ETV Bharat / bharat

ವಿಶೇಷ ಮರಳು ಕಲಾಕೃತಿ ಮೂಲಕ ಪಿ.ವಿ.ಸಿಂಧುರನ್ನು ಅಭಿನಂದಿಸಿದ ಕಲಾವಿದ​

author img

By

Published : Aug 1, 2021, 10:42 PM IST

ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಕಲಾಕೃತಿಯ ಮೂಲಕ ಪಿ.ವಿ. ಸಿಂಧು ಅವರನ್ನು ಅಭಿನಂದಿಸಿದ್ದಾರೆ.

Tokyo Olympics : Sudarsan Pattnaik congratulates shuttler P V Sindhu through sand art
ಮರಳು ಕಲೆಯ ಮೂಲಕ ಶಟ್ಲರ್ ಪಿ ವಿ ಸಿಂಧುಗೆ ಅಭಿನಂದಿಸಿದ ಕಲಾವಿದ

ಪುರಿ: ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸ್ಟಾರ್ ಇಂಡಿಯನ್ ಶಟ್ಲರ್ ಪಿ.ವಿ. ಸಿಂಧು ಅವರನ್ನು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಕಲಾಕೃತಿಯ ಮೂಲಕ ಅಭಿನಂದಿಸಿದ್ದಾರೆ.

ಒಡಿಶಾದ ಕಡಲತೀರದಲ್ಲಿ ಮರಳಿನಲ್ಲಿ ಸಿಂಧು ಹಾಗೂ ಅವರ ಕಂಚಿನ ಪದಕವನ್ನು ಹೊಂದಿರುವ ಕಲಾಕೃತಿಯನ್ನು ಪಟ್ನಾಯಕ್ ಅವರು ರಚಿಸಿದ್ದಾರೆ. ಅಲ್ಲದೇ, 'ನಿಮ್ಮ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ' ಎಂದು ಸುದರ್ಶನ್ ಅವರು ಕಲಾಕೃತಿಯಲ್ಲಿ​ ಬರೆದಿದ್ದಾರೆ.

ಮರಳು ಕಲೆಯ ಮೂಲಕ ಶಟ್ಲರ್ ಪಿ ವಿ ಸಿಂಧುಗೆ ಅಭಿನಂದಿಸಿದ ಕಲಾವಿದ

ಒಲಿಂಪಿಕ್ಸ್‌ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಸಿಂಧು, ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು. ಆದರೆ ಕಂಚಿನ ಪದಕಕ್ಕಾಗಿ ಇಂದು ನಡೆದ ಪಂದ್ಯದಲ್ಲಿ ಚೀನಾದ ಹೀ ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಓದಿ: ಟೋಕಿಯೋ ಒಲಿಂಪಿಕ್ಸ್‌: 27 ವರ್ಷದ ಆಸ್ಟ್ರೇಲಿಯಾ ಮಹಿಳಾ ಅಥ್ಲೀಟ್‌ ಕೊರಳಿಗೆ 7 ಪದಕಗಳ ಮಾಲೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.