ETV Bharat / business

ಚಿನ್ನದ ದರ 10 ರೂ. ಇಳಿಕೆ: ಬೆಳ್ಳಿ 230 ರೂ. ಏರಿಕೆ

author img

By

Published : Apr 27, 2023, 12:16 PM IST

Gold Silver Sensex News
Gold Silver Sensex News

ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ದರ 69 ರೂಪಾಯಿ ಕಡಿಮೆಯಾಗಿ 60,192 ರೂಪಾಯಿಗೆ ತಲುಪಿತ್ತು.

ನವದೆಹಲಿ: ಇಂದು ವಾಯದಾ ಮಾರುಕಟ್ಟೆಯಲ್ಲಿ ಬೇಡಿಕೆ ಕೊರತೆಯ ಕಾರಣದಿಂದ ಚಿನ್ನದ ದರವು ಪ್ರತಿ 10 ಗ್ರಾಂ ಗೆ 69 ರೂಪಾಯಿ ಕಡಿಮೆಯಾಗಿ 60,192 ರೂಪಾಯಿಗೆ ತಲುಪಿದೆ. ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ ಪೂರೈಕೆ ಒಪ್ಪಂದದ ಬೆಲೆಯು 69 ರೂಪಾಯಿ ಅಂದರೆ ಶೇ 0.11 ರಷ್ಟು ಕಡಿಮೆಯಾಗಿ 60,192 ರೂಪಾಯಿ ಆಗಿತ್ತು. ಹಾಗೆಯೇ ಇಂದು ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಬೆಳ್ಳಿ ಬೆಲೆಯಲ್ಲಿ ಸುಮಾರು 230 ರೂ.ಗಳಷ್ಟು ಏರಿಕೆಯಾಗಿದೆ. ಇಂದು ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಬೆಳ್ಲಿಯು ರೂ 229 ಅಥವಾ 0.31 ರಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ಇಂದು ಬೆಳ್ಳಿ ಕೆಜಿಗೆ 74492 ರೂ. ಆಗಿದೆ.

ಷೇರು ಮಾರುಕಟ್ಟೆಗಳಲ್ಲಿ ಸತತ ಮೂರನೇ ದಿನ ಏರಿಕೆ: ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯ ನಡುವೆ ಸ್ಥಳೀಯ ಷೇರು ಮಾರುಕಟ್ಟೆಯಲ್ಲಿ ಆಯ್ದ ಷೇರುಗಳಲ್ಲಿನ ಉತ್ಸಾಹದ ಖರೀದಿಯಿಂದಾಗಿ ಸ್ಟ್ಯಾಂಡರ್ಡ್ ಸೂಚ್ಯಂಕಗಳು ಸತತ ಮೂರನೇ ದಿನವಾದ ಬುಧವಾರ ಲಾಭದೊಂದಿಗೆ ಮುಚ್ಚಿದವು. ಬಿಎಸ್‌ಇಯ 30 ಷೇರು ಸೂಚ್ಯಂಕ ಸೆನ್ಸೆಕ್ಸ್ 169.87 ಪಾಯಿಂಟ್‌ಗಳು ಅಥವಾ 0.28 ಶೇಕಡಾ ಏರಿಕೆಯಾಗಿ 60,300.58 ಅಂಕಗಳಿಗೆ ತಲುಪಿದೆ. ವಹಿವಾಟಿನ ವೇಳೆ ಇದು ಒಂದು ಬಾರಿ 232.08 ಪಾಯಿಂಟ್‌ಗಳವರೆಗೆ ಜಿಗಿದಿತ್ತು. ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಕೂಡ 44.35 ಪಾಯಿಂಟ್ ಅಥವಾ 0.25 ರಷ್ಟು ಏರಿಕೆ ಕಂಡು 17,813.60 ಅಂಕಗಳಿಗೆ ತಲುಪಿದೆ.

