ETV Bharat / bharat

ಮದ್ಯ ಸೇವಿಸುವವರು ಖಂಡಿತಾ ಸಾಯ್ತಾರೆ ಎಂದ ನಿತೀಶ್ ಕುಮಾರ್

author img

By

Published : Dec 15, 2022, 2:15 PM IST

Updated : Dec 15, 2022, 8:35 PM IST

ಬಿಹಾರದ ಸರಹನ್ ಜಿಲ್ಲೆಯ ಛಾಪ್ರಾದಲ್ಲಿ 30 ಗಂಟೆಗಳಲ್ಲಿ ನಕಲಿ ಮದ್ಯ ಸೇವನೆಯಿಂದ 39 ಮಂದಿ ಸಾವನ್ನಪ್ಪಿರುವುದಕ್ಕೆ ಸಿಎಂ ನಿತೀಶ್​ ಕುಮಾರ್​ ಕಳವಳ ವ್ಯಕ್ತಪಡಿಸಿದ್ದಾರೆ. ಮದ್ಯ ಸೇವನೆಯಿಂದ ಈ ಹಿಂದೆಯೂ ಜನರು ಸಾಯುತ್ತಿದ್ದರು. ಜನರು ಜಾಗೃತರಾಗಬೇಕು. ಕುಡಿಯುವವನು ಖಂಡಿತವಾಗಿಯೂ ಸಾಯುತ್ತಾನೆ ಎಂದು ಪ್ರತಿಕ್ರಿಯೆಸಿದ್ದಾರೆ.

bihar cm nitish kumar
ಬಿಹಾರ ಸಿಎಂ ನಿತೀಶ್ ಕುಮಾರ್

ಮದ್ಯ ಸೇವಿಸುವವರು ಖಂಡಿತಾ ಸಾಯ್ತಾರೆ ಎಂದ ನಿತೀಶ್ ಕುಮಾರ್

ಪಾಟ್ನಾ: ಬಿಹಾರದ ಛಾಪ್ರಾದಲ್ಲಿ ಅಕ್ರಮ ನಕಲಿ ಮದ್ಯ ಸೇವಿಸಿ 39 ವ್ಯಕ್ತಿ ಸಾವಿಗೀಡಾಗಿರುವ ಪ್ರಕರಣವೂ ನಿತೀಶ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಹಾರ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ಬಿಹಾರದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧವಿದ್ದರೂ ಇಂಥ ಘಟನೆಗಳು ಹೇಗೆ ಮರುಕಳಿಸುತ್ತಿವೆ. ಸಿಎಂ ನಿತೀಶ್ ಕುಮಾರ್ ಸಮರ್ಪಕ ಉತ್ತರ ನೀಡುವಂತೆ ಆಗ್ರಹಿಸಿವೆ.

ಈ ವೇಳೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಒಂದು ದಿನದ ಬಳಿಕ ಮಾಧ್ಯಮದವರೊಂದಿಗೆ ನಿತೀಶ್ ಕುಮಾರ್ ಮಾತನಾಡಿದರು. ಬಿಹಾರದಲ್ಲಿ ನಕಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 'ಮದ್ಯ ಸೇವಿಸುವುದು ಕೆಟ್ಟದ್ದು, ಅದನ್ನು ಕುಡಿದವರು ಸಾಯುತ್ತಾರೆ' ಅದರಲ್ಲಿ ನಕಲಿ ಮದ್ಯ ಸೇವಿಸಿದವರು ಖಂಡಿತವಾಗಿಯೂ ಸಾಯುತ್ತಾರೆ, ಜನರು ಎಚ್ಚರದಿಂದಿರಬೇಕು.

ಮದ್ಯ ನಿಷೇಧವಿಲ್ಲದ ವಿವಿಧ ರಾಜ್ಯಗಳಲ್ಲೂ ನಕಲಿ ಮದ್ಯ ಸೇವಿಸಿ ಸಾವು - ನೋವುಗಳು ಸಂಭವಿಸುತ್ತಲೇ ಇವೆ. ಮದ್ಯಪಾನ ಕೆಟ್ಟ ಚಟ, ಅದನ್ನು ಸೇವಿಸಬಾರದು ಎಂದು ನಿತೀಶ್ ಕುಮಾರ್ ಹೇಳಿದರು.

