ETV Bharat / business

2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ಶೇ 7.7ಕ್ಕೆ ಕಡಿತ

author img

By

Published : Sep 1, 2022, 3:33 PM IST

ಭಾರತದ ಆರ್ಥಿಕ ಬೆಳವಣಿಗೆ ದರ ಕುಸಿತವಾಗಲಿದೆ ಎಂದು ಮೂಡೀಸ್ ಹೇಳಿದೆ. ಹೆಚ್ಚುತ್ತಿರುವ ಬಡ್ಡಿದರಗಳು, ಅಸಮ ಮಾನ್ಸೂನ್ ಮತ್ತು ಜಾಗತಿಕ ಬೆಳವಣಿಗೆಗಳ ನಿಧಾನಗತಿಯ ಕಾರಣದಿಂದ ಮುಂಬರುವ ತ್ರೈಮಾಸಿಕಗಳಲ್ಲಿ ಆರ್ಥಿಕ ವೇಗವನ್ನು ಕುಗ್ಗಿಸಲಿದೆ ಎಂದು ಹೇಳಿದೆ.

2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜು ಶೇ 7.7ಕ್ಕೆ ಕಡಿತ
India's economic growth is estimated to slow to 7.7 in 2022

ನವದೆಹಲಿ: ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಗುರುವಾರ 2022 ರ ಭಾರತದ ಆರ್ಥಿಕ ಬೆಳವಣಿಗೆಯ ಪ್ರಕ್ಷೇಪಣವನ್ನು ಶೇಕಡಾ 7.7 ಕ್ಕೆ ಕಡಿತಗೊಳಿಸಿದೆ. ಹೆಚ್ಚುತ್ತಿರುವ ಬಡ್ಡಿ ದರಗಳು, ಅಸಮ ಮಾನ್ಸೂನ್ ಮತ್ತು ಜಾಗತಿಕ ಬೆಳವಣಿಗೆಯನ್ನು ನಿಧಾನಗತಿಗಳ ಕಾರಣದಿಂದ ಮುಂಬರುವ ತ್ರೈಮಾಸಿಕಗಳಲ್ಲಿ ಆರ್ಥಿಕ ಆವೇಗ ಕುಗ್ಗಿಸಲಿದೆ ಎಂದು ಹೇಳಿದೆ. ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆಯನ್ನು ಮೇ ನಲ್ಲಿ ಶೇ 8.8ಕ್ಕೆ ಅಂದಾಜು ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈಗಿನ ಅಂದಾಜು ಶೇ 1.1 ರಷ್ಟು ಕಡಿತಗೊಂಡಿದೆ.

2020ರಲ್ಲಿ ಕೊರೊನಾ ಸಾಂಕ್ರಾಮಿಕ ಹೊಡೆತದ ನಂತರ ಆರ್ಥಿಕ ಬೆಳವಣಿಗೆ ಶೇ 6.7ಕ್ಕೆ ಸಂಕುಚಿತವಾಗಿತ್ತು. ನಂತರ 2021ರಲ್ಲಿ ಶೇ 8.3 ಆರ್ಥಿಕ ಬೆಳವಣಿಗೆ ದಾಖಲಾಗಿತ್ತು. ಭಾರತೀಯ ರಿಸರ್ವ ಬ್ಯಾಂಕ್ ಈ ವರ್ಷ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, 2023 ರಲ್ಲಿ ದೇಶೀಯ ಹಣದುಬ್ಬರದ ಒತ್ತಡ ಮತ್ತಷ್ಟು ಹೆಚ್ಚಾಗುವುದನ್ನು ತಡೆಯಲು ಬಿಗಿಯಾದ ನೀತಿಯನ್ನು ಅಳವಡಿಸಿಕೊಳ್ಳಬಹುದು ಎಂದು ಮೂಡೀಸ್ ಹೇಳಿದೆ.

2021ರಲ್ಲಿ ಶೇ 8.3 ರಷ್ಟು ಇದ್ದ ಆರ್ಥಿಕ ಬೆಳವಣಿಗೆ ದರ 2022ರಲ್ಲಿ ಶೇ 8.3ಕ್ಕೆ ಕುಸಿಯುವ ಸಾಧ್ಯತೆಗಳಿವೆ. ಇದು ಮತ್ತಷ್ಟು ಕುಸಿತಗೊಂಡು 2023ರಲ್ಲಿ ಶೇ 5.2ಕ್ಕೆ ಇಳಿಯಬಹುದು. ಜೂನ್ ತ್ರೈಮಾಸಿಕದಲ್ಲಿ ಭಾರತವು ತನ್ನ ಜಿಡಿಪಿ ಅಂದಾಜನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಮೂಡೀಸ್ ಅಂದಾಜುಗಳು ಪ್ರಕಟವಾಗಿವೆ. ಅದರ ಪ್ರಕಾರ ಮೂರು ತಿಂಗಳ ಅವಧಿಯಲ್ಲಿ ಆರ್ಥಿಕತೆಯು ಶೇಕಡಾ 13.5 ರಷ್ಟು ವಿಸ್ತರಿಸಿದೆ.

ಇದು ಜನವರಿ - ಮಾರ್ಚ್ ಅವಧಿಯಲ್ಲಿ ಇದ್ದ ಶೇ 4.1ರ ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ. 2022-23 ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ (ಏಪ್ರಿಲ್-ಜುಲೈ) ಭಾರತದ ಆರ್ಥಿಕತೆಯು ಪ್ರಬಲ ಹಾಗೂ ವಿಶಾಲ ತಳಹದಿಯನ್ನು ಹೊಂದಿದೆ ಎಂದು ಹೆಚ್ಚಿನ ಆವರ್ತನ ಡೇಟಾ ತಿಳಿಸುತ್ತದೆ ಎಂದು ಮೂಡೀಸ್ ಹೇಳಿದೆ.

ಅಧಿಕೃತ ಜಿಡಿಪಿ ಅಂದಾಜಿನ ಪ್ರಕಾರ, ಆರ್ಥಿಕತೆಯು ಏಪ್ರಿಲ್-ಜೂನ್ 2022-23 ರಲ್ಲಿ 13.5 ಶೇಕಡಾ ವಿಸ್ತರಿಸಿದೆ. ಇದು ಹಿಂದಿನ ಮಾರ್ಚ್ ತ್ರೈಮಾಸಿಕದ ಶೇ 4.10ರ ಬೆಳವಣಿಗೆಗಿಂತ ಹೆಚ್ಚಾಗಿದೆ. ಪಿಎಂಐ, ಸಾಮರ್ಥ್ಯದ ಬಳಕೆ, ಚಲನಶೀಲತೆ, ತೆರಿಗೆ ಸಲ್ಲಿಸುವಿಕೆ ಮತ್ತು ಸಂಗ್ರಹಣೆ, ವ್ಯವಹಾರ ಗಳಿಕೆ ಮತ್ತು ಕ್ರೆಡಿಟ್ ಸೂಚಕಗಳಂತಹ ಕಠಿಣ ಮತ್ತು ಸಮೀಕ್ಷೆಯ ಮಾಹಿತಿಯ ಪ್ರಕಾರ, ಸೇವೆಗಳು ಮತ್ತು ಉತ್ಪಾದನಾ ವಲಯಗಳು ಆರ್ಥಿಕ ಚಟುವಟಿಕೆಯಲ್ಲಿ ದೃಢವಾದ ಏರಿಕೆಯನ್ನು ಕಂಡಿವೆ ಎಂದು ಮೂಡೀಸ್ ತನ್ನ ವರದಿಯಲ್ಲಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.