ವಿಶ್ಲೇಷಕರ ಪ್ರಕಾರ, ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್‌ನಂತಹ ದೊಡ್ಡ ಕಂಪನಿಗಳಿಂದ ಬೇಡಿಕೆಯಿಂದಾಗಿ ವ್ಯಾಪಾರ ಚಟುವಟಿಕೆಯು ಚುರುಕಾಗಿ ಉಳಿದಿದೆ. ಆದಾಗ್ಯೂ, ಮುಂದುವರಿದ ವಿದೇಶಿ ಬಂಡವಾಳದ ಹೊರಹರಿವು ಮತ್ತು ದುರ್ಬಲ ಜಾಗತಿಕ ಸೂಚನೆಗಳಿಂದಾಗಿ ಏರಿಕೆ ಪ್ರವೃತ್ತಿಯ ಮೇಲೆ ಕೊಂಚ ಪರಿಣಾಮ ಬೀರಿದೆ. ಸೆನ್ಸೆಕ್ಸ್‌ನಲ್ಲಿ ಒಳಗೊಂಡಿರುವ ಕಂಪನಿಗಳಲ್ಲಿ ಪವರ್ ಗ್ರಿಡ್ ಗರಿಷ್ಠ 2.59 ಶೇಕಡಾ ಲಾಭವನ್ನು ದಾಖಲಿಸಿದೆ. ಇದರೊಂದಿಗೆ ಇಂಡಸ್‌ಇಂಡ್ ಬ್ಯಾಂಕ್, ಲಾರ್ಸೆನ್ ಅಂಡ್ ಟೂಬ್ರೊ, ನೆಸ್ಲೆ, ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಕೂಡ ವೇಗ ಪಡೆದುಕೊಂಡವು.

ಮತ್ತೊಂದೆಡೆ, ಬಜಾಜ್ ಫಿನ್‌ಸರ್ವ್, ಎನ್‌ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 0.84 ರವರೆಗೆ ಕುಸಿದವು. ಸಮಗ್ರ ಮಾರುಕಟ್ಟೆಯಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಶೇಕಡಾ 0.97 ರಷ್ಟು ಗಳಿಸಿದರೆ ಸ್ಮಾಲ್‌ಕ್ಯಾಪ್ ಶೇಕಡಾ 1.29 ರಷ್ಟು ಗಳಿಸಿತು. ಅಮೆರಿಕದ ಮಾರುಕಟ್ಟೆಗಳ ಪ್ರಭಾವ ದೇಶೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು. ಆದಾಗ್ಯೂ, ಯುಎಸ್ ಫ್ಯೂಚರ್‌ಗಳಲ್ಲಿನ ಸುಧಾರಣೆಯಿಂದಾಗಿ ಮಾರುಕಟ್ಟೆಯ ಸ್ಥಿತಿ ಸ್ವಲ್ಪ ಸುಧಾರಿಸಿತು. ಫ್ಯೂಚರ್ಸ್ ಮತ್ತು ಆಪ್ಷನ್ಸ್​ ಕಾಂಟ್ರಾಕ್ಟ್​ಗಳ ಮಾಸಿಕ ಸೆಟ್ಲಮೆಂಟ್ ಗುರುವಾರ ನಡೆಯಲಿರುವುದರಿಂದ, ಹೂಡಿಕೆದಾರರು ತಮ್ಮ ಲಾಭಗಳನ್ನು ಉಳಿಸಿಕೊಳ್ಳಲು ನೋಡುತ್ತಿದ್ದಾರೆ.

ಬ್ರೆಂಟ್ ಕ್ರೂಡ್ ದರ ಏರಿಕೆ: ಏಷ್ಯಾದ ಇತರ ಮಾರುಕಟ್ಟೆಗಳನ್ನು ನೋಡುವುದಾದರೆ- ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಏರಿಕೆಯಲ್ಲಿ ಕೊನೆಗೊಂಡರೆ, ಜಪಾನ್‌ನ ನಿಕ್ಕಿ ಮತ್ತು ಚೀನಾದ ಶಾಂಘೈ ಕಾಂಪೋಸಿಟ್ ನಷ್ಟದಲ್ಲಿ ಉಳಿದಿವೆ. ಮಧ್ಯಾಹ್ನದ ಅವಧಿಯಲ್ಲಿ ಯುರೋಪಿಯನ್ ಮಾರುಕಟ್ಟೆಗಳು ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದವು. ಒಂದು ದಿನದ ಹಿಂದೆ ಅಮೆರಿಕದ ಮಾರುಕಟ್ಟೆಗಳಲ್ಲಿ ಭಾರಿ ಕುಸಿತ ಕಂಡುಬಂದಿತ್ತು. ಏತನ್ಮಧ್ಯೆ, ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.17 ಶೇಕಡಾ ಏರಿಕೆಯಾಗಿ 80.91 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ಬಂಡವಾಳ ಹಿಂತೆಗೆದುಕೊಳ್ಳುವುದನ್ನು ಮುಂದುವರೆಸಿದ್ದಾರೆ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ವಿದೇಶಿ ಹೂಡಿಕೆದಾರರು ಮಂಗಳವಾರ 407.35 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ : ಬಜೆಟ್​ ಶ್ರೇಣಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ಎಂಜಿ ಮೋಟಾರ್ಸ್​: ಬೆಲೆ 7.98 ಲಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.