ನಕಲಿ ಮದ್ಯ ದಂಧೆಗೆ ಕಡಿವಾಣ: ಬಡವರನ್ನು ಹಿಡಿಯಬೇಡಿ, ಈ ನಕಲಿ ಮದ್ಯ ದಂಧೆ ತೊಡಗಿರುವವರನ್ನು ಹಿಡಿಯಿರಿ ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿ ಇದ್ದು ಇದರ ಲಾಭವನ್ನೂ ಕೆಲವರು ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಜನರು ಮದ್ಯವನ್ನು ತ್ಯಜಿಸಿದ್ದಾರೆ. ತಪ್ಪು ಮಾಡುವವರು ಎಲ್ಲೆಡೆ ಇರುತ್ತಾರೆ. ಅಕ್ರಮ ಮದ್ಯ ಮಾರಾಟ ಕಾನೂನು ಜಾರಿಗೊಳಿಸಲಾಗಿದೆ. ಆದರೂ ಗೊಂದಲ ಸೃಷ್ಟಿಸುವವರು ಅದನ್ನು ಮಾಡುತ್ತಲೇ ಇದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಛಾಪ್ರಾ ನಕಲಿ ಮದ್ಯ ಪ್ರಕರಣ: ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಇಲ್ಲಿಯವರೆಗೆ 39 ಮಂದಿ ಸಾವನ್ನಪ್ಪಿದ್ದಾರೆ. ಈ ಅಕ್ರಮ ಮದ್ಯದ ಪ್ರಕರಣವನ್ನು ಸರಕಾರ ತನಿಖೆಗೆ ಒಳಪಡಿಸಿದೆ.

ಸಚಿವ ಸಮೀರ್ ಮಹಾಸೇಟ್ ವಿಚಿತ್ರ ಹೇಳಿಕೆ ವೈರಲ್: ಇದರ ನಡುವೆ ರಾಜ್ಯ ಕೈಗಾರಿಕಾ ಸಚಿವ ಸಮೀರ್ ಮಹಾಸೇಟ್ ವಿಚಿತ್ರ ಹೇಳಿಕೆ ನೀಡಿ ಪ್ರತಿ ಪಕ್ಷದವರಿಂದ ಹಾಸ್ಯಾಸ್ಪದಕ್ಕೆ ಒಳಗಾಗಿದ್ದಾರೆ. ಹಾಜಿಪುರದ ಕುಶ್ವಾಹಾ ಆಶ್ರಮದಲ್ಲಿ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಕ್ಕೆ ಚಾಲನೆ ನೀಡಿ ರಾಜ್ಯ ಕೈಗಾರಿಕಾ ಸಚಿವ ಸಮೀರ್ ಮಹಾಸೇಟ್ ಮಾತನಾಡಿದರು.

ಬಿಹಾರದಲ್ಲಿ ಅಕ್ರಮವಾಗಿ ವಿಷ ಬರುತ್ತಿದೆ ಅದನ್ನು ಕುಡಿದು ಜನರು ಸಾಯುತ್ತಿದ್ದಾರೆ, ಇದು ಬಿಹಾರಕ್ಕೆ ಒಳ್ಳೆಯದಲ್ಲ. ಇದನ್ನು ತಪ್ಪಿಸಲು ದೇಹದ ಶಕ್ತಿ ಹೆಚ್ಚಿಸಿಕೊಳ್ಳಬೇಕು, ಓಡಬೇಕು, ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ಹೇಳಿದ್ದು ಭಾರಿ ವೈರಲ್ ಆಗುತ್ತಿದೆ.

ಇದನ್ನೂಓದಿ:ಸ್ನೇಹಿತನ ಹೆಸರಿನಲ್ಲಿತ್ತು 4 ಕೋಟಿ ರೂ ವಿಮೆ: ಅಪಘಾತದಂತೆ ಬಿಂಬಿಸಿ ಕೊಲೆ

Last Updated : Dec 15, 2022, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.