ETV Bharat / business

ಭಾರತದಲ್ಲಿನ ನಿಷೇಧಿತ ಆ್ಯಪ್​​ಗಳನ್ನು ನಿರ್ಬಂಧಿಸಿದ ಗೂಗಲ್​​

author img

By

Published : Jul 3, 2020, 2:00 AM IST

ಸೋಮವಾರದಂದು ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರವು ಭಾರತದಲ್ಲಿ ನಿಷೇಧಿಸಿದೆ. ಭಾರತದ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಉಳಿದ ಅಪ್ಲಿಕೇಷನ್​ಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಗೂಗಲ್​ ತಿಳಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಚೀನಾ ಮೂಲದ 59 ಆ್ಯಪ್‌ಗಳನ್ನು ನಿಷೇಧಿಸಿದ ನಂತರವೂ ಭಾರತದ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಷನ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಗೂಗಲ್ ಹೇಳಿದೆ.

ನಾವು ಭಾರತ ಸರ್ಕಾರದ ಮಧ್ಯಂತರ ಆದೇಶಗಳನ್ನು ಪರಿಶೀಲಿಸಿದ್ದು, ಭಾರತದ ಡೆವಲಪರ್‌ಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇವೆ. ಭಾರತದ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಷನ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದೇವೆ ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.

ಗೂಗಲ್ ಯಾವೆಲ್ಲಾ ಆ್ಯಪ್​​​ಗಳನ್ನು ನಿರ್ಬಂಧಿಸಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.

ಟಿಕ್‌ಟಾಕ್, ಯುಸಿ ಬ್ರೌಸರ್, ಶೇರ್​ಇಟ್ ಮತ್ತು ವೀಚಾಟ್ ಸೇರಿದಂತೆ ಚೀನಾದ ಲಿಂಕ್‌ಗಳನ್ನು ಹೊಂದಿರುವ 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಸೋಮವಾರ ನಿಷೇಧಿಸಿತ್ತು. ಇದು ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.