ETV Bharat / business

ಏರ್​ ಇಂಡಿಯಾ ಖಾಸಗೀಕರಣದ 2ನೇ ಹಂತ ಶುರು: ಅರ್ಹ ಬಿಡ್​ದಾರರ ಹೆಸರು ಜ.5ಕ್ಕೆ ಬಹಿರಂಗ

author img

By

Published : Dec 29, 2020, 5:36 PM IST

Updated : Dec 29, 2020, 7:44 PM IST

Air India
ಏರ್​ ಇಂಡಿಯಾ

ಹೂಡಿಕೆ ಹಿಂತೆಗೆತ ಪ್ರಕ್ರಿಯೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದ್ದು, ಮೊದಲನೇ ಹಂತದಲ್ಲಿ ಖರೀದಿಗೆ ಇಚ್ಛಿಸುವ ಬಿಡ್​​ದಾರರಿಂದ ಆಸಕ್ತಿಯ ಅಭಿವ್ಯಕ್ತಿ (ಇಒಐ) ಸಲ್ಲಿಸಲಾಗಿದೆ. ಅರ್ಹತಾ ಮಾನದಂಡಗಳು ಮತ್ತು ಪ್ರಾಥಮಿಕ ಮಾಹಿತಿ ಜ್ಞಾಪಕ ಪತ್ರದಲ್ಲಿ (ಪಿಐಎಂ) ಉಲ್ಲೇಖಿಸಲಾದ ಇತರ ನಿಯಮಗಳ ಆಧಾರದ ಮೇಲೆ ಅವುಗಳನ್ನು ಅಂತಿಮಗೊಳಿಸಲಾಗುತ್ತದೆ.

ನವದೆಹಲಿ: ಅರ್ಹ ಬಿಡ್​​ದಾರರ ಹೆಸರನ್ನು ಪ್ರಕಟಿಸುವುದರೊಂದಿಗೆ ಏರ್ ಇಂಡಿಯಾದ ಎರಡನೇ ಹಂತದ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯು 2021ರ ಜನವರಿ 5ರಂದು ಪ್ರಾರಂಭವಾಗಲಿದೆ.

ಪ್ರಕ್ರಿಯೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದ್ದು, ಮೊದಲನೇ ಹಂತದಲ್ಲಿ ಖರೀದಿಗೆ ಇಚ್ಛಿಸುವ ಬಿಡ್​​ದಾರರಿಂದ ಆಸಕ್ತಿಯ ಅಭಿವ್ಯಕ್ತಿ (ಇಒಐ) ಸಲ್ಲಿಸಲಾಗಿದೆ. ಅರ್ಹತಾ ಮಾನದಂಡಗಳು ಮತ್ತು ಪ್ರಾಥಮಿಕ ಮಾಹಿತಿ ಜ್ಞಾಪಕ ಪತ್ರದಲ್ಲಿ (ಪಿಐಎಂ) ಉಲ್ಲೇಖಿಸಲಾದ ಇತರ ನಿಯಮಗಳ ಆಧಾರದ ಮೇಲೆ ಅವುಗಳನ್ನು ಅಂತಿಮಗೊಳಿಸಲಾಗುತ್ತದೆ.

ಇದನ್ನೂ ಓದಿ: 5ನೇ ದಿನವೂ ಮುಂಬೈ ಗೂಳಿ ನಾಗಾಲೋಟ: ಬ್ಯಾಂಕಿಂಗ್ ಷೇರು ಗಳಿಕೆ

ಎರಡನೇ ಹಂತದಲ್ಲಿ ಅಂತಿಮಗೊಳಿಸಲಾದ ಆಸಕ್ತ ಬಿಡ್​ದಾರರಿಗೆ ಪ್ರಸ್ತಾವನೆ (ಆರ್‌ಎಫ್‌ಪಿ) ಕೋರಿಕೆ ನೀಡಲಾಗುವುದು. ಈ ನಂತರ ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ -19 ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯ ದೃಷ್ಟಿಯಿಂದ, ಇಒಐಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು 2020ರ ಡಿಸೆಂಬರ್ 14ರವರೆಗೆ ಇಒಐ ಸಲ್ಲಿಸಲು ಅಂತಿಮ ಗಡುವು ವಿಸ್ತರಿಸಲಾಯಿತು. ಅರ್ಹ ಆಸಕ್ತ ಬಿಡ್​​ದಾರರಿಗೆ ತಿಳಿಸುವ ದಿನಾಂಕ 2021ರ ಜನವರಿ 5 ಕೊನೆಯ ದಿನವಾಗಿದೆ.

Last Updated :Dec 29, 2020, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.