ETV Bharat / bharat

ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ಅಮರನಾಥ ಯಾತ್ರೆ ಕೈಗೊಂಡ ಇಬ್ಬರು ಅಮೆರಿಕ ಪ್ರಜೆಗಳು!

author img

By

Published : Jul 12, 2023, 9:41 AM IST

ಭಾರತೀಯರು ಮಾತ್ರವಲ್ಲ, ವಿದೇಶಿಯರೂ ಸಹ ಪವಿತ್ರ ಅಮರನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾದ ಅಮೆರಿಕದ ಕ್ಯಾಲಿಫೋರ್ನಿಯಾದ ಇಬ್ಬರು ನಾಗರಿಕರು ಭೋಲೆನಾಥನ ದರ್ಶನ ಪಡೆಯಲು ಯಾತ್ರೆ ಕೈಗೊಂಡಿದ್ದಾರೆ.

Amarnath Yatra
ಅಮರನಾಥ ಯಾತ್ರೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಇಬ್ಬರು ಪ್ರಜೆಗಳು ಅಮರನಾಥ ಯಾತ್ರೆ ಕೈಗೊಂಡಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆಗೆ ತೆರಳುತ್ತಿದ್ದ ಸಾವಿರಾರು ಯಾತ್ರಾರ್ಥಿಗಳ ನಡುವೆ ವಿದೇಶಿ ನಾಗರಿಕರು ಕೇಸರಿ ಬಟ್ಟೆ ಧರಿಸಿ ವಿಶೇಷವಾಗಿ ಗಮನ ಸೆಳೆದರು.

ತಮ್ಮ ಪ್ರವಾಸದ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, "ಅಮರನಾಥ ಯಾತ್ರೆ ಮಾಡಬೇಕೆಂಬುದು ನಮ್ಮ ಕನಸು. ಹಲವು ವರ್ಷಗಳಿಂದ ಈ ಪ್ರವಾಸಕ್ಕಾಗಿ ಕಾಯುತ್ತಿದ್ದೆವು. ಈ ಕುರಿತಾದ ಹಲವು ವಿಡಿಯೋಗಳನ್ನು ನಾವು ಯೂಟ್ಯೂಬ್​ನಲ್ಲಿ ವೀಕ್ಷಿಸಿದ್ದೇವೆ. ಅನೇಕ ವರ್ಷಗಳಿಂದ ಇದಕ್ಕಾಗಿ ಯೋಜಿಸಿದ್ದೆವು. ಇದೀಗ ಕಾಲ ಕೂಡಿ ಬಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ : ಮಳೆಯಿಂದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಧಾರವಾಡದ ಐವರು ಗೆಳೆಯರು

ಅಮರನಾಥ ಯಾತ್ರೆ ಕೈಗೊಳ್ಳಲು ಪ್ರೇರಣೆ ಒದಗಿಸಿದ ವಿಚಾರದ ಕುರಿತು ಮಾತನಾಡಿ, "ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದ ಸ್ವಾಮಿ ವಿವೇಕಾನಂದರು ಅಮರನಾಥಕ್ಕೆ ಭೇಟಿ ನೀಡಿದ್ದರು. ಭಗವಾನ್ ಶಿವನ ದರ್ಶನ ಪಡೆದು ಈ ಸ್ಥಳ ಬಹಳ ಮಹತ್ವದ್ದಾಗಿದೆ ಎಂದು ಅವರು ಬಣ್ಣಿಸಿದ್ದರು. ನನಗೆ 40 ವರ್ಷಗಳಿಂದ ಈ ಕಥೆ ತಿಳಿದಿದೆ. ಸ್ವಾಮಿ ವಿವೇಕಾನಂದರು ಬಹಳ ಅನುಭವವುಳ್ಳ ವ್ಯಕ್ತಿ. ನಾವು ಅಮರನಾಥ ಯಾತ್ರೆ ಕೈಗೊಳ್ಳಲು ಅವರೇ ಪ್ರೇರಣೆ. ಇಲ್ಲಿಗೆ ಬಂದ ಬಳಿಕ ನಮ್ಮ ಭಾವನೆಯನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಭೋಲೆನಾಥನ ಕೃಪೆಯಿಂದ ಮಾತ್ರ ಇದು ಸಾಧ್ಯವಾಗಿದೆ" ಎಂದು ಅವಕಾಶ ಕಲ್ಪಿಸಿದ ಶ್ರೀ ಅಮರನಾಥ ಪುಣ್ಯಕ್ಷೇತ್ರ ಮಂಡಳಿಯನ್ನು ಶ್ಲಾಘಿಸಿದರು.

ಇದನ್ನೂ ಓದಿ : Amarnath Yatra: ಸ್ವಂತ ಹಣದಲ್ಲಿ ಹೆಲಿಕ್ಯಾಪ್ಟರ್​ ಮೂಲಕ ಶ್ರೀನಗರ ತಲುಪಿದ ಧಾರವಾಡದ ಯಾತ್ರಿಗಳು!

ರಾಮಬಾನ್ ವಿಭಾಗದಲ್ಲಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದುರಸ್ತಿಗಾಗಿ ಮೂರು ದಿನಗಳ ಕಾಲ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ನಿನ್ನೆ ಮುಂಜಾನೆ ಅಂದ್ರೆ ಮಂಗಳವಾರ ಬೆಳಗ್ಗೆ ಯಾತ್ರಿಕರ ಹೊಸ ತಂಡವು ಶ್ರೀನಗರ ಬೇಸ್ ಕ್ಯಾಂಪ್‌ನಿಂದ ಬಾಲ್ಟಾಲ್ ಮತ್ತು ಪಹಲ್ಗಾಮ್‌ನ ಅವಳಿ ಮಾರ್ಗಗಳಿಂದ ಅಮರನಾಥ ದೇಗುಲಕ್ಕೆ ಪ್ರಯಾಣ ಬೆಳೆಸಿತು. ಯಾತ್ರೆಗೆ ತೆರಳುವ ಮುನ್ನ ‘ಬಾಂ ಬಾಂ ಭೋಲೆ’ ಎಂಬ ಘೋಷಣೆಗಳು ಪ್ರತಿಧ್ವನಿಸಿದವು.

ಇದನ್ನೂ ಓದಿ : ಅಮರನಾಥ ಯಾತ್ರಗೆ ತೆರಳಿದ್ದ ಪ್ರವಾಸಿಗ ಸಾವು.. ಉತ್ತರ ಭಾರತದಲ್ಲಿ ಹೆಚ್ಚಿದ ಮಳೆ ಹಾನಿ.. ಜನಜೀವನ ಅಸ್ತವ್ಯಸ್ತ

ಅಮರನಾಥ ಯಾತ್ರೆ ಕೈಗೊಂಡ ಭಕ್ತರಿಗೆ ಪೊಲೀಸರು ಮತ್ತು ಭದ್ರತಾ ಪಡೆಗಳ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತವು ಮೂಲ ಶಿಬಿರದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಜುಲೈ 1ರಂದು ಪ್ರಾರಂಭವಾದ 62 ದಿನಗಳ ಯಾತ್ರೆ ಆಗಸ್ಟ್ 31, 2023ರಂದು ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ : Amarnath Yatra: ಅಮರನಾಥ ಯಾತ್ರೆಗೆ ಹೊರಟಿದ್ದ ಬಂಟ್ವಾಳದ ಭಕ್ತರು ಸೇರಿದಂತೆ ಕರಾವಳಿಯ 20 ಮಂದಿ ಸೇಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.