ETV Bharat / business

ದಿವಾಳಿಯಾದ 'ಜೆಟ್'​ ಗೊಟಕ್: 25 ವರ್ಷ ಆಗಸದಲ್ಲಿ ಮೆರೆದ ಏರ್​ವೇಸ್​ ನೆದರ್ಲೆಂಡ್​ ಪಾಲು

author img

By

Published : Jan 17, 2020, 5:49 PM IST

Jet Airways
ಜೆಟ್​ ಏರ್​ವೇಸ್

ಪಡೆದ ಸಾಲ ಮರಳಿಸಲಾಗದೆ ದಿವಾಳಿಯಾದ ಜೆಟ್​, ಕಳೆದ 25 ವರ್ಷಗಳ ಕಾಲ ವಿಮಾನ ಸೇವೆ ಒದಗಿಸಿತ್ತು. 2019ರ ಏಪ್ರಿಲ್​ನಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿ ದಿವಾಳಿ ಸಂಹಿತೆ ಘೋಷಣೆ ಪ್ರಕ್ರಿಯೆಯಲ್ಲಿ ನಿರತವಾಗಿದೆ. ನಿಯಂತ್ರಕ ಫೈಲಿಂಗ್​ ಪ್ರಕಾರ, ದಿವಾಳಿಯಾದ ಜೆಟ್​ ಏರ್​ವೇಸ್ ವಿಮಾನ ಸಂಸ್ಥೆಯು ನೆದರ್ಲಾಂಡ್ ಮೂಲದ ಕೆಎಲ್​ಎಂ ರಾಯಲ್​ ಡಚ್​ ಏರ್​ಲೈನ್ಸ್​ಗೆ ಮಾರಾಟ ಮಾಡಲು ಯೋಜನೆಯಲ್ಲಿದೆ.

ನವದೆಹಲಿ: ತೀವ್ರವಾದ ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಹಾರಾಟ ಸ್ಥಗಿತಗೊಳಿಸಿದ್ದ ಜೆಟ್​ ಏರ್​ವೇಸ್, ನೆದರ್ಲೆಂಡ್​ ಮೂಲದ ಕಂಪನಿಯ ಪಾಲಾಗಲಿದೆ.

ಪಡೆದ ಸಾಲ ಮರಳಿಸಲಾಗದೆ ದಿವಾಳಿಯಾದ ಜೆಟ್​, ಕಳೆದ 25 ವರ್ಷಗಳ ಕಾಲ ವಿಮಾನ ಸೇವೆಯನ್ನು ಒದಗಿಸಿತ್ತು. 2019ರ ಏಪ್ರಿಲ್​ನಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿ ದಿವಾಳಿ ಸಂಹಿತೆ ಘೋಷಣೆ ಪ್ರಕ್ರಿಯೆಯಲ್ಲಿ ನಿರತವಾಗಿದೆ.

ನಿಯಂತ್ರಕ ಫೈಲಿಂಗ್​ ಪ್ರಕಾರ, ದಿವಾಳಿಯಾದ ಜೆಟ್​ ಏರ್​ವೇಸ್ ವಿಮಾನ ಸಂಸ್ಥೆಯು ನೆದರ್ಲಾಂಡ್ ಮೂಲದ ಕೆಎಲ್​ಎಂ ರಾಯಲ್​ ಡಚ್​ ಏರ್​ಲೈನ್ಸ್​ಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ.

ಜೆಟ್ ಏರ್​ವೇಸ್​ ವ್ಯವಹಾರಗಳನ್ನು ನಿರ್ವಹಿಸುವ ದಿವಾಳಿತನ ರೆಸಲ್ಯೂಷನ್ ವೃತ್ತಿಪರರು ಕಂಪನಿಯ ರೆಸಲ್ಯೂಶನ್ ಮತ್ತು ಅದರ ಷೇರು ಹೋಲ್ಡರ್​ಗಳಿಗೆ ಗರಿಷ್ಠ ಮೌಲ್ಯ ಒದಗಿಸಲು ವಿವಿಧ ಆಯಾಮಗಳಿಂದ ಪರಿಶೋಧನೆ ನಡೆಸುತ್ತಿದ್ದಾರೆ ಎಂದು ಫೈಲಿಂಗ್​ನಲ್ಲಿ ತಿಳಿಸಿದೆ.

ಈ ಹಂತದಲ್ಲಿ ಕಂಪನಿ ಮತ್ತು ಡಚ್ ಟ್ರಸ್ಟಿ 2020ರ ಜನವರಿ 13ರಂದು 'ಕೊನಿಂಕ್ಲಿಜ್ಕೆ ಲುಚಾಟ್ವಾರ್ಟ್ ಮಾಟ್ಚಪ್ಪಿಜ್ ಎನ್​ವಿ' ಜತೆಗೆ ಷರತ್ತುಬದ್ಧ ಮಾರಾಟ ಮತ್ತು ಖರೀದಿ ಒಪ್ಪಂದವನ್ನು ಮಾಡಿಕೊಂಡಿವೆ.

ಪ್ರಸ್ತಾವಿತ ನಿರ್ಣಯವು ಭಾರತೀಯ ಕಾನೂನು ಮತ್ತು ಡಚ್ ಕಾನೂನುಗಳ ಅಡಿಯಲ್ಲಿ ಶಾಸನಬದ್ಧ ಮತ್ತು ನಿಯಂತ್ರಕ ಅನುಮತಿಗಳು ಸೇರಿದಂತೆ ಹಲವು ಷರತ್ತುಗಳಿಗೆ ಒಳಪಟ್ಟಿದೆ ಎಂದು ಫೈಲಿಂಗ್ ಹೇಳಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.