ETV Bharat / business

ಎಲ್ಲರ ಕಣ್ಸೆಳೆಯುತ್ತಿರುವ ಫ್ಲೈಯಿಂಗ್​ ಟಾಕ್ಸಿ; ಸೂಪರ್​ನಾಲ್​ ಎಸ್​-ಎ2 ಹಾರುವ ವಾಹನ ಪರಿಚಯಿಸಿದ ಹುಂಡೈ

author img

By ETV Bharat Karnataka Team

Published : Jan 10, 2024, 2:20 PM IST

ಫ್ಲೈಯಿಂಗ್​ ಟಾಕ್ಸಿಗೆ ಸೂಕ್ತವಾದ ವಿನ್ಯಾಸ, ಸುರಕ್ಷತೆ, ಕಾರ್ಯಕ್ಷಮತೆಯ ಎಸ್​-ಎ2 ಅನ್ನು ಸೂಪರ್​ನಾಲ್​ ಹುಂಡೈ ಸಹಭಾಗಿತ್ವದೊಂದಿಗೆ ಪರಿಚಯಿಸಿದೆ.

flying-taxi-hyundai-unveils-supernal-s-a2-vehicle-that-takes-off-and-lands-vertically
flying-taxi-hyundai-unveils-supernal-s-a2-vehicle-that-takes-off-and-lands-vertically

ಹೈದರಾಬಾದ್​: ಹುಂಡೈ ಮೋಟರ್​ ಗ್ರೂಪ್​ನ ವಾಯು ಸಾರಿಗೆ ಸಂಸ್ಥೆ ಸೂಪರ್​ನಾಲ್ ಜೊತೆ ಸೇರಿ​​​​ ತಮ್ಮ ಹೊಸ ವಾಹನ ಎಸ್​-ಎ2 ಅನ್ನು ಪರಿಚಯಿಸಿದೆ. ಎಲೆಕ್ಟ್ರಿಕ್​​ ವರ್ಟಿಕಲ್​ ಟೇಕ್​ಆಫ್​ ಮತ್ತು ಲ್ಯಾಂಡಿಗ್​​ನ ಈ ವಾಹನವೂ ಸಿಇಎಸ್ ​2024ರ ಪರಿಕಲ್ಪನೆ ಹೊಂದಿದೆ. ಈ ವಾಹನದಲ್ಲಿ ಪೈಲಟ್​ ಜೊತೆಗೆ ನಾಲ್ಕು ಜನ ಪ್ರಯಾಣಿಕರು ಕೂರುವ ಅವಕಾಶ ಹೊಂದಿದೆ. ಇದು ಸುರಕ್ಷಿತ, ಪರಿಣಾಮಕಾರಿ ಮತ್ತು ಅಗ್ಗದ ದೈನಂದಿನ ಪ್ರಯಾಣಿಕರ ವಿಮಾನ ಪ್ರಯಾಣದ ವಾಹನವಾಗಿದೆ.

ಆರಂಭದಿಂದಲೂ ಸೂಪರ್​ನಾಲ್​​ ಸರಿಯಾದ ಉತ್ಪನ್ನವನ್ನು ಸರಿಯಾದ ಮಾರುಕಟ್ಟೆಗೆ ಸರಿಯಾದ ಸಮಯದಲ್ಲಿ ತರುವ ಗುರಿಯನ್ನು ಹೊಂದಿತು ಎಂದು ಸೂಪರ್​ನಾಲ್​ನ ಸಿಇಒ ಮತ್ತು ಹುಂಡೈ ಮೋಟಾರ್​ ಗ್ರೂಪ್​ನ ಅಧ್ಯಕ್ಷರಾಗಿರುವ ಜೈವೋನ್​ ಶಿನ್​ ತಿಳಿಸಿದ್ದಾರೆ.

600 ಜನರ ತಂಡವೂ ಅಗಾಧ ತಂತ್ರಜ್ಞಾನ ಮತ್ತು ಹುಂಡೈ ಮೋಟಾರ್​ ಗ್ರೂಪ್​ನ ಬ್ಯುಸಿನೆಸ್​ ಸಾಮರ್ಥ್ಯವೂ ಇದರ ನಿರ್ಮಾಣದ ಹಿಂದಿದೆ. ಹುಂಡೈ ಮೋಟಾರ್​ ಗ್ರೂಪ್​ ವಿಮಾನಯಾನ ಪೂರೈಕೆಗೆ ಜಗತ್ತಿನಾದ್ಯಂತ ನಂಬಿಕಾರ್ಹ ಕಂಪನಿ ಆಗಿದೆ. ಇದೀಗ ಸೂಪರ್​ನಾಲ್​​​​ ಆಧುನಿಕ ಕಾಲದ ವಿಮಾನವನ್ನು ನೀಡಲು ಸಿದ್ಧವಾಗಿದೆ.

