ಬೆಳ್ಳಂಬೆಳಗ್ಗೆ ಎಸಿಬಿ ಶಾಕ್ : ರಾಜ್ಯದ 80 ಕಡೆ 21 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ

author img

By

Published : Jun 17, 2022, 8:43 AM IST

Updated : Jun 17, 2022, 8:56 AM IST

ಎಸಿಬಿ ದಾಳಿ

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಮಾಡಿದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದೆ. ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಅಧಿಕಾರಿಗಳ ತಂಡ 21 ಮಂದಿ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಅಧಿಕಾರಿಗಳ ತಂಡ 21 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದು, ಬಿಸಿ ಮುಟ್ಟಿಸಿದೆ.

ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಬೆಳಗ್ಗೆ ಆರು ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಸಂಬಂಧ ದಾಳಿ ನಡೆದಿದ್ದು, ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಎಸಿಬಿ ದಾಳಿ ಮಾಡಿದೆ. ಬೆಂಗಳೂರಿನ ಜೆಪಿ ನಗರ, ಬಸವನಗುಡಿ, ಚಂದ್ರಾ ಲೇಔಟ್ ಹಾಗೂ ದೊಡ್ಡಕಲ್ಲಸಂದ್ರದಲ್ಲಿ ದಾಳಿ ನಡೆದಿದೆ.

ಎಸಿಬಿ ದಾಳಿ ಮಾಡಿದ ಅಧಿಕಾರಿಗಳ ವಿವರ ಈ ಕೆಳಗಿನಂತಿವೆ:

  1. ಭೀಮಾ ರಾವ್ ವೈ ಪವಾರ್ (ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ)
  2. ಹರೀಶ್ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ)
  3. ರಾಮಕೃಷ್ಣ ಎಚ್ .ವಿ. (ಎಇಇ, ಸಣ್ಣ ನೀರಾವರಿ, ಹಾಸನ)
  4. ರಾಜೀವ್ ಪುರಸಯ್ಯ ನಾಯಕ್ (ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಕಾರವಾರ)
  5. ಬಿ ಆರ್ ಬೋಪಯ್ಯ (ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್)
  6. ಮಧುಸೂಧನ್ (ಜಿಲ್ಲಾ ನೋಂದಣಾಧಿಕಾರಿ, IGR ಕಚೇರಿ, ಬೆಳಗಾವಿ)
  7. ಪರಮೇಶ್ವರಪ್ಪ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ, ಹೂವಿನಹಡಗಲಿ)
  8. ಯಲ್ಲಪ್ಪ ಎನ್ ಪಡಸಾಲಿ (RTO, ಬಾಗಲಕೋಟೆ)
  9. ಶಂಕರಪ್ಪ ನಾಗಪ್ಪ ಗೋಗಿ ( ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ)
  10. ಪ್ರದೀಪ್ ಎಸ್ ಆಲೂರ್ ( ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ, RDPR, ಗದಗ)
  11. ಸಿದ್ದಪ್ಪ ಟಿ. (ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು)
  12. ತಿಪ್ಪಣ್ಣ ಪಿ ಸಿರಸಗಿ ( ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್)
  13. ಮೃತುಂಜಯ ಚೆನ್ನಬಸಯ್ಯ ತಿರಾಣಿ ( ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್)
  14. ಮೋಹನ್ ಕುಮಾರ್ (ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ)
  15. ಶ್ರೀಧರ್ (ಜಿಲ್ಲಾ ನೋಂದಣಾಧಿಕಾರಿ, ಕಾರವಾರ)
  16. ಮಂಜುನಾಥ್ ಜಿ (ನಿವೃತ್ತ ಇಇ. PWD)
  17. ಶಿವಲಿಂಗಯ್ಯ (ಸಿ ಗ್ರೂಪ್​, ಬಿಡಿಎ)
  18. ಉದಯ ರವಿ ( ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ)
  19. ಬಿ. ಜಿ.ತಿಮ್ಮಯ್ಯ ( ಕೇಸ್ ವರ್ಕರ್, ಕಡೂರು ಪುರಸಭೆ)
  20. ಚಂದ್ರಪ್ಪ ಸಿ ಹೋಳೇಕರ್ (UTP ಕಚೇರಿ, ರಾಣೆಬೆನ್ನೂರು)
  21. ಜನಾರ್ದನ್ (ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ), ಬೆಂಗಳೂರು).

ಇದನ್ನೂ ಓದಿ: ಮದುವೆ ರದ್ದಾದ ನಂತರ ಸ್ತ್ರೀಧನ ಹಿಂದಿರುಗಿಸದ ಪ್ರಕರಣ; ವಿಚಾರಣೆಗೆ ಅರ್ಹ ಎಂದ ಹೈಕೋರ್ಟ್

Last Updated :Jun 17, 2022, 8:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.