ETV Bharat / business

6 ವರ್ಷಗಳ ಬಳಿಕ ಕುಸಿದ ಏರ್​ ಟ್ರಾಫಿಕ್​,ಕಾರಣ ಏನು ಗೊತ್ತೆ?

author img

By

Published : May 4, 2019, 7:34 PM IST

ಸಾಂದರ್ಭಿಕ ಚಿತ್ರ

2019ರ ಮಾರ್ಚ್​ನಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ. 2018ರ ಮಾರ್ಚ್​ ತಿಂಗಳಲ್ಲಿ 2.85 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದಿದ್ದರು. ಆದರೆ, 2019ರ ಈ ವೇಳೆ 2.81 ಕೋಟಿ ಜನರು ಪ್ರಯಾಣಿಸಿದ್ದಾರೆ.

ನವದೆಹಲಿ: ಸದಾ ಗಿಜಿಗಿಡುತ್ತಿದ್ದ ದೇಶದ ಏರ್​ ಟ್ರಾಫಿಕ್​ ಆರು ವರ್ಷಗಳ ಬಳಿಕ ತೀವ್ರ ಪ್ರಮಾಣದಲ್ಲಿ ಕ್ಷೀಣಿಸಿದ್ದು, ಮಾರ್ಚ್​ ತಿಂಗಳ ಅವಧಿಯಲ್ಲಿ ವಾಯುಯಾನ ನಕಾರಾತ್ಮಕ ಹಾದಿಯಲ್ಲಿ ಸಾಗಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರದ ಅಂಕಿಅಂಶಗಳ ಪ್ರಕಾರ, 2019ರ ಮಾರ್ಚ್​ನಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ ಕಂಡಿದೆ. 2018ರ ಮಾರ್ಚ್​ ತಿಂಗಳಲ್ಲಿ 2.85 ಕೋಟಿ ಪ್ರಯಾಣಿಕರು ವಿಮಾನಯಾನ ಸೇವೆ ಪಡೆದಿದ್ದರು. ಆದರೆ, 2019ರ ಈ ವೇಳೆ 2.81 ಕೋಟಿ ಜನರು ಪ್ರಯಾಣಿಸಿದ್ದಾರೆ.

ದೇಶದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಏರ್​ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ, 2019ರ ಮಾರ್ಚ್​ನಲ್ಲಿ 54.84 ಲಕ್ಷ ಪ್ರಯಾಣಿಕರು ಸಂಚರಿಸಿದ್ದರೆ, 2018ರಲ್ಲಿ 60.4 ಲಕ್ಷ ವಿಮಾನಯಾನ ಸೇವೆ ಪಡೆದಿದ್ದು, ಶೇ 9.4ರಷ್ಟು ಪ್ರಯಾಣಿಕರ ದಟ್ಟಣೆ ಕುಸಿದಿದೆ. ಮುಂಬೈ- ಶೇ 16.2, ಚೆನ್ನೈ- ಶೇ 7.4 ಹಾಗೂ ಕೊಚ್ಚಿನ್​ ಶೇ 11.3ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.

2019ರ ಮಾರ್ಚ್​ನ ಇಯರ್ ಆನ್ ಇಯರ್​ಗೆ (ಕಳೆದ ವರ್ಷಕ್ಕೆ ಹೋಲಿಸಿದರೆ) ಹೋಲಿಸಿದರೆ 2013ರ ಫೆಬ್ರವರಿಯಲ್ಲಿ ಕನಿಷ್ಠ ಮಟ್ಟದ ಏರ್ ಟ್ರಾಫಿಕ್​ ಉಂಟಾಗಿತ್ತು. ಆದರೆ, ಈ ವರ್ಷಗಳ ಅವಧಿಯಲ್ಲಿ ಪ್ರಯಾಣಿಕರ ವಿಮಾನಯಾನ ಸೇವಾ ಬೆಳವಣಿಗೆ ಪ್ರಮಾಣ ಹೆಚ್ಚಳವಾಗಿದೆ.

ಇಥಿಯೋಪಿಯಾದಲ್ಲಿ ಬೋಯಿಂಗ್​ 737 ಮ್ಯಾಕ್ಸ್​ ವಿಮಾನ ಪತನದ ಬಳಿಕ ಸುರಕ್ಷತೆ ದೃಷ್ಟಿಯಿಂದ ಹಾರಾಟ ಸ್ಥಗಿತವಾಗಿತ್ತು. ತೀವ್ರ ಹಣಕಾಸು ಮುಗ್ಗಟ್ಟಿನಿಂದ 124 ವಿಮಾನಗಳ ಹಾರಾಟ ಹಿಂತೆಗೆದುಕೊಂಡ ಜೆಟ್​ ಏರ್​ವೇಸ್​ ಸೇರಿದಂತೆ ಇತರೆ ಕಾರಣಗಳು ಏರ್​ ಟ್ರಾಫಿಕ್​ ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.