ವಿಮಾನದ ತಂತ್ರಜ್ಞಾನ: ಎಸ್​-ಎ2 ಎಂಬುದು ವಿ ಟೈನ್​​ ವಿಮಾನವಾಗಿದ್ದು, ಗಂಟೆಗೆ 120 ಮೈಲಿಯಲ್ಲಿ 1,500 ಅಡಿ ಎತ್ತರದಲ್ಲಿ ಹಾರಾಟ ನಡೆಸಲಿದೆ. ಇದು ನಗರದಲ್ಲಿ 25 ರಿಂದ 40 ಮೈಲಿ ಟ್ರಿಪ್​ಗಳನ್ನು ಪ್ರಯಾಣಿಸಲಿದೆ. ಆರಂಭದಲ್ಲಿ ಇದು ಎಲೆಕ್ಟ್ರಿಕ್​​ ಪ್ರೊಪ್ಯೂಲ್ಷನ್​ ಆರ್ಕಿಟೆಕ್ಚರ್​​​ ಮತ್ತು 8 ಅಲ್​ ಟಿಟ್ಲಿಂಗ್​ ರೊಟರ್​ ಅನ್ನು ಹೊಂದಿದೆ. ಸೂಪರ್​ನಾಲ್​​ ವಾಹನವೂ ಡಿಶ್​ವಾಶರ್​ನಂತೆ ಸದ್ದಿಲ್ಲದೇ ಶಾಂತವಾಗಿ ಕಾರ್ಯ ನಿರ್ವಹಿಸುತ್ತದೆ. ಇದು 65 ಡಿಬಿ ವರ್ಟಿಕಲ್​ನಲ್ಲಿ ಟೇಕ್​ ಆಫ್​ ಆಗಲಿದ್ದು, 45 ಡಿಬಿಯಲ್ಲಿ ಅಡ್ಡಲಾಗಿ ಪ್ರಯಾಣಿಸುತ್ತದೆ.

ವಾಹನವನ್ನು ಸುರಕ್ಷತೆ ಆದ್ಯತೆ ಮೇಲೆ ವಿನ್ಯಾಸ ಮಾಡಲಾಗಿದ್ದು, ಸುಸ್ಥಿರತೆ ಮತ್ತು ಪ್ರಯಾಣಿಕರ ಆರಾಮದಾಯಕತೆಯನ್ನು ಗುರಿಯಾಗಿಸಿದೆ. ಜಾಗತಿಕ ವಾಣಿಜ್ಯ ವಿಮಾನದ ಗುಣಮಟ್ಟದ ಸುರಕ್ಷತೆಯನ್ನು ಪೂರೈಸಿದೆ. ಪವರ್‌ಟ್ರೇನ್, ಫ್ಲೈಟ್ ಕಂಟ್ರೋಲ್‌ಗಳು ಮತ್ತು ಏವಿಯಾನಿಕ್ಸ್‌ನಂತಹ ನಿರ್ಣಾಯಕ ವ್ಯವಸ್ಥೆಗಳಲ್ಲಿ ದೃಢವಾದ ಏರ್‌ಫ್ರೇಮ್ ರಚನೆ ಹೊಂದಿದೆ.

