PM Modi's birthday: 71 ಅಡಿ ಉದ್ದದ 'ವ್ಯಾಕ್ಸಿನ್​ ಕೇಕ್​' ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

author img

By

Published : Sep 17, 2021, 6:48 AM IST

71 ಅಡಿ ಉದ್ದದ 'ವ್ಯಾಕ್ಸಿನ್​ ಕೇಕ್​' ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರ 71ನೇ ವರ್ಷದ ಜನ್ಮದಿನ ಹಿನ್ನೆಲೆ ಮಧ್ಯಪ್ರದೇಶದ ಭೋಪಾಲ್​ನ ಬಿಜೆಪಿ ಕಾರ್ಯಕರ್ತರು 71 ಅಡಿ ಉದ್ದದ ವ್ಯಾಕ್ಸಿನ್​ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಭೋಪಾಲ್ (ಮಧ್ಯಪ್ರದೇಶ): ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಪರಿಪರಿಯಾಗಿ ಆಚರಿಸುತ್ತಿದ್ದಾರೆ.

71 ಅಡಿ ಉದ್ದದ 'ವ್ಯಾಕ್ಸಿನ್​ ಕೇಕ್​' ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಇತ್ತ ಮಧ್ಯಪ್ರದೇಶದ ಭೋಪಾಲ್​ನ ಲಾಲ್​ಘಾಟಿ ಚೌರಾಹಾ ಎಂಬ ಪ್ರದೇಶದಲ್ಲಿ ಕೋವಿಡ್​ ಲಸಿಕೆ ಆಕಾರದಲ್ಲಿರುವ 71 ಅಡಿ ಉದ್ದದ ವ್ಯಾಕ್ಸಿನ್​ ಕೇಕ್ ಅನ್ನು ಬಿಜೆಪಿ ಕಾರ್ಯಕರ್ತರು ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಕೇಕ್​ ಮೇಲೆ 'ನಮೋ ಟೀಕಾ' ಎಂದು ಬರೆಯಲಾಗಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟುಹಬ್ಬ: ಬಿಜೆಪಿಯಿಂದ 20 ದಿನಗಳ ಬೃಹತ್​ ಅಭಿಯಾನ, 14 ಕೋಟಿ ಪಡಿತರ ಚೀಲ ವಿತರಣೆ

ಇನ್ನು ತಮ್ಮ ನಾಯಕರ ಜನ್ಮದಿನದ ಹಿನ್ನೆಲೆ ಬಿಜೆಪಿ ಪಕ್ಷವು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನಸೇವೆಗೆ ಮುಂದಾಗಿದ್ದಾರೆ. ಅವುಗಳು ಹೀಗಿವೆ,

  • 20 ದಿನಗಳ ಕಾಲ ಬೃಹತ್​ ಅಭಿಯಾನದಡಿ 'ಧನ್ಯವಾದ ಮೋದೀಜಿ' ಎಂದು ಮುದ್ರಣವಾಗಿರುವ 14 ಕೋಟಿ ಪಡಿತರ ಚೀಲ ವಿತರಣೆ
  • ಕಾಶಿಯ ಭಾರತ ಮಾತಾ ದೇವಸ್ಥಾನದಲ್ಲಿ 71 ಸಾವಿರ ಮಣ್ಣಿನ ದೀಪ ಬೆಳಗಿಸಲು ಕ್ರಮ
  • ಮೋದಿ ಫೋಟೋ ಇರುವ 5 ಕೋಟಿ ಪೋಸ್ಟ್​ ಕಾರ್ಡ್​ ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್​
  • ರಕ್ತದಾನ ಶಿಬಿರ, ನದಿಗಳಲ್ಲಿ ಸ್ವಚ್ಛತಾ ಅಭಿಯಾನ
  • ಪ್ರಧಾನಿಯಾಗಿ ನರೇಂದ್ರ ಮೋದಿ ಸ್ವೀಕಾರ ಮಾಡಿರುವ ವಿವಿಧ ಉಡುಗೊರೆಗಳ ಇ-ಹರಾಜು
  • ಇಂದು ದಾಖಲೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಕೈಗೊಳ್ಳಲು ಕ್ರಮ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.