ETV Bharat / business

ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್​ ಮಾರುವುದು ದೊಡ್ಡ ತಪ್ಪು, ರಾಜಕೀಯ ಅಸಮರ್ಥತೆ: ರಘುರಾಮ್​ ರಾಜನ್ ಕಿಡಿ

author img

By

Published : Mar 15, 2021, 8:01 PM IST

ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್​ಗಳನ್ನು ಮಾರುವುದು ಒಂದು ದೊಡ್ಡ ತಪ್ಪು. ಯಾವುದೇ ಯೋಗ್ಯ ಗಾತ್ರದ ಬ್ಯಾಂಕನ್ನು ವಿದೇಶಿ ಬ್ಯಾಂಕ್​ಗಳಿಗೆ ಮಾರಾಟ ಮಾಡುವುದು ರಾಜಕೀಯವಾಗಿ ಅಸಮರ್ಥ ನಿರ್ಧಾರವಾಗಿದೆ ಎಂದು ಆರ್​ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ವಿರೋಧ ವ್ಯಕ್ತಪಡಿಸಿದ್ದಾರೆ.

Rajan
Rajan

ನವದೆಹಲಿ: ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ.0.4ರಷ್ಟು ಪ್ರಗತಿ ತೋರಿಸಿದೆ. ಕೊರೊನಾ ವೈರಸ್​​ ಲಾಕ್​ಡೌನ್​ನಿಂದ ಭಾರತದ ಅರ್ಥ ವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ, 2022-23ರ ಬೆಳವಣಿಗೆ ಸಂಖ್ಯೆಗಳು ನೈಜ ಆರ್ಥಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತವೆಯೇ ಹೊರತು 2021-22ರ ಸಂಖ್ಯೆಗಳಲ್ಲ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ಮಾಜಿ ಗವರ್ನರ್ ರಘುರಾಮ್ ರಾಜನ್​ ಹೇಳಿದ್ದಾರೆ​.

ಕೊರೊನಾ ವೈರಸ್ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡದಿದ್ದರೆ, 2022ರ ಹಣಕಾಸು ವರ್ಷದಲ್ಲಿ ಭಾರತವು ಖಂಡಿತವಾಗಿಯೂ ಬೆಳವಣಿಗೆ ಕಾಣಲಿದೆ. ಆದರೆ, ಬೆಳವಣಿಗೆಯನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಅರ್ಥ ವ್ಯವಸ್ಥೆಯೊಂದಿಗೆ 'ಎಲ್ಲವೂ ಚೆನ್ನಾಗಿದೆ' ಎಂಬ ಸೂಚಕವಾಗಿ ನೋಡಬಾರದು ಎಂದರು.

2021ರ ಆರ್ಥಿಕ ವರ್ಷದಲ್ಲಿ ಆದಂತೆ ಆರ್ಥಿಕತೆಯು ಶೇ 8ರಷ್ಟು ಕುಗ್ಗಿದಾಗ, ಲಾಕ್‌ಡೌನ್ ಅಂತ್ಯದ ಜೊತೆ-ಜೊತೆಯಲ್ಲಿ ಸಾಮಾನ್ಯ ಬೆಳವಣಿಗೆಯೊಂದಿಗೆ ಯಾವುದೇ ವಿಧದ ಮರು ಚೇತರಿಕೆ ಮತ್ತು ಕೆಲವು ಪರೀಕ್ಷಾರ್ಥವಾದ ನಿರ್ಬಂಧಿತ ಬೇಡಿಕೆಯ ನಂತರದ ಬೆಳವಣಿಗೆಯ ಸಂಖ್ಯೆಗಳನ್ನು ಅಸಾಮಾನ್ಯವಾಗಿ ಕಾಣುವಂತೆ ಮಾಡುತ್ತದೆ. ನಮ್ಮ ಸ್ಥಿರತೆಯ ನೈಜ ಪರೀಕ್ಷೆ 2021-22 ಹೊರೆತು, 2022-23 ಅಲ್ಲ. ಯಾವಾಗ ಸಂಖ್ಯೆಗಳು ನಮ್ಮ ನೈಜ ಪರಿಸ್ಥಿತಿಯನ್ನು ಹೆಚ್ಚು ಪ್ರತಿಬಿಂಬಿಸುತ್ತವೆ ಆಗ ಎಂದು ರಾಜನ್ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚೆಗೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಭಾರತದ ಜಿಡಿಪಿ ಬೆಳವಣಿಗೆಯು 2022ರ ಆರ್ಥಿಕ ವರ್ಷದಲ್ಲಿ ಶೇ 12.6ಕ್ಕೆ ಏರಿಕೆಯಾಗಲಿದೆ ಎಂದು ನಿರೀಕ್ಷಿಸುತ್ತಿದೆ. ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 2022ರ ವಿತ್ತೀಯ ವರ್ಷದಲ್ಲಿ ಶೇ 10.5ರಷ್ಟು ಬೆಳವಣಿಗೆಯ ಮುನ್ಸೂಚನೆ ನೀಡಿದ್ದರೆ, ಆರ್ಥಿಕ ಸಮೀಕ್ಷೆ ಶೇ 11ರಷ್ಟು ಎಂದು ಅಂದಾಜಿಸಿದೆ.

ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣಗಳ ಬಗ್ಗೆ ರಾಜನ್ ಎಚ್ಚರಿಕೆ ನೀಡಿದ್ದು, ವ್ಯಾಕ್ಸಿನೇಷನ್ ಸಾಧ್ಯವಾದಷ್ಟು ವೇಗವಾಗಿ ಹೆಚ್ಚಿಸುವಂತೆ ಕರೆ ನೀಡಿದ್ದಾರೆ.

ನಾವು ವೈರಸ್ ಅಪಾಯದ ಬಗ್ಗೆ ಗಮನ ಹರಿಸಬೇಕಿದೆ. ಅದರ ಹಬ್ಬುವಿಕೆ ಇನ್ನೂ ಮುಗಿದಿಲ್ಲ. ಬ್ರೆಜಿಲ್ ಮೊದಲನೆಯದಕ್ಕಿಂತ ಕೆಟ್ಟದಾಗಿ ಎರಡನೇ ಅಲೆ ಅನುಭವಿಸುತ್ತಿದೆ. ನಾವು ಕೂಡ ಜಾಗರೂಕರಾಗಿ ಇರಬೇಕಿದೆ. ಸಮರೋಪಾದಿಯಲ್ಲಿ ಲಸಿಕೆ ವಿತರಣೆಯತ್ತ ಹೆಜ್ಜೆ ಇರಿಸಬೇಕಾಗಿದೆ. ಆರಂಭಿಕ ವ್ಯಾಕ್ಸಿನೇಷನ್​ ಉತ್ತಮವಾಗಿ ಮುಂದುವರಿಯುತ್ತಿದೆ. ನಾವು ಇದರ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆದಾಯ ಸಂಗ್ರಹಣೆ ಮತ್ತು ಹಣಕಾಸು ವಲಯದ ಕ್ರಮಗಳ ಬಗ್ಗೆ ಬಜೆಟ್ ಸ್ವಲ್ಪ ಸ್ಪಷ್ಟವಾಗಿದೆ. ಹಣಕಾಸಿನ ಬಲವರ್ಧನೆಯ ನಿಧಾನಗತಿಯ ವೇಗವು ಸರ್ಕಾರವನ್ನು ಹಿಡಿದಿಡುವಂತಹ ವಿಶ್ವಾಸಾರ್ಹ ಕ್ರಮಗಳಾದ ಹಣಕಾಸಿನ ಮಂಡಳಿ ಮತ್ತು ಸಾಲದ ಗುರಿಯ ಮೂಲಕ ಹೆಚ್ಚುವರಿ ಕಾರ್ಯಸಾಧ್ಯವಾಗಬಹುದಿತ್ತು ಎಂದರು.

ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಆರ್ಥಿಕ ವರ್ಷದಲ್ಲಿನ ಹಣಕಾಸಿನ ಕೊರತೆಯನ್ನು ಶೇ 9.5ಕ್ಕೆ ಮತ್ತು 2022ಕ್ಕೆ ಶೇ 6.8ಕ್ಕೆ ನಿಗದಿಪಡಿಸಿದ್ದಾರೆ. 2026ರ ವೇಳೆಗೆ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇ 4.5ಕ್ಕೆ ತರುವ ಮಾರ್ಗವನ್ನು ಸೂಚಿಸಿದ್ದರು.

ಸುಂಕ ಹೆಚ್ಚಳಕ್ಕೆ ವಿರೋಧಿಸಿದ ರಾಜನ್, ಪಶ್ಚಿಮ ರಾಷ್ಟ್ರಗಳಲ್ಲಿ ಭಾರಿ ಖರ್ಚಿನಿಂದಾಗಿ ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ ಭಾರತವು ರಫ್ತಿಗೆ ತನ್ನನ್ನು ತಾನೇ ತೆರೆದುಕೊಳ್ಳಬೇಕು. ಸುಂಕವನ್ನು ಹೆಚ್ಚಿಸುವುದು ಸರಿಯಾದ ಮಾರ್ಗವಲ್ಲ ಎಂದು ಹೇಳಿದರು.

ಇದನ್ನೂ ಓದಿ: GSTಯಡಿ ಪೆಟ್ರೋಲ್, ಡೀಸೆಲ್​, ಸಿಲಿಂಡರ್ ತರುವುದು ನಮ್ಮ ಕೈಲಿಲ್ಲ: ಸಂಸತ್​ ಪ್ರಶ್ನೆಗೆ 'ನಿರ್ಮಲ' ಉತ್ತರ

ಎರಡು ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಯೋಜನೆಯ ಪ್ರಶ್ನೆಗೆ ಉತ್ತರಿಸಿದ ರಾಜನ್, ಅಂತಹ ಬ್ಯಾಂಕ್​ಗಳಲ್ಲಿ ಆಡಳಿತವನ್ನು ಸುಧಾರಿಸಬೇಕೆಂದು ಕರೆ ನೀಡಿದರು. ಪಿಎಸ್‌ಯು ಬ್ಯಾಂಕ್​ಗಳಮ ಆಡಳಿತ ಮಂಡಳಿಗಳನ್ನು ಪುನರ್ನಿರ್ಮಾಣ ಮಾಡಿ, ರಾಜಕೀಯ ನೇಮಕಾತಿಗಳನ್ನು ತೊಡೆದುಹಾಕಬೇಕು. ಮಂಡಳಿಯನ್ನು ವೃತ್ತಿಪರಗೊಳಿಸಬೇಕು. ನಿರ್ವಹಣೆಯ ಸೇರಿದಂತೆ ಹೆಚ್ಚಿನ ಸ್ವಾಯತ್ತತೆ ಅವುಗಳಿಗೆ ನೀಡಬೇಕು ಎಂದು ಪ್ರತಿಪಾದಿಸಿದರು.

ಔದ್ಯೋಗಿಕ ಸಂಸ್ಥೆಗಳಿಗೆ ಬ್ಯಾಂಕ್​ಗಳು ಮಾರುವುದು ಒಂದು ದೊಡ್ಡ ತಪ್ಪು. ಯಾವುದೇ ಯೋಗ್ಯ ಗಾತ್ರದ ಬ್ಯಾಂಕನ್ನು ವಿದೇಶಿ ಬ್ಯಾಂಕ್​ಗಳಿಗೆ ಮಾರಾಟ ಮಾಡುವುದು ರಾಜಕೀಯವಾಗಿ ಅಸಮರ್ಥವಾಗಿದೆ ಎಂದರು ಟೀಕಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ ಆರ್‌ಬಿಐನ ಆಂತರಿಕ ಕಾರ್ಯಪಡೆ ವರದಿಯು ದೊಡ್ಡ ಕಾರ್ಪೊರೇಟ್ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಬ್ಯಾಂಕ್​ಗಳ ಪ್ರವರ್ತಕರಾಗಲು ಅವಕಾಶ ನೀಡುವಂತೆ ಸೂಚಿಸಿತ್ತು.

