ETV Bharat / city

ದಾಖಲೆಯ ಮಟ್ಟದಲ್ಲಿ ಸೋಂಕಿತರು ಡಿಸ್ಚಾರ್ಜ್: 9,464 ಮಂದಿಗೆ ಪಾಸಿಟಿವ್ ದೃಢ

author img

By

Published : Sep 11, 2020, 8:05 PM IST

Updated : Sep 11, 2020, 8:44 PM IST

ರಾಜ್ಯದಲ್ಲಿ ಇಂದು 9,464 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 12,545 ಮಂದಿ ಡಿಸ್ಚಾರ್ಜ್​ ಆಗಿದ್ದಾರೆ. ಕೊರೊನಾದಿಂದ 130 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

Coronavirus update
ಕೊರೊನಾ ವೈರಸ್​

ಬೆಂಗಳೂರು: ರಾಜ್ಯದಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಕೂಡ ರೇಸ್​​​ಗೆ ಇಳಿದ ಕುದುರೆಯಂತೆ ಓಡುತ್ತಿದೆ.

ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಒಂದೇ ದಿನ 12 ಸಾವಿರ (12,545) ಗಡಿದಾಟಿದ್ದು, ಈ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈ ಹಿಂದೆ 9 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದರು.

ಇತ್ತ 9,464 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,40,411ಕ್ಕೆ ತಲುಪಿದೆ. 130 ಬಲಿಯಾಗಿದ್ದು, ಅದರ ಸಂಖ್ಯೆ 7,067ಕ್ಕೆ ಏರಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ.

ಈವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ 3,34,999 ಮಂದಿ ಗುಣಮುಖರಾಗಿದ್ದು, ಸಕ್ರಿಯ 98,326 ಪ್ರಕರಣಗಳಿವೆ. 770 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ 4,93,649 ಮಂದಿ ಹೋಮ್​​ ಕ್ವಾರೆಂಟೈನ್​​ನಲ್ಲಿ ಇದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 6,01,817, ದ್ವಿತೀಯ ಸಂಪರ್ಕದಲ್ಲಿ 5,41,290 ಮಂದಿ ಇದ್ದಾರೆ.

Last Updated : Sep 11, 2020, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.