ETV Bharat / bharat

ಹೋಟೆಲ್ ಉದ್ಯಮಿ ಆತ್ಮಹತ್ಯೆ ಪ್ರಕರಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿ

author img

By

Published : Dec 3, 2022, 10:34 PM IST

ದೆಹಲಿಯಲ್ಲಿ ಹೋಟೆಲ್ ಮಾಲೀಕ ಅಮಿತ್ ಜೈನ್ ಆತ್ಮಹತ್ಯೆ ಪ್ರಕರಣಕ್ಕೆ ಉತ್ತರಾಖಂಡದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಹೆಸರು ತಳುಕು ಹಾಕಿಕೊಂಡಿದೆ.
uttarakhand ips officer linked  in businessman-amit-jain-suicide-case-in-delhi
ಹೋಟೆಲ್ ಉದ್ಯಮಿ ಆತ್ಮಹತ್ಯೆ ಪ್ರಕರಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿ

ಡೆಹ್ರಾಡೂನ್: ದೆಹಲಿಯಲ್ಲಿ ಹೋಟೆಲ್ ಮಾಲೀಕ ಅಮಿತ್ ಜೈನ್ ಆತ್ಮಹತ್ಯೆ ಪ್ರಕರಣದಲ್ಲಿ ಉತ್ತರಾಖಂಡದ ಐಪಿಎಸ್ ಅಧಿಕಾರಿಯೊಬ್ಬರ ಹೆಸರು ಮುಂಚೂಣಿಗೆ ಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಪೊಲೀಸ್‌ಇಲಾಖೆಗೆ ಗೊಂದಲ ಮಯ ವಾತಾವರಣ ಸೃಷ್ಟಿಯಾಗಿದೆ.

ಈ ಬಗ್ಗೆ ಮಾತನಾಡಿದ ಎಡಿಜಿ ವಿ ಮುರುಗೇಶನ್ ಆತ್ಮಹತ್ಯೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಂದಿದೆ ಎಂದು ಹೇಳಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರಿಗೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದರು.

ಮಾಹಿತಿ ಪ್ರಕಾರ, ನವೆಂಬರ್ 19 ರಂದು, ಹೋಟೆಲ್ ಮಾಲೀಕ ಅಮಿತ್ ಜೈನ್ ದೆಹಲಿಯ ಕಾಮನ್ವೆಲ್ತ್ ಗೇಮ್ಸ್ ವಿಲೇಜ್ ಮುಂಭಾಗದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೂಸೈಡ್ ನೋಟ್ ಕೂಡ ಬರೆದಿದ್ದರೂ ಆ ಪತ್ರದಲ್ಲಿ ಐಪಿಎಸ್​ ಅಧಿಕಾರಿ ಹೆಸರು ಉಲ್ಲೇಖವಾಗಿದೆ ಎಂದು ಸಾಮಾಜಿಕ ಜಾಲತಾಣಲದಲ್ಲಿ ಸೂಸೈಡ್​ ನೋಟ್​ ಹರಿದಾಡಿತ್ತು ಎಂದು ಹೇಳಲಾಗುತ್ತಿದೆ.

ಪತ್ರದಲ್ಲಿ ಏನಿತ್ತು?: ಅಮಿತ್​ ಜೈನ್​ ನಡೆಸುತ್ತಿದ್ದ ಹೊಟೆಲ್​ನಲ್ಲಿ ಉತ್ತರಾಖಂಡದ ಐಪಿಎಸ್ ಅಧಿಕಾರಿ ಪಾಲು ಹೊಂದಿದ್ದು, ಅವರ ಪಾಲು ಕೇಳುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಅದೇ ಸಮಯದಲ್ಲಿ, ಈ ಇಡೀ ವಿಷಯದ ಬಗ್ಗೆ ಉತ್ತರಾಖಂಡದ ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿ ವಿ ಮುರುಗೇಶನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅವರು ದೆಹಲಿಯಲ್ಲಿ ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೋಡಿದೆ. ಈ ವಿಷಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ, ಉತ್ತರಾಖಂಡ ಪೊಲೀಸರ ಪರವಾಗಿ ತನಿಖೆಗಾಗಿ ದೆಹಲಿ ಪೊಲೀಸರಿಗೆ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದರು

ಏನಿದು ವಿಷಯ?: ನವೆಂಬರ್ 19ರಂದು ಗಾಜಿಯಾಬಾದ್‌ನ ಹೋಟೆಲ್ ರಾಡಿಸನ್ ಬ್ಲೂ ಮಾಲೀಕ ಅಮಿತ್ ಜೈನ್ ಅವರು ರಾಜಧಾನಿಯ ಪೂರ್ವ ದೆಹಲಿಯ ಕಾಮನ್‌ವೆಲ್ತ್ ಗೇಮ್ ವಿಲೇಜ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ವಿಚಾರಣೆ ವೇಳೆ, ಅಮಿತ್ ಜೈನ್ ಅವರು ನೋಯ್ಡಾದ ತಮ್ಮ ಮನೆಯಿಂದ ಬೆಳಗಿನ ಉಪಾಹಾರದ ನಂತರ CWG ಗ್ರಾಮಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

ನವೆಂಬರ್ 19 ರ ಶನಿವಾರದಂದು ಇಡೀ ಕುಟುಂಬವು ನೋಯ್ಡಾದಲ್ಲಿ ಉಳಿದುಕೊಂಡಿತು. ಬೆಳಗ್ಗೆ, ತನ್ನ ಸಹೋದರ ಕರಣ್‌ನನ್ನು ಗಾಜಿಯಾಬಾದ್‌ನಲ್ಲಿರುವ ತನ್ನ ಕಚೇರಿಯಲ್ಲಿ ಡ್ರಾಪ್ ಮಾಡಿದ ನಂತರ, ಅವರು ಒಬ್ಬರೇ ಕಾರಿನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ಗೆ ಹೋಗಿದ್ದರು. ಅವರ ಮಗ ಆದಿತ್ಯ ಕಾಮನ್‌ವೆಲ್ತ್ ಗೇಮ್ಸ್ ವಿಲೇಜ್‌ನಲ್ಲಿರುವ ತಮ್ಮ ಫ್ಲಾಟ್‌ಗೆ ಚಾಲಕನ ಜೊತೆಗೆ ಲಗೇಜ್ ಸಂಗ್ರಹಿಸಲು ತಲುಪಿದಾಗ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಬಾಲಕನಿಗೆ ಅಪರೂಪದ ಕಾಯಿಲೆ: ಕೇರಳದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.