ETV Bharat / business

ಜಗತ್ತಿನ ಪವರ್​ಫುಲ್​ ಪಾಸ್​​ಪೋರ್ಟ್​ಗಳಲ್ಲಿ ಸಣ್ಣ ಜಪಾನ್​ಗೆ ಅಗ್ರಸ್ಥಾನ : ಭಾರತ ಯಾವ ಸ್ಥಾನದಲ್ಲಿದೆ?

author img

By

Published : Jan 12, 2021, 3:24 PM IST

Updated : Jan 12, 2021, 3:31 PM IST

passport
ಪಾಸ್​​ಪೋರ್ಟ್

ಅಮೆರಿಕ, ಬ್ರಿಟನ್, ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದಂತೆ ಏಳನೇ ಸ್ಥಾನದಲ್ಲಿವೆ. ಆಸ್ಟ್ರೇಲಿಯಾ 184 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ವೀಸಾ ರಹಿತ 58 ಅಂಕಗಳೊಂದಿಗೆ ಭಾರತ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ವರದಿಯಲ್ಲಿ 85ನೇ ಸ್ಥಾನದಲ್ಲಿದೆ..

ಟೋಕಿಯೊ : ವಿಶ್ವವು ಕೋವಿಡ್-19 ಸಾಂಕ್ರಾಮಿಕ ರೋಗ ನಿಭಾಯಿಸುತ್ತಲೇ ಇದ್ದರೂ 2021ರ ವರ್ಷದಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಜಪಾನ್ ಅಗ್ರಸ್ಥಾನದಲ್ಲಿದೆ ಎಂದು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವದ ಕಳಪೆ ಪಾಸ್​ಪೋರ್ಟ್​ಗಳಲ್ಲಿ ನೆರೆಯ ಪಾಕಿಸ್ತಾನ 107 ಹಾಗೂ ನೇಪಾಳ 104ನೇ ಸ್ಥಾನದಲ್ಲಿದೆ. ಸಿರಿಯಾ, ಇರಾಕ್ ಮತ್ತು ಆಫ್ಘಾನಿಸ್ತಾನವು ಕ್ರಮವಾಗಿ 29, 28 ಮತ್ತು 26ನೇ ಅಂಕ ಪಡೆದಿವೆ. ವೀಸಾ ರಹಿತ ಶ್ರೇಯಾಂಕದಲ್ಲಿ ನೇಪಾಳ 38ನೇ ಸ್ಥಾನ ಹೊಂದಿದ್ದರೇ ಪಾಕ್ 32ರಲ್ಲಿದೆ.

ಇದನ್ನೂ ಓದಿ: ಸೆರೆಮ್​, ಭಾರತ್ ಬಯೋಟೆಕ್‌ನ 6 ಕೋಟಿ ಡೋಸ್‌ಗಳಿಗೆ ಕೇಂದ್ರ ಖರ್ಚು ಮಾಡಿದ್ದು______ ಕೋಟಿ ರೂ.

ಜನವರಿ 5ರಂದು ಬಿಡುಗಡೆಯಾದ ವರದಿಯ ಪ್ರಕಾರ, ಜಪಾನಿನ ನಾಗರಿಕರು ವಿಶ್ವದಾದ್ಯಂತ 191 ಸ್ಥಳಗಳಿಗೆ ವೀಸಾ ಮುಕ್ತ ಅಥವಾ ವೀಸಾ-ಆನ್-ಅರೈವಲ್​ ಪ್ರವೇಶಕ್ಕೆ 191 ದೇಶಗಳಿಗೆ ಪ್ರಯಾಣಿಸಬಹುದು. ಸಿಂಗಾಪುರ್ ಎರಡನೇ ಸ್ಥಾನದಲ್ಲಿದೆ (190 ಅಂಕ) ಮತ್ತು ದಕ್ಷಿಣ ಕೊರಿಯಾ ಜರ್ಮನಿಯೊಂದಿಗೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿವೆ (189 ಅಂಕ).

ಅಮೆರಿಕ, ಬ್ರಿಟನ್, ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳಿಗೆ ಸಂಬಂಧಿಸಿದಂತೆ ಏಳನೇ ಸ್ಥಾನದಲ್ಲಿವೆ. ಆಸ್ಟ್ರೇಲಿಯಾ 184 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ವೀಸಾ ರಹಿತ 58 ಅಂಕಗಳೊಂದಿಗೆ ಭಾರತ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ವರದಿಯಲ್ಲಿ 85ನೇ ಸ್ಥಾನದಲ್ಲಿದೆ.

Last Updated :Jan 12, 2021, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.