ETV Bharat / business

ಭಾರತದ ಕೊರೊನಾ ಯುದ್ಧಕ್ಕೆ ಶಹಬ್ಬಾಸ್​ಗಿರಿ... 16,000 ಕೋಟಿ ರೂ. ನೀಡುವುದಾಗಿ ಎಡಿಬಿ ಅಭಯ

author img

By

Published : Apr 10, 2020, 5:02 PM IST

Asian Development Bank

ರಾಷ್ಟ್ರೀಯ ಆರೋಗ್ಯ ತುರ್ತು ಕಾರ್ಯಕ್ರಮ, ತೆರಿಗೆ ಮತ್ತು ವ್ಯವಹಾರಗಳಿಗೆ ಪರಿಹಾರ ಮತ್ತು ಉತ್ತೇಜಕ ಕ್ರಮಗಳಾಗಿ ಮಾರ್ಚ್ 26ರಂದು ಘೋಷಿಸಲಾದ 23 ಬಿಲಿಯನ್ ಡಾಲರ್ (1.7 ಲಕ್ಷ ಕೋಟಿ ರೂ.) ಮೊತ್ತದ ಆರ್ಥಿಕ ಪರಿಹಾರ ಪ್ಯಾಕೇಜ್ ಸೇರಿದಂತೆ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ನಡೆಗಳನ್ನು ಎಡಿಬಿ ಅಧ್ಯಕ್ಷ ಮಸತ್ಸುಗು ಅಸಕವಾ ಶ್ಲಾಘಿಸಿದ್ದಾರೆ.

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ 2.2 ಬಿಲಿಯನ್ ಡಾಲರ್ (ಸುಮಾರು 16,500 ಕೋಟಿ ರೂ.) ಬೆಂಬಲ ನೀಡುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರಿಗೆ ಏಷ್ಯನ್​​​ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸತ್ಸುಗು ಅಸಕವಾ ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ತುರ್ತು ಕಾರ್ಯಕ್ರಮ, ತೆರಿಗೆ ಮತ್ತು ವ್ಯವಹಾರಗಳಿಗೆ ಪರಿಹಾರ ಮತ್ತು ಉತ್ತೇಜಕ ಕ್ರಮಗಳಾಗಿ ಮಾರ್ಚ್ 26ರಂದು ಘೋಷಿಸಲಾದ 23 ಬಿಲಿಯನ್ ಡಾಲರ್ (1.7 ಲಕ್ಷ ಕೋಟಿ ರೂ.) ಮೊತ್ತದ ಆರ್ಥಿಕ ಪರಿಹಾರ ಪ್ಯಾಕೇಜ್ ಸೇರಿದಂತೆ ಸಾಂಕ್ರಾಮಿಕ ರೋಗದ ವಿರುದ್ಧ ಭಾರತ ಸರ್ಕಾರ ತೆಗೆದುಕೊಳ್ಳುತ್ತಿರುವ ನಡೆಗಳನ್ನು ಅಸಕಾವಾ ಶ್ಲಾಘಿಸಿದ್ದಾರೆ.

ಎಡಿಬಿ ಭಾರತದ ತುರ್ತು ಅಗತ್ಯಗಳನ್ನು ಬೆಂಬಲಿಸಲು ಬದ್ಧವಾಗಿದೆ. ನಾವು ಈಗ ಆರೋಗ್ಯ ಕ್ಷೇತ್ರಕ್ಕೆ 2.2 ಬಿಲಿಯನ್ ಡಾಲರ್​ಗಳ ದೇಣಿಗೆ ತಕ್ಷಣದಿಂದಲೇ ಸಿದ್ಧಪಡಿಸುತ್ತಿದ್ದೇವೆ. ಬಡವರ ಮೇಲೆ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮ ಬೀರುವುದನ್ನು ನಿವಾರಿಸಲು ನೆರವಾಗಲಿದೆ. ಅನೌಪಚಾರಿಕ ಕಾರ್ಮಿಕರು,ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳು ಸೇರಿದಂತೆ ಆರ್ಥಿಕ ವಲಯ ಚೇತರಿಸಿಕೊಳ್ಳಲು ಸಹಾಯಕ್ಕೆ ಬರಲಿದೆ ಎಂದರು.

ಈ ಅವಧಿಯಲ್ಲಿ ಎಡಿಬಿ ತನ್ನ ಹಣಕಾಸು ಅಗತ್ಯಗಳನ್ನು ಪೂರೈಸಲು ಖಾಸಗಿ ವಲಯದೊಂದಿಗೆ ತೊಡಗಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಗತ್ಯವಿದ್ದರೆ ಭಾರತಕ್ಕೆ ನೀಡುವ ನೆರವಿನ ಮೊತ್ತವನ್ನು ಮತ್ತಷ್ಟು ಹೆಚ್ಚಾಗಲಿದೆ. ತುರ್ತು ನೆರವು, ನೀತಿ ಆಧಾರಿತ ಸಾಲಗಳು ಮತ್ತು ಎಡಿಬಿ ನಿಧಿಯನ್ನು ಶೀಘ್ರವಾಗಿ ವಿತರಿಸಲು ಅನುಕೂಲವಾಗುವಂತೆ ನಮ್ಮಲ್ಲಿ ಲಭ್ಯವಿರುವ ಎಲ್ಲ ಹಣಕಾಸಿನ ಆಯ್ಕೆಗಳನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.