ಸೂಪರ್​ನಾಲ್​ ಉತ್ಪಾದಿತ ವಾಹನದ ಪರಿಕಲ್ಪನೆಯು ನಮ್ಮ ವಿಶ್ವದ ಅತ್ಯುತ್ತಮ ದರ್ಜೆಯ ತಂಡದ ಪರಿಶ್ರಮ ಮತ್ತು ಕ್ರಿಯಾತ್ಮಕತೆಯ ಫಲಿತಾಂಶವಾಗಿದೆ. ಎಸ್​-ಎ2 ಮುಂದಿನ ಪೀಳಿಗೆಯ ವಾಯುಯಾನದ ಎಲೆಕ್ಟ್ರಿಕ್​ ಪವರ್​​ಟ್ರೇನ್​ ಸಂಪೂರ್ಣ ಪ್ರಯೋಜನವನ್ನು ಹೊಂದಿದೆ ಎಂದು ಸೂಪರ್​ನಾಲ್​​​ ಮುಖ್ಯ ತಂತ್ರಜ್ಞಾನ ಅಧಿಕಾರಿ ಬೆನ್​ ದಿಯಚುನ್​ ತಿಳಿಸಿದ್ದಾರೆ. ಇಲ್ಲಿಂದ ನಾವು ಕ್ರಾಂತಿಕಾರಕ ವಾಣಿಜ್ಯ ಉತ್ಪಾದನೆಯನ್ನು ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಎಸ್​-ಎ2 ವಿನ್ಯಾಸ: ಸೂಪರ್​ನಾಲ್​​ ಇಂಜಿನಿಯರಿಂಗ್ ತಂಡವೂ ಹುಂಡೈ ಮೋಟರ್​ ಗ್ರೂಪ್​ ಆಟೋಮೋಟಿವ್​ ವಿನ್ಯಾಸಗಾರರೊಂದಿಗೆ ಸಹಭಾಗಿತ್ವದೊಂದಿಗೆ ಎಸ್​-ಎ2ವನ್ನು ವಿನ್ಯಾಸ ಮಾಡಿದ್ದಾರೆ. ಕಾರ್ಯಾಚರಣೆಯೊಂದಿಗೆ ವಿನ್ಯಾಸವನ್ನು ಸೇರಿಸಿದ್ದು, ಇದು ವಾಯುಯಾನ ಕಾರ್ಯಾಚರಣೆಯನ್ನು ಆಕರ್ಷಿಸಲಿದೆ. ಅಲ್ಲದೆ ಎಎಂ ಪ್ರಯಾಣಿಕರ ಅನುಭವದ ಆದ್ಯತೆಗೆ ರಚಿಸಲಾಗಿದೆ. ಇದಕ್ಕಾಗಿ ವಿಭಿನ್ನ ಬಣ್ಣಗಳು ಪ್ಯಾಲೆಟ್​​ ಮತ್ತು ವಸ್ತುಗಳನ್ನು ಬಳಕೆ ಮಾಡುವ ಮೂಲಕ ವಾಹನದ ಪೈಲಟ್​ ಮತ್ತು ಪ್ರಯಾಣಿಕರ ವಿಭಾಗವನ್ನು ವಿನ್ಯಾಸ ಮಾಡಲಾಗಿದೆ.

ವಾಯುಯಾನದ ಗ್ರೇಡ್​​, ಶಕ್ತಿ ಹೀರುಕೊಳ್ಳುವಿಕೆಯ ಸಂಯೋಜನೆಯನ್ನು ಸೀಟುಗಳಲ್ಲಿ ಅಂತರ್ಗತವಾಗಿಸಲಾಗಿದೆ. ಒಟ್ಟಾರೆ ಶುಚಿತ್ವ ಮತ್ತು ಕನಿಷ್ಠ ವಿನ್ಯಾಸದ ಕೊಡುಗೆ ನೀಡಲಾಗಿದೆ. ಸೂಪರ್‌ನಾಲ್‌ನ ಅತ್ಯುತ್ತಮ ಏರೋಸ್ಪೇಸ್ ಎಂಜಿನಿಯರ್‌ಗಳು ಮತ್ತು ಹ್ಯುಂಡೈ ಮೋಟಾರ್ ಗ್ರೂಪ್‌ನ ವಿಶ್ವ ಪ್ರಸಿದ್ಧ ಆಟೋಮೋಟಿವ್ ವಿನ್ಯಾಸಕರ ಸಾಮರ್ಥ್ಯದ ಮೇಲೆ ಇದನ್ನು ವಿನ್ಯಾಸ ಮಾಡಲಾಗಿದ್ದು, ಇದು ಪ್ರಯಾಣಿಕರ ಅನುಭವ ಮತ್ತು ಸುರಕ್ಷತೆಗೆ ಒತ್ತು ನೀಡುತ್ತದೆ ಎಂದು ಹುಂಡೈ ಮೋಟಾರ್ ಗ್ರೂಪ್ ಮುಖ್ಯ ವಿನ್ಯಾಸಾಧಿಕಾರಿ ಲುಕ್​ ಡಾನ್ಕರ್ವೊಲ್ಕೆ ತಿಳಿಸಿದರು.

ಇದನ್ನೂ ಓದಿ: ಅಮೆರಿಕದ ಚಂದ್ರಯಾನ ನೌಕೆಯಲ್ಲಿ ಇಂಧನ ಸೋರಿಕೆ: ಫೆಬ್ರವರಿ 23 ರ ಲ್ಯಾಂಡಿಂಗ್ ಅನುಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.