ETV Bharat / business

ಜಿಎಸ್​ಟಿ ಸಂಗ್ರಹ : ಖಜಾನೆಗೆ ಬಂತು ದಾಖಲೆಯ ಮೊತ್ತ.. ಇದು ಎರಡನೇ ಅತಿ ಹೆಚ್ಚು ಜಿಎಸ್​ಟಿ ಕಲೆಕ್ಷನ್​

author img

By

Published : Nov 1, 2022, 4:30 PM IST

ಅಕ್ಟೋಬರ್ 2022 ರ ಆದಾಯವು ಎರಡನೇ ಅತ್ಯಧಿಕ ಮಾಸಿಕ ಸಂಗ್ರಹವಾಗಿದೆ. ಏಪ್ರಿಲ್ 2022ರ ಸಂಗ್ರಹದ ನಂತರ ಮತ್ತು ಇದು ಎರಡನೇ ಬಾರಿಗೆ ಒಟ್ಟು GST ಸಂಗ್ರಹವು 1.50ಲಕ್ಷ ಕೋಟಿಯ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Second highest collection of gross GST revenue in Oct
ಜಿಎಸ್​ಟಿ ಸಂಗ್ರಹ : ಖಜಾನೆಗೆ ಬಂತು ದಾಖಲೆಯ ಮೊತ್ತ.. ಇದು ಎರಡನೇ ಅತಿ ಹೆಚ್ಚು ಜಿಎಸ್​ಟಿ ಕಲೆಕ್ಷನ್​

ನವದೆಹಲಿ: ಜಿಎಸ್​​ಟಿಯಿಂದ ಸಂಗ್ರಹವಾಗುತ್ತಿರುವ ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ 18 ಪ್ರತಿಶತದಷ್ಟು ಏರಿಕೆಯಾಗಿದೆ. ಅಕ್ಟೋಬರ್ 2022 ರಲ್ಲಿ 1,51,718 ಕೋಟಿ ರೂ. ಸಂಗ್ರವಾಗಿದೆ. ಈ ಸಂಗ್ರಹ ಜಿಎಸ್​ಟಿ ಜಾರಿ ಬಂದಾಗಿನಿಂದ ಸಂಗ್ರಹವಾದ ಎರಡನೇ ಅತಿದೊಡ್ಡ ಮೊತ್ತವಾಗಿದೆ.

ಅಕ್ಟೋಬರ್ 2022 ರ ಆದಾಯವು ಎರಡನೇ ಅತ್ಯಧಿಕ ಮಾಸಿಕ ಸಂಗ್ರಹವಾಗಿದೆ. ಏಪ್ರಿಲ್ 2022ರ ಸಂಗ್ರಹದ ನಂತರ ಮತ್ತು ಇದು ಎರಡನೇ ಬಾರಿಗೆ ಒಟ್ಟು GST ಸಂಗ್ರಹವು 1.50ಲಕ್ಷ ಕೋಟಿಯ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ಆದಾಯದಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ಯಿಂದ 26,039 ಕೋಟಿ ರೂ., ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಯಿಂದ 33,396 ಕೋಟಿ ರೂ ಹಾಗೂ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಯಿಂದ 81,778 ಕೋಟಿ ಮತ್ತು ಸರಕುಗಳ ಆಮದಿನ ಮೇಲೆ 37,297 ಕೋಟಿ ರೂ ಜಿಎಸ್​​ಟಿ ಸಂಗ್ರಹಿಸಲಾಗಿದೆ. ಅದಷ್ಟೇ ಅಲ್ಲದೇ 10,505 ಕೋಟಿ ರೂ ಸೆಸ್​ ಸಂಗ್ರಹವಾಗಿದೆ ಎಂದು ಆರ್ಥಿಕ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.

ಅಕ್ಟೋಬರ್ 2022ರ ಏಪ್ರಿಲ್ ನಂತರದ ದೇಶೀಯ ವಹಿವಾಟುಗಳಿಂದ ಎರಡನೇ ಅತಿ ಹೆಚ್ಚು ಸಂಗ್ರಹ ಇದಾಗಿದೆ. ಇದು ಒಂಬತ್ತನೇ ತಿಂಗಳು ಮತ್ತು ಸತತ ಎಂಟು ತಿಂಗಳುಗಳವರೆಗೆ, ಮಾಸಿಕ ಜಿಎಸ್‌ಟಿ ಆದಾಯವು 1.4ಲಕ್ಷ ಕೋಟಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ. ಸೆಪ್ಟೆಂಬರ್ 2022 ರಲ್ಲಿ 8.3 ಕೋಟಿ ಇ-ವೇ ಬಿಲ್‌ಗಳನ್ನು ರಚಿಸಲಾಗಿದೆ. ಇದು ಆಗಸ್ಟ್ 2022 ರಲ್ಲಿ ಉತ್ಪತ್ತಿಯಾದ 7.7 ಕೋಟಿ ಇ-ವೇ ಬಿಲ್‌ಗಳಿಗಿಂತ ಗಮನಾರ್ಹವಾಗಿ ಏರಿಕೆ ಕಂಡಿರುವುದು ಗೊತ್ತಾಗುತ್ತಿದೆ.

ಇದನ್ನು ಓದಿ: ಪಿಎಫ್​ ಸದಸ್ಯರಿಗೆ ಗುಡ್​ನ್ಯೂಸ್​.. ನಿವೃತ್ತಿಗೆ 6 ತಿಂಗಳ ಮೊದಲೇ ಪಿಂಚಣಿ ಹಣ ಪಡೆಯಲು ಅವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.