ETV Bharat / business

ಮುಖೇಶ್​ ಅಂಬಾನಿ ಮನೆ ಬಳಿ ನಿಂತಿದ್ದ ಕಾರಿನಲ್ಲಿ 21 ಜಿಲೆಟಿನ್ ಕಡ್ಡಿ ಪತ್ತೆ: ತನಿಖೆಗೆ ಆದೇಶ

author img

By

Published : Feb 25, 2021, 8:24 PM IST

Updated : Feb 25, 2021, 9:46 PM IST

Vehicle
Vehicle

ಪಿಎಸ್‌ಟಿಎನ್‌ನ ವ್ಯಾಪ್ತಿಯಲ್ಲಿನ ಕಾರ್​ಮೈಕಲ್ ರಸ್ತೆಯಲ್ಲಿ ಇಂದು ಸಂಜೆ ಅನುಮಾನಾಸ್ಪದವಾಗಿ ವಾಹನವೊಂದು ಪತ್ತೆಯಾಗಿದೆ. ಬಿಡಿಡಿಎಸ್ ಮತ್ತು ಇತರ ಪೊಲೀಸ್ ತಂಡಗಳು ತಕ್ಷಣವೇ ಸ್ಥಳಕ್ಕೆ ತೆರಳಿ, ವಾಹನ ತಪಾಸಣೆ ನಡೆಸಿವೆ. ವಾಹನದ ಒಳಗೆ ಕೆಲವು ಜಿಲೆಟಿನ್​ನಂತಹ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇದು ಜೋಡಿಸಲಾದ ಸ್ಫೋಟಕ ಸಾಧನವಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ಟ್ವಿಟರ್​ನಲ್ಲಿ ತಿಳಿಸಿದೆ.

ಮುಂಬೈ: ಒಂದು ಬಿಲಿಯನ್‌ ಡಾಲರ್‌ ಮೌಲ್ಯದ ಮನೆ ಹೊಂದಿರುವ ಮುಖೇಶ್‌ ಅಂಬಾನಿ ನಿವಾಸದ ಬಳಿ 21 ಜಿಲೆಟಿನ್ ಕಡ್ಡಿ​ ಹೊಂದಿದ್ದ ವಾಹನವೊಂದು ಪತ್ತೆಯಾಗಿದೆ.

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ನಿವಾಸ ಆಂಟಿಲಿಯಾ ಬಳಿ ಸ್ಫೋಟಕ ಇದ್ದ ವಾಹನ ಪತ್ತೆಯಾಗಿದ್ದು, ಸ್ಥಳಕ್ಕೆ ಸ್ಫೋಟಕ ನಿಷ್ಕ್ರಿಯ ದಳದ ಸಿಬ್ಬಂದಿ ಬಂದು ವಾಹನ ತಪಾಸಣೆ ನಡೆಸಿದರು.

ಮುಖೇಶ್​ ಅಂಬಾನಿ ಮನೆ ಬಳಿ ಜಿಲೆಟಿನ್ ತುಂಬಿದ ವಾಹನ ಪತ್ತೆ

ಪಿಎಸ್‌ಟಿಎನ್‌ನ ವ್ಯಾಪ್ತಿಯಲ್ಲಿನ ಕಾರ್​ಮೈಕಲ್ ರಸ್ತೆಯಲ್ಲಿ ಇಂದು ಸಂಜೆ ಅನುಮಾನಾಸ್ಪದವಾಗಿ ವಾಹನವೊಂದು ಪತ್ತೆಯಾಗಿದೆ. ಬಿಡಿಡಿಎಸ್ ಮತ್ತು ಇತರ ಪೊಲೀಸ್ ತಂಡಗಳು ತಕ್ಷಣವೇ ಸ್ಥಳಕ್ಕೆ ತೆರಳಿ, ವಾಹನ ತಪಾಸಣೆ ನಡೆಸಿವೆ. ವಾಹನದ ಒಳಗೆ ಕೆಲವು ಜಿಲೆಟಿನ್​ನಂತಹ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಇದು ಜೋಡಿಸಲಾದ ಸ್ಫೋಟಕ ಸಾಧನವಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸ್ ಟ್ವಿಟರ್​ನಲ್ಲಿ ತಿಳಿಸಿದೆ.

  • A suspicious vehicle was found on Carmichael Rd this evening under limits of Gamdevi Pstn. BDDS & other Police teams reached the spot immediately, examined & found some explosive material Gelatin inside. It’s not an assembled explosive device. Further investigation is going on.

    — Mumbai Police (@MumbaiPolice) February 25, 2021 " class="align-text-top noRightClick twitterSection" data=" ">

ಈ ರಸ್ತೆ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್ ತಕ್ಷಣ ಸ್ಥಳಕ್ಕೆ ಬಂದಿದೆ. ವಾಹನದ ನಂಬರ್ ಪ್ಲೇಟ್ ನಕಲಿ ಎಂಬುದು ವರದಿಯಾಗಿದ್ದು, ಇದು ಅಧಿಕಾರಿಗಳಿಗೆ ಹಲವು ಅನುಮಾನ ಮೂಡಿಸಿದೆ. ಈಗ ಕಾರನ್ನು ಟ್ರಾಫಿಕ್ ಪೊಲೀಸರು ಎಳೆದೊಯ್ದಿದ್ದಾರೆ.

explosives spoted
ಪತ್ತೆಯಾದ ಜಿಲೆಟಿನ್ ಕಡ್ಡಿ ಬ್ಯಾಗ್​

ಗೃಹ ರಾಜ್ಯ ಸಚಿವ ಶಂಭುರಾಜ್ ದೇಸಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾರಿನಿಂದ ಜಿಲೆಟಿನ್​ನಂತಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

explosives spoted
ಪತ್ತೆಯಾದ ಜಿಲೆಟಿನ್ ಕಡ್ಡಿ ಬ್ಯಾಗ್​

ಈ ನಿವಾಸಕ್ಕೆ ಫ್ಯಾಂಟಮ್ ದ್ವೀಪ ಆಂಟಿಲಿಯಾ ಎಂದು ಹೆಸರಿಡಲಾಗಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಒಡೆತನದ ಆಂಟಿಲಿಯಾ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಬಕಿಂಗ್​ಹ್ಯಾಮ್ ಅರಮನೆಯ ನಂತರ ಇದು 2ನೇ ಸ್ಥಾನದಲ್ಲಿದೆ. ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿ ಇರುವ ಆಂಟಿಲಿಯಾ 4000 ಚದರ ಅಡಿ ವಿಸ್ತೀರ್ಣ ಹೊಂದಿದೆ.

explosives spoted
ಪತ್ತೆಯಾದ ಜಿಲೆಟಿನ್ ಕಡ್ಡಿ ಬ್ಯಾಗ್​
Last Updated :Feb 25, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.