ಸರ್ಕಾರವು ಎರಡು ಬ್ಯಾಂಕ್​ಗಳನ್ನು ಹೇಗೆ ಖಾಸಗೀಕರಣ ಮಾಡುತ್ತದೆ ಎಂಬುದರ ಯೋಜನೆ ಕುರಿತು ವಿವರಗಳು ಇನ್ನೂ ಹೊರಬಂದಿಲ್ಲ. ಬಹುಶಃ ನಮ್ಮ ಖಾಸಗಿ ಬ್ಯಾಂಕ್​ಗಳಲ್ಲಿ ಒಂದು ಸಾರ್ವಜನಿಕ ವಲಯದ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಸ್ಥಿತಿಯಲ್ಲಿ ಇರಬಹುದು. ಆದರೆ, ಅವರಿಗೆ ಇಚ್ಛೆಯಿಂದೆ ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ ಎಂದು ರಾಜನ್ ಹೇಳಿದರು.

ಸುಸ್ತಿ ಸಾಲ ಹಿಂಪಡೆಯುವಿಕೆ, ನಿರ್ವಹಣೆ ಮತ್ತು ವಾಪಸಾತಿಯ ಎಆರ್​ಸಿ (ಆಸ್ತಿ ಪುನರ್ನಿರ್ಮಾಣ ಕಂಪನಿ), ಎಎಂಸಿ (ಆಸ್ತಿ ನಿರ್ವಹಣಾ ಕಂಪನಿ) ಮತ್ತು ಎಐಎಫ್ (ಪರ್ಯಾಯ ಹೂಡಿಕೆ ನಿಧಿ) ಮಾದರಿಯಡಿಯಲ್ಲಿ ಬ್ಯಾಡ್​ ಬ್ಯಾಂಕ್ ಸ್ಥಾಪಿಸುವ ಬಜೆಟ್ ಪ್ರಸ್ತಾವನೆಯಲ್ಲಿದೆ. ಇದಕ್ಕೆ ರಾಜನ್ ಅವರು, ಅದರ ಯಶಸ್ಸು ಮರಣದಂಡನೆ ಮತ್ತು ವಿನ್ಯಾಸವನ್ನು ಅವಲಂಬಿಸಿರುತ್ತದೆ ಎಂದು ವ್ಯಾಖ್ಯಾನಿಸಿದರು.

ಹೊಸ ಬ್ಯಾಡ್​ ಬ್ಯಾಂಕ್ ಜತೆಗೆ ಭಯಂಕರವಾದ ಮಾಹಿತಿ ಅಡಗಿಕೊಂಡಿದೆ. ಅದರ ನಿರ್ವಹಣೆಯು ಸರಿಯಾದ ಉತ್ತೇಜನ, ಸ್ವಾತಂತ್ರ್ಯ ಮತ್ತು ಸಾಕಷ್ಟು ಬಂಡವಾಳ ಹೊಂದಿದ್ದರೆ, ಅದು ಕೆಟ್ಟ ಸ್ವತ್ತುಗಳ ಪುನರ್​​ರಚನೆಯನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಿಸುತ್ತದೆ. ಕಳಪೆ ವಿನ್ಯಾಸದ ಕೆಟ್ಟ ಬ್ಯಾಂಕ್, ಕೇವಲ ಕೆಟ್ಟ ಸಾಲಗಳನ್ನು ಬದಲಾಯಿಸುತ್ತದೆ. ಸರ್ಕಾರದ ಒಂದು ಜೇಬಿನಿಂದ ಇನ್ನೊಂದಕ್ಕೆ ವರ್ಗಾಯಿಸಿದಂತೆ ಎಂದು ವಿಶ್ಲೇಷಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.