ETV Bharat / business

ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಭದ್ರವಾಗಿದೆ, ಆದ್ರೆ ಕೆಟ್ಟ ಸಾಲ ಹೆಚ್ಚಾಗಬಹುದು: ಆರ್‌ಬಿಐ ಎಚ್ಚರಿಕೆ

author img

By

Published : Jul 24, 2020, 6:56 PM IST

ಜಿಎನ್‌ಪಿಎ ಅನುಪಾತವು ತೀವ್ರವಾದ ಒತ್ತಡದ ಸನ್ನಿವೇಶದಲ್ಲಿ ಶೇ.14.7ಕ್ಕೆ ಬಂದು ತಲುಪಲಿದೆ ಎಂದು ದ್ವಿ-ವಾರ್ಷಿಕ ಹಣಕಾಸು ಸ್ಥಿರತೆ ವರದಿ (ಎಫ್‌ಎಸ್‌ಆರ್) ಹೇಳಿದೆ. ಆದರೆ, ಬ್ಯಾಂಕ್​ಗಳು ಉತ್ತಮ ಬಂಡವಾಳ ಹೊಂದಿವೆ ಮತ್ತು ಪರಸ್ಪರ ಸಂಪರ್ಕದಿಂದಾಗಿ ಸಾಂಕ್ರಾಮಿಕ ನಷ್ಟದ ಅಪಾಯವು ಈಗ ಕಡಿಮೆಯಾಗಿದೆ ಎಂದಿದೆ.

RBI Guv
ಶಕ್ತಿಕಾಂತ್​ ದಾಸ್

ನವದೆಹಲಿ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಸುರಕ್ಷಿತವಾಗಿದ್ದು, ಉತ್ತಮ ಮತ್ತು ಸ್ಥಿತಿಸ್ಥಾಪಕತ್ವ ಹೊಂದಿದೆ. ಆದರೆ ಒಟ್ಟು ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ಅನುಪಾತವು ಮಾರ್ಚ್‌ನಲ್ಲಿನ ಶೇ. 8.5 ರಿಂದ 2021ರ ಮಾರ್ಚ್ ವೇಳೆಗೆ ಶೇ 12.5ಕ್ಕೆ ಏರಿಕೆ ಆಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅಂದಾಜಿಸಿದೆ.

ಜಿಎನ್‌ಪಿಎ ಅನುಪಾತವು ತೀವ್ರವಾದ ಒತ್ತಡದ ಸನ್ನಿವೇಶದಲ್ಲಿ ಶೇ 14.7ಕ್ಕೆ ಬಂದು ತಲುಪಲಿದೆ ಎಂದು ದ್ವಿ-ವಾರ್ಷಿಕ ಹಣಕಾಸು ಸ್ಥಿರತೆ ವರದಿ (ಎಫ್‌ಎಸ್‌ಆರ್) ಹೇಳಿದೆ. ಆದರೆ, ಬ್ಯಾಂಕ್​ಗಳು ಉತ್ತಮ ಬಂಡವಾಳ ಹೊಂದಿವೆ ಮತ್ತು ಪರಸ್ಪರ ಸಂಪರ್ಕದಿಂದಾಗಿ ಸಾಂಕ್ರಾಮಿಕ ನಷ್ಟದ ಅಪಾಯವು ಈಗ ಕಡಿಮೆಯಾಗಿದೆ ಎಂದಿದೆ.

ದೇಶದ ಹಣಕಾಸು ವ್ಯವಸ್ಥೆಯು ಉತ್ತಮವಾಗಿದೆ. ಆದರೆ, ಸಾಲಗಾರರು ಕೋವಿಡ್​-19 ಸಾಂಕ್ರಾಮಿಕ ಮತ್ತು ಅದಕ್ಕೂ ಮೀರಿದ ತೀವ್ರ ಅಪಾಯದ ನಿವಾರಣೆಯಿಂದ ದೂರವಿರಬೇಕು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್​ ದಾಸ್ ಎಚ್ಚರಿಕೆ ನೀಡಿದ್ದಾರೆ.

ವಿಕಾಸಗೊಳ್ಳುತ್ತಿರುವ ವಿತ್ತೀಯ ಪರಿಸರದಲ್ಲಿ ಅಪಾಯದ ನಿರ್ವಹಣೆಯು ವಿವೇಕಯುತವಾಗಿರಬೇಕು. ವಿಪರೀತ ಅಪಾಯ ನಿವಾರಣೆ ಎಲ್ಲರಿಗೂ ವ್ಯತಿರಿಕ್ತ ಫಲಿತಾಂಶಗಳನ್ನು ನೀಡುತ್ತದೆ ಎಂದು ದಾಸ್​ ಅವರು ಸಾಲದ ಬೆಳವಣಿಗೆ ಕುಸಿಯುತ್ತಿರುವ ಸಮಯದಲ್ಲಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.

ಅದೇನೇ ಇದ್ದರೂ ಭಾರತದಲ್ಲಿ ಹಣಕಾಸು ವ್ಯವಸ್ಥೆಯು ಉತ್ತಮವಾಗಿದೆ. ಪ್ರಸ್ತುತ ಪರಿಸರದಲ್ಲಿ ಹಣಕಾಸಿನ ಮಧ್ಯವರ್ತಿಗಳು ಪೂರ್ವಭಾವಿಯಾಗಿ ಬಂಡವಾಳ ಹೆಚ್ಚಿಸುವುದು ಮತ್ತು ಅವದ ಸ್ಥಿತಿಸ್ಥಾಪಕತ್ವ ಸುಧಾರಿಸುವುದು ಮೊದಲ ಆದ್ಯತೆಯಾಗಿದೆ ಎಂದರು.

ವ್ಯವಹಾರಸ್ಥರ, ಹೂಡಿಕೆದಾರರ ಮತ್ತು ಗ್ರಾಹಕರಿಗೆ ವಿಶ್ವಾಸವನ್ನು ನೀಡಲು ಹಣಕಾಸು ವಲಯದ ಸ್ಥಿರತೆಯು ಒಂದು ಪೂರ್ವಾಪೇಕ್ಷಿತವಾಗಿದೆ. ನಾವು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಈ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.

ದೇಶದ ಎಲ್ಲ ಸರ್ಕಾರಗಳು, ಕೇಂದ್ರ ಬ್ಯಾಂಕ್​ಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳು ಆರ್ಥಿಕ ನಿವಾರಣೆಗೆ ಸಂಘಟಿತ ಪ್ರಯತ್ನ ನಡೆಸಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.