ETV Bharat / business

ಜೆಟ್‌ ಸಂಕಟ:ನರೇಶ್ ಗೋಯಲ್‌, ಪತ್ನಿ ದುಬೈ ಪ್ರಯಾಣಕ್ಕೆ ತಡೆ

author img

By

Published : May 25, 2019, 9:32 PM IST

Updated : May 25, 2019, 9:42 PM IST

ಸಂಗ್ರಹ ಚಿತ್ರ

ಗೋಯಲ್ ದಂಪತಿ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್​​ ವಿಮಾನ ಇಕೆ 507 ಏರಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಅವರನ್ನು ತಡೆದಿದೆ. ಅನಿತಾ ಗೋಯಲ್​​ ಹೆಸರಲ್ಲಿದ್ದ ಅವರ ವಸ್ತುಗಳಿದ್ದ ಬ್ಯಾಗನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ: ಜೆಟ್​ ಏರ್​​ವೇಸ್​ ಸಂಸ್ಥೆಯ ಮಾಜಿ ಮುಖ್ಯಸ್ಥ ನರೇಶ್​ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯಲ್​ ಅವರ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣ ಪ್ರಾಧಿಕಾರ ಅವಕಾಶ ನೀಡಲು ನಿರಾಕರಿಸಿದೆ.

ಗೋಯಲ್ ದಂಪತಿ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್​​ ವಿಮಾನ ಇಕೆ 507 ಏರಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರಾಧಿಕರ ಅವರನ್ನು ತಡೆದಿದೆ. ಅನಿತಾ ಗೋಯಲ್​​ ಹೆಸರಲ್ಲಿದ್ದ ಅವರ ವಸ್ತುಗಳಿದ್ದ ಬ್ಯಾಗನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ತಿಳಿದು ಬಂದಿದೆ.

ಜೆಟ್ ಏರ್​ವೇಸ್​ ಸಿಬ್ಬಂದಿ ಹಾಗೂ ಪೈಲೆಟ್​​ಗಳಿಗೆ ಹಲವು ತಿಂಗಳುಗಳಿಂದ ವೇತನ ನೀಡದಿರುವ ನರೇಶ್​, ಇತರೆ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಹಿರಿಯ ಸದಸ್ಯರ ಪಾಸ್​ಪೋರ್ಟ್​​ಗಳನ್ನು ಜಪ್ತಿ ಮಾಡಬೇಕು ಎಂದು ಜೆಟ್​​ ಏರ್​ವೇಸ್​ ಅಧಿಕಾರಿ ಹಾಗೂ ಸಿಬ್ಬಂದಿ ಸಂಘಟನೆಯ ಅಧ್ಯಕ್ಷರು ಮುಂಬೈ ಪೊಲೀಸ್ ಆಯುಕ್ತರಿಗೆ ಕಳೆದ ತಿಂಗಳು ಪತ್ರ ಬರೆದಿದ್ದರು.

Intro:Body:Conclusion:
Last Updated :May 25, 2019, 9:42 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.