ETV Bharat / bharat

Drugs Case​ : ಇಡಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದ ಟಾಲಿವುಡ್​ ನಟ ರಾಣಾ

author img

By

Published : Sep 8, 2021, 4:01 PM IST

Updated : Sep 8, 2021, 5:15 PM IST

Actor Rana Daggubati quizzed by ED
ಇಡಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದ ರಾಣಾ

4 ವರ್ಷ ಹಳೆಯದಾದ ಡ್ರಗ್ಸ್ ಪ್ರಕರಣ(Drugs Case​)ವೊಂದರ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಟಾಲಿವುಡ್​ ನಟ ರಾಣಾ ದಗ್ಗುಬಾಟಿ ಇಂದು ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ.

ಹೈದರಾಬಾದ್​: ನಟ ರಾಣಾ ದಗ್ಗುಬಾಟಿಯನ್ನು ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್​ ಪ್ರಕರಣ(Drugs Case​)ಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಕೇಸ್​​ ತನಿಖೆಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ಹೈದರಾಬಾದ್‌ನಲ್ಲಿ ವಿಚಾರಣೆ ನಡೆಸಿದ್ದಾರೆ.

ಇಡಿ ಅಧಿಕಾರಿಗಳೆದುರು ವಿಚಾರಣೆಗೆ ಹಾಜರಾದ ರಾಣಾ

ಪ್ರಕರಣ ಸಂಬಂಧ ಇಡಿಯಿಂದ ವಿಚಾರಣೆಗೊಳಪಟ್ಟ ಟಾಲಿವುಡ್​ ಸೆಲೆಬ್ರೆಟಿಗಳ ಪೈಕಿ ರಾಣಾ ನಾಲ್ಕನೆಯವರು. ಈ ಪ್ರಕರಣದಲ್ಲಿ ನಟಿ ರಾಕುಲ್ ಪ್ರೀತ್ ಅವರನ್ನು ಸೆಪ್ಟೆಂಬರ್ 3 ರಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇದಕ್ಕೂ ಮುಂಚೆ ನಟಿ ಚಾರ್ಮಿ ಕೌರ್ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ಇಡಿ ವಿಚಾರಣೆ ಒಳಪಡಿಸಿದ್ದರು. ಡ್ರಗ್ಸ್​ ಪ್ರಕರಣ ಸಂಬಂಧ ನಿರ್ದೇಶಕ ಪುರಿ ಜಗನ್ನಾಥ್​ ಅವರನ್ನು ಇಡಿ ಅಧಿಕಾರಿಗಳು ಆಗಸ್ಟ್ 31 ರಂದು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಸದ್ಯ ಇಡಿ ಅಧಿಕಾರಿಗಳು ಈ ಸೆಲೆಬ್ರೆಟಿಗಳ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಮತ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾದವರೊಂದಿಗೆ ಹಣಕಾಸಿನ ವಹಿವಾಟುಗಳ ಬಗ್ಗೆ ಪ್ರಶ್ನಿಸುತ್ತಿರುವುದಾಗಿ ವರದಿಯಾಗಿದೆ.

2017 ರ ಜುಲೈನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸಂಗೀತಗಾರ ಕ್ಯಾಲ್ವಿನ್ ಮಸ್ಕರೇನ್ಹಸ್ ಹಾಗೂ ಇತರ ಇಬ್ಬರನ್ನು ಬಂಧಿಸಿ, ಅವರಿಂದ 30 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಾಗ ಡ್ರಗ್ಸ್ ದಂಧೆ ಬೆಳಕಿಗೆ ಬಂದಿತ್ತು. ಚಿತ್ರರಂಗದ ಸೆಲೆಬ್ರೆಟಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಮತ್ತು ಇತರರಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿರುವುದಾಗಿ ಬಂಧಿತರು ಅಧಿಕಾರಿಗಳಿಗೆ ಹೇಳಿದ್ದರು. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಬಂಧಿತರ ಫೋನ್​​ ಕಂಟ್ಯಾಕ್ಟ್​​ನಲ್ಲಿ ಕೆಲವು ಸಿನಿಮಾ ತಾರೆಗಳ ಮೊಬೈಲ್ ಸಂಖ್ಯೆಗಳಿದ್ದದ್ದು ತಿಳಿದು ಬಂದಿತ್ತು.

ಅಬಕಾರಿ ಇಲಾಖೆಯು ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಒಟ್ಟು 12 ಪ್ರಕರಣಗಳನ್ನು ದಾಖಲಿಸಿ 30 ಜನರನ್ನು ಬಂಧಿಸಿದೆ. ಎಸ್​ಐಟಿ ತಂಡವು ಟಾಲಿವುಡ್‌ಗೆ ಸಂಬಂಧಿಸಿ 11 ಜನರನ್ನು ಒಳಗೊಂಡಂತೆ 62 ವ್ಯಕ್ತಿಗಳನ್ನು ಪರೀಕ್ಷಿಸಿತ್ತು. ಎಸ್‌ಐಟಿ ವಿಚಾರಣೆಗೊಳಪಡಿಸಿದವರ ರಕ್ತ, ಕೂದಲು, ಉಗುರು ಮತ್ತು ಇತರ ಮಾದರಿಗಳನ್ನು ಸಂಗ್ರಹಿಸಿ ಟೆಸ್ಟ್​​ಗೆ ಕಳುಹಿಸಿತ್ತು. 12 ಪ್ರಕರಣಗಳ ಪೈಕಿ ಎಂಟು ಪ್ರಕರಣಗಳಲ್ಲಿ ಎಸ್‌ಐಟಿ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಆದಾಗ್ಯೂ, ಕೆಲವು ಸೆಲೆಬ್ರೆಟಿಗಳಿಗೆ ಡ್ರಗ್ಸ್​​ ಕೇಸ್​ನಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ.

ಇದನ್ನೂ ಓದಿ:"ಅನುಶ್ರೀ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದೇವೆ": ಚಾರ್ಜ್​ಶೀಟ್​ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ ದಾಖಲು

Last Updated :Sep 8, 2021, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.