ETV Bharat / bharat

ವಿಶ್ವದಲ್ಲಿ ಅತ್ಯಂತ ಬಲಿಷ್ಠ ಸೇನಾಪಡೆ ಹೊಂದಿರುವ ದೇಶ ಯಾವುದು? ಭಾರತ, ಚೀನಾ ಸ್ಥಾನ ಹೀಗಿದೆ

author img

By ETV Bharat Karnataka Team

Published : Jan 17, 2024, 11:59 AM IST

ಯಾವುದೇ ದೇಶದ ಭದ್ರತೆಯ ವಿಚಾರದಲ್ಲಿ ಮಿಲಿಟರಿ ಶಕ್ತಿ ಪ್ರಮುಖವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ಲೋಬಲ್​ ಫೈರ್​ಪವರ್​ ಸಂಸ್ಥೆಯು ಜಗತ್ತಿನ 145 ದೇಶಗಳ ಸೇನಾ ಬಲದ ಕುರಿತು ವಿಶ್ಲೇಷಿಸಿ ಶ್ರೇಯಾಂಕ ನೀಡಿ ಪಟ್ಟಿ ಬಿಡುಗಡೆ ಮಾಡಿದೆ.

india has the fourth strongest military globally
india has the fourth strongest military globally

ನವದೆಹಲಿ: ಭಾರತ ವಿಶ್ವದಲ್ಲೇ ನಾಲ್ಕನೇ ಬಲಿಷ್ಠ ಸೇನಾಪಡೆ ಹೊಂದಿರುವ ದೇಶವಾಗಿದೆ. ಅಮೆರಿಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಇದರ ನಂತರದ ಸ್ಥಾನದಲ್ಲಿ ರಷ್ಯಾ ಮತ್ತು ಚೀನಾ ಇದೆ ಎಂದು ಗ್ಲೋಬಲ್ ಫೈರ್‌ಪವರ್‌ ವರದಿ ತಿಳಿಸಿದೆ.

ಈ ಪಟ್ಟಿಯಲ್ಲಿ ಪಾಕಿಸ್ತಾನ ಒಂಬತ್ತನೇ ಸ್ಥಾನದಲ್ಲಿದೆ. ಇಟಲಿ ಹತ್ತನೇ ಸ್ಥಾನ ಪಡೆದಿದೆ. ಅತ್ಯಂತ ಕಡಿಮೆ ಶಕ್ತಿಶಾಲಿ ಸೇನೆ ಹೊಂದಿರುವ ದೇಶ ಭೂತನ್. ದಕ್ಷಿಣ ಕೊರಿಯಾ ಐದು, ಯುಕೆ ಆರು, ಜಪಾನ್​ ಏಳು ಮತ್ತು ಟರ್ಕಿ ಎಂಟನೇ ಸ್ಥಾನದಲ್ಲಿದೆ.

ದೇಶದ ಸೇನಾ ಶಕ್ತಿಯನ್ನು 60 ಅಂಶಗಳಲ್ಲಿ ಅಳೆಯಲಾಗಿದೆ. ಸಿಬ್ಬಂದಿ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಪ್ರದೇಶ ಮತ್ತು ಲಭ್ಯವಿರುವ ಮಾನವ ಸಂಪನ್ಮೂಲಗಳು ಸೇರಿದಂತೆ ಹಲವು ಅಂಶಗಳನ್ನು ಇದು ಹೊಂದಿದೆ. ಈ ಅಂಶಗಳು ಪವರ್​ಇಂಡೆಕ್ಸ್​​ ಸ್ಕೋರ್​ ಅನ್ನು ನಿರ್ಧರಿಸುತ್ತದೆ. ಕಡಿಮೆ ಅಂಕಗಳು ಬಲವಾದ ಮಿಲಿಟರಿ ಸಾಮರ್ಥ್ಯವನ್ನು ಸೂಚಿಸುತ್ತದೆ.

ಗ್ಲೋಬರ್​​ ಫೈರ್​ಪವರ್​​ ಸಂಸ್ಥೆಯು ಪ್ರತಿ ವರ್ಷ ದೇಶಗಳ ಮಿಲಿಟರಿ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂಬ ಕುರಿತು ಪರಿಶೀಲನೆ ನಡೆಸುತ್ತದೆ. 2022ರಲ್ಲಿದ್ದ ನಾಲ್ಕು ಅಗ್ರ ದೇಶಗಳ ಪಟ್ಟಿಯಲ್ಲಿ ಈ ವರ್ಷವೂ ಕೂಡ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ವರದಿ ಹೇಳುತ್ತದೆ.

ಅಮೆರಿಕ ವಿಶ್ವದ ಶಕ್ತಿಶಾಲಿ ಸೇನಾಪಡೆ ಹೊಂದಿದೆ ಎಂದು ವರದಿ ತಿಳಿಸಿದೆ. ಈ ವರದಿಯನುಸಾರ ಅಮೆರಿಕದ ಸೇನೆಯಲ್ಲಿ ಜಾಗತಿಕ ತಂತ್ರಜ್ಞಾನದ ಅಭಿವೃದ್ಧಿ, ವೈದ್ಯಕೀಯ, ಏರೋಸ್ಪೇಸ್ ಮತ್ತು ಕಂಪ್ಯೂಟರ್​​, ಟೆಲಿಕಾಂ ವಲಯ ಅತ್ಯಂತ ಪ್ರಬಲವಾಗಿದೆ. ಅಮೆರಿಕ 13,300 ಯುದ್ಧ ವಿಮಾನಗಳನ್ನು ಹೊಂದಿದ್ದು, 983 ದಾಳಿ ನಡೆಸುವ ಹೆಲಿಕ್ಟಾಪರ್‌ಗಳನ್ನು​ ಹೊಂದಿದೆ.

ಭಾರತ ಬೃಹತ್ ಪ್ರಮಾಣದ ಭೂಸೇನೆ ಮತ್ತು ದೇಶೀಯ ಮಿಲಿಟರಿ ಪಡೆ ಹೊಂದಿದೆ. ರಷ್ಯಾ ದೇಶವು ಸುಧಾರಿತ ತಂತ್ರಜ್ಞಾನ ಮತ್ತು ಉತ್ತಮ ತರಬೇತಿ ಪಡೆದ ಮಿಲಿಟರಿ ಹೊಂದಿದೆ. ಚೀನಾ ಕೂಡ ಗಮನಾರ್ಹ ಸೇನಾ ಬಲ ಹೊಂದಿದೆ ಎಂದು ಈ ವರದಿ ಹೇಳುತ್ತದೆ.(ಐಎಎನ್​ಎಸ್​)

ಇದನ್ನೂ ಓದಿ: ಭಾರತ - ಪಾಕಿಸ್ತಾನ ಗಡಿಯಲ್ಲಿ ಬಿಎಸ್​ಎಫ್​ ಪಡೆಯಿಂದ 'ಆಪರೇಷನ್​ ಸರ್ದ್​ ಹವಾ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.