ETV Bharat / city

ಚರ್ಚ್ ಪ್ರಾರ್ಥನೆಯಲ್ಲಿ ಪೊಲೀಸ್​​​ ಆಯುಕ್ತರು ಭಾಗಿ:  ಕೊರೊನಾ ನಿಯಮ ಉಲ್ಲಂಘನೆ ಆರೋಪ

author img

By

Published : May 12, 2020, 12:37 PM IST

Updated : May 12, 2020, 12:50 PM IST

Bhaskar Rao
ಭಾಸ್ಕರ್​ ರಾವ್

ಲಾಕ್​ಡೌನ್​ ನಡುವೆಯೂ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಚರ್ಚ್​ವೊಂದರ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರು: ಲಾಕ್​ಡೌನ್​ ಸಂದರ್ಭದಲ್ಲಿ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಚರ್ಚ್​ವೊಂದರ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಚರ್ಚ್​ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ಆಯುಕ್ತ ಭಾಸ್ಕರ್​ ರಾವ್​

ಈಗಾಗಲೇ ಲಾಕ್​ಡೌನ್​ ಸಡಿಲಿಕೆ ಇದ್ದರೂ ದೇವಸ್ಥಾನ, ಮಸೀದಿ, ಮಂದಿರ, ಚರ್ಚ್​ಗಳಲ್ಲಿ ಪ್ರಾರ್ಥನೆ ಪೂಜೆ ನಡೆಸಲು ಅವಕಾಶವಿಲ್ಲ ಎಂದು ಸಿಲಿಕಾನ್ ಸಿಟಿ ಜನತೆಗೆ ನಗರ ಆಯುಕ್ತ ಆದೇಶ ಕೊಟ್ಟು ಮತ್ತೆ ಅವರೇ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಯಮ ಉಲ್ಲಂಘನೆ ಮಾಡಿಲ್ಲ: ಭಾಸ್ಕರ್​ ರಾವ್​​​​

ಇನ್ನು ಇದರ ಬಗ್ಗೆ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿ ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಿದಾಡ್ತಿದೆ. ಈ ಸಂದರ್ಭದಲ್ಲಿ ಚರ್ಚ್, ದೇವಸ್ಥಾನ, ಮಸೀದಿ ಮುಖಂಡರ ಸಹಕಾರ ನಮಗೆ ಅಗತ್ಯ. ಹಾಗಾಗಿ ಎಲ್ಲ ಸಮುದಾಯದ ಮುಖಂಡರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಹಾಗೆ ಸಮುದಾಯದ ಜೊತೆ ಕೊರೊನ ಪರಿಹಾರಕ್ಕಾಗಿ ಪ್ರಾರ್ಥಿಸಿದ್ದೇನೆ ಎಂದು ಸ್ಪಷ್ಟನೆ ಸಹ ಕೊಟ್ಟಿದ್ದಾರೆ.

Last Updated :May 12, 2020, 12:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.