ETV Bharat / bharat

ನಾವು ಮಂತ್ರಿಗಳು ನಮಗೆ ಕಾನೂನು ಮುರಿಯುವ ಅಧಿಕಾರ ಇದೆ..ನಿತಿನ್​ ಗಡ್ಕರಿ ಅಚ್ಚರಿ ಹೇಳಿಕೆ!

author img

By

Published : Aug 10, 2022, 8:08 AM IST

ಹೌದು ಸಾರ್ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ ಜನರ ಮತದಿಂದ ಆಡಳಿತ ನಡೆಯುತ್ತಿದೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

nitin gadkari comments
nitin gadkari comments

ನಾಗ್ಪುರ( ಮಹಾರಾಷ್ಟ್ರ): ಬಡವರ ಕಲ್ಯಾಣಕ್ಕೆ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ಬಡವರ ಕಲ್ಯಾಣಕ್ಕಾಗಿ 10 ಬಾರಿ ಕಾನೂನನ್ನು ಮುರಿಯಬೇಕಾದರೂ ಅದನ್ನು ಮಾಡಿ ಎಂದು ಹೇಳಿದ್ದರು. ಹೀಗಾಗಿ ಜನರ ಅನುಕೂಲಕ್ಕಾಗಿ ಕಾನೂನು ಮುರಿಯುವ ಹಕ್ಕು ನಮಗಿದೆ ಎಂದು ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

  • Maharashtra | I know that no law comes in the way of the welfare of the poor, if such a law has to be broken even 10 times, we should not hesitate, this is what Mahatma Gandhi said: Union Minister Nitin Gadkari in Nagpur (09.08) pic.twitter.com/EiIyYxHzVZ

    — ANI (@ANI) August 10, 2022 " class="align-text-top noRightClick twitterSection" data=" ">

ನಾವು ಮಂತ್ರಿಗಳು ಹಾಗಾಗಿ ಕಾನೂನು ಉಲ್ಲಂಘಿಸುವ ಹಕ್ಕು ನಮಗಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಅಚ್ಚರಿ ಮೂಡಿಸಿದ್ದಾರೆ. ಅವರು ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಗ್ಪುರ ಶಾಖೆಯಿಂದ ಬುಡಕಟ್ಟು ಜನಾಂಗದವರ ಆರೋಗ್ಯಕ್ಕಾಗಿ ಬ್ಲಾಸಮ್ ಎಂಬ ಯೋಜನೆ ಉದ್ಘಾಟಿಸಿ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಹೌದು ಸಾರ್’ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ ಜನರ ಮತದಿಂದ ಆಡಳಿತ ನಡೆಯುತ್ತಿದೆ. 1995ರಲ್ಲಿ ಮನೋಹರ ಜೋಶಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗಡ್ಚಿರೋಲಿ ಮತ್ತು ಮೇಲ್ಘಾಟ್‌ನಲ್ಲಿ ಅಪೌಷ್ಟಿಕತೆಯಿಂದ ಎರಡು ಸಾವಿರ ಬುಡಕಟ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.

ಆಗ ಆ ಪ್ರದೇಶದಲ್ಲಿ 450 ಹಳ್ಳಿಗಳಿಗೆ ರಸ್ತೆ ಇರಲಿಲ್ಲ ಮತ್ತು ಅರಣ್ಯ ಇಲಾಖೆ ಕಾನೂನುಗಳು ರಸ್ತೆಗಳನ್ನು ನಿರ್ಮಿಸಲು ಅಡ್ಡಿಯಾಗುತ್ತಿದ್ದವು. ಹೀಗಾಗಿಯೇ ಅಲ್ಲಿ ರಸ್ತೆಗಳ ಅಭಿವೃದ್ಧಿಗೆ ತೊಡಕಾಗಿತ್ತು. ಇಂತಹ ಕಾನೂನುಗಳು ಇರುವುದರಿಂದಲೇ ಇಲ್ಲಿನ ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಸಾಧ್ಯವಾಗಿರಲಿಲ್ಲ ಎನ್ನುವ ಮೂಲಕ ಕಾನೂನು ಉಲ್ಲಂಘನೆಯ ಅಭಿಪ್ರಾಯ ವ್ಯಕ್ತಪಡಿಸಿದರು.

ಆ ಸಮಯದಲ್ಲಿ ನಾನು ಈ ಸಮಸ್ಯೆಯನ್ನು ನನ್ನದೇ ಆದ ರೀತಿಯಲ್ಲಿ ಪರಿಹರಿಸಿದೆ. ನೀವು ಹೇಳಿದಂತೆ ಸರ್ಕಾರ ಕೆಲಸ ಮಾಡುವುದಿಲ್ಲ ಎಂಬುದನ್ನು ಆಡಳಿತದಲ್ಲಿರುವ ಅಧಿಕಾರಿಗಳು ನೆನಪಿಟ್ಟುಕೊಳ್ಳಬೇಕು ಎಂದು ನಿತಿನ್ ಗಡ್ಕರಿ ಇದೇ ವೇಳೆ ಅಧಿಕಾರಿಗಳಿಗೆ ಚಾಟಿ ಬೀಸಿದರು. ನಾವು ಹೇಳಿದಂತೆ ಸರ್ಕಾರ ಕೆಲಸ ಮಾಡುತ್ತದೆ. ನೀವು ‘ಹೌದು ಸಾರ್’ ಎಂದು ಹೇಳಿ ನಾವು ನೀಡಿರುವ ಆದೇಶವನ್ನು ಪಾಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನು ಓದಿ:ಬಿಹಾರದಲ್ಲಿ ಮತ್ತೆ 'ಮಹಾಘಟಬಂಧನ್​': ನಾಳೆ ನಿತೀಶ್ ಕುಮಾರ್​, ತೇಜಸ್ವಿ ಯಾದವ್‌ ಪ್ರಮಾಣವಚನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.