುಖರಾಗಿದ್ದಾರೆ.

ಹೊಸ ಸೋಂಕಿತರ ಮಾಹಿತಿ ಇಲ್ಲಿದೆ...

  1. ರೋಗಿ-652: ಬೆಂಗಳೂರಿನ 30 ವರ್ಷದ ಮಹಿಳೆಗೆ ಸೋಂಕು. ಸಂಪರ್ಕ ಮಾಹಿತಿಯನ್ನು ಪತ್ತೆ ಹಚ್ಚಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
  2. ರೋಗಿ-653: ಬೆಂಗಳೂರಿನ 34 ವರ್ಷದ ವ್ಯಕ್ತಿಗೆ ಸೋಂಕು. ರೋಗಿ-420 ಸಂಪರ್ಕ, ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
  3. ರೋಗಿ-654: ಬೆಂಗಳೂರಿನ 45 ವರ್ಷದ ವ್ಯಕ್ತಿಗೆ ಸೋಂಕು.. ILI ಇದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ.
  4. ರೋಗಿ-655: ಬಾಗಲಕೋಟೆಯ 29 ವರ್ಷದ ಮಹಿಳೆಗೆ ಸೋಂಕು. ರೋಗಿ-367-368 ರ ಸಂಪರ್ಕ ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
  5. ರೋಗಿ-656: ಬಾಗಲಕೋಟೆಯ 29 ವರ್ಷದ ವ್ಯಕ್ತಿಗೆ ಸೋಂಕು. ರೋಗಿ-367-368ರ ಸಂಪರ್ಕ ಬಾಗಲಕೋಟೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
  6. ರೋಗಿ-657: ಬಳ್ಳಾರಿಯ 43 ವರ್ಷದ ವ್ಯಕ್ತಿಗೆ ಸೋಂಕು. ಉತ್ತರಾಖಂಡಕ್ಕೆ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಬಳ್ಳಾರಿಯಲ್ಲಿ ಚಿಕಿತ್ಸೆ ಮುಂದುವರಿದೆ.
  7. ರೋಗಿ-658: ದಕ್ಷಿಣ ಕನ್ನಡದ 51 ವರ್ಷದ ವ್ಯಕ್ತಿಗೆ ಸೋಂಕು. ರೋಗಿ-536ರ ಸಂಪರ್ಕ. ದಕ್ಷಿಣ ಕನ್ನಡದಲ್ಲಿ ಚಿಕಿತ್ಸೆ.
  8. ರೋಗಿ-659: ಭಟ್ಕಳದ ಉತ್ತರ ಕನ್ನಡ 28 ‌ವರ್ಷದ ವ್ಯಕ್ತಿಗೆ ಸೋಂಕು.. ILI ಇದ್ದು, ಉತ್ತರ ಕನ್ನಡದಲ್ಲಿ ಚಿಕಿತ್ಸೆ ಮುಂದುವರಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.