ETV Bharat / business

ತೈಲ ಬೆಲೆ ಏರಿಕೆ- 2023ರ ಹಣಕಾಸು ವರ್ಷದಲ್ಲಿ ದೇಶದ ಬೆಳವಣಿಗೆ ದರ ಶೇ.8.5ಕ್ಕೆ ಕುಸಿತ: ಫಿಚ್

author img

By

Published : Mar 22, 2022, 10:48 AM IST

ತೈಲ ಮತ್ತು ಅನಿಲ ಬೆಲೆಗಳಲ್ಲಿನ ಏರಿಕೆಯು ಉದ್ಯಮದ ವೆಚ್ಚಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಗ್ರಾಹಕರ ನೈಜ ಆದಾಯವನ್ನು ಕಡಿಮೆ ಮಾಡುತ್ತದೆ ಎಂದು ರೇಟಿಂಗ್‌ ಫಿಚ್‌ ಸಂಸ್ಥೆ ಅಂದಾಜಿಸಿದೆ.

Fitch slashes FY23 India growth forecast to 8.5 pc on high energy prices
ತೈಲ ಬೆಲೆ ಏರಿಕೆಯಿಂದ 2023ರ ಹಣಕಾಸು ವರ್ಷದಲ್ಲಿ ದೇಶದ ಬೆಳವಣಿಗೆ ಮುನ್ಸೂಚನೆ ದರ ಶೇ.8.5ಕ್ಕೆ ಕುಸಿತ-ಫಿಚ್

ನವದೆಹಲಿ: ರಷ್ಯಾ - ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿ ದರ ಶೇ.10.3ರಿಂದ ಶೇ.8.5ಕ್ಕೆ ಕುಸಿತವಾಗಲಿದೆ ಎಂದು ರೇಟಿಂಗ್ ಏಜೆನ್ಸಿ ಫಿಚ್ ಮುನ್ಸೂಚನೆ ನೀಡಿದೆ.

ಕೋವಿಡ್‌ ರೂಪಾಂತರಿ ಓಮಿಕ್ರಾನ್‌ ತ್ವರಿತವಾಗಿ ಕಡಿಮೆಯಾಗುವುದರೊಂದಿಗೆ ಆರ್ಥಿಕತೆ ಹಳಿಗೆ ಮರಳುತ್ತಿದೆ. ಇದರಿಂದಾಗಿ ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ವೇಗವಾಗಿ ವೃದ್ಧಿಸಲು ಸಹಕಾರಿಯಾಗಿದೆ ಎಂದು ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರದ ಶೇಕಡವಾರು ಅಂಕಗಳು 0.6 ರಿಂದ ಶೇ.8.7 ಏರಿಕೆಯಾಗಲಿದೆ ಎಂದು ಅಂದಾಜಿಸಿದೆ. ತೈಲ ಬೆಲೆ ಹೆಚ್ಚುತ್ತಿರುವುದರಿಂದ 2022-23ರ ಹಣಕಾಸು ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.8.5(-1.8)ಕ್ಕೆ ಕಡಿಮೆ ಮಾಡಲಾಗಿದೆ ಎಂದು ಪಿಚ್‌ ಹಣದುಬ್ಬರದ ಪರಿಷ್ಕರಣೆಯಲ್ಲಿ ತಿಳಿಸಿದೆ.

ಉಕ್ರೇನ್‌ನಲ್ಲಿ ಯುದ್ಧ, ರಷ್ಯಾದ ಮೇಲಿನ ಆರ್ಥಿಕ ನಿರ್ಬಂಧಗಳು ಜಾಗತಿಕ ಇಂಧನ ಸರಬರಾಜನ್ನು ಅಪಾಯಕ್ಕೆ ಸಿಲುಕಿಸಿದೆ. ನಿರ್ಬಂಧಗಳು ಯಾವುದೇ ಸಮಯದಲ್ಲಿ ರದ್ದುಗೊಳ್ಳುವ ಸಾಧ್ಯತೆಯಿಲ್ಲ ಎಂದು ಸಂಸ್ಥೆ ಹೇಳಿದೆ. ಶೇ.17ರಷ್ಟು ನೈಸರ್ಗಿಕ ಅನಿಲ ಹಾಗೂ ಶೇ.12 ರಷ್ಟು ತೈಲ ಸೇರಿದಂತೆ ಜಗತ್ತಿನ ಶೇ.10 ಇಂಧನವನ್ನು ರಷ್ಯಾ ಪೂರೈಸುತ್ತದೆ. ತೈಲ ಮತ್ತು ಅನಿಲ ಬೆಲೆಗಳಲ್ಲಿನ ಏರಿಕೆಯು ಉದ್ಯಮದ ವೆಚ್ಚಗಳು ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಗ್ರಾಹಕರ ನೈಜ ಆದಾಯವನ್ನು ಕಡಿಮೆ ಮಾಡುತ್ತದೆ ಎಂದಿರುವ ಫಿಚ್‌, ವಿಶ್ವದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.0.7 ರಿಂದ 3.5ಕ್ಕೆ ಕಡಿತ ಗೊಳಿಸಿದೆ.

ಇದನ್ನೂ ಓದಿ: ಯಾವುದೇ ಸವಾಲನ್ನು ಎದುರಿಸಲು ಭಾರತದ ಆರ್ಥಿಕತೆ ಉತ್ತಮವಾಗಿದೆ: ಆರ್‌ಬಿಐ ಗವರ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.