ETV Bharat / bharat

ವಿಗ್ರಹಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯ.. ಕೋಪಗೊಂಡ ಅರ್ಚಕ ಮಾಡಿದ್ದೇನು ಗೊತ್ತಾ?

author img

By

Published : Nov 19, 2021, 6:52 PM IST

ತಕ್ಷಣವೇ ಆಗ್ರಾದ ಜಿಲ್ಲಾಸ್ಪತ್ರೆ(district hospital of Agra)ಗೆ ವಿಗ್ರಹದೊಂದಿಗೆ ಆಗಮಿಸಿರುವ ಆತ, ಅದಕ್ಕೆ ಬೆಸುಗೆ ಹಾಕಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದ. ಈ ವೇಳೆ ವೈದ್ಯರು ನಿರಾಕರಣೆ ಮಾಡಿದ್ದರಿಂದ ಆತ ಕೋಪಗೊಂಡಿದ್ದಾನೆ..

Devotee got Laddu Gopal idol plastered
Devotee got Laddu Gopal idol plastered

ಆಗ್ರಾ (ಉತ್ತರಪ್ರದೇಶ) : ದೇವರ ವಿಗ್ರಹಕ್ಕೆ ವೈದ್ಯನೋರ್ವ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದ್ದರಿಂದ ಅರ್ಚಕನೋರ್ವ ಕೋಪಗೊಂಡು ತಲೆಯನ್ನ ಗೋಡೆಗೆ ಹೊಡೆದುಕೊಂಡು ಗಾಯಗೊಂಡಿದ್ದಾನೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ.

Devotee got Laddu Gopal idol plastered
ಲಡ್ಡು ಗೋಪಾಲ್​​ನ ವಿಗ್ರಹ

ಅರ್ಚಕ ಲೇಖ್​ ಸಿಂಗ್(Pujari Lekh Singh)​​​ ಎಂಬಾಂತ ಇಂತಹ ವಿಚಿತ್ರ ಘಟನೆಗೆ ಸಾಕ್ಷಿಯಾದವ. ಈತ ಕಳೆದ 35 ವರ್ಷಗಳಿಂದ ಲಡ್ಡು ಗೋಪಾಲನ ಪೂಜೆ ಮಾಡುತ್ತಿದ್ದ. ಇಂದು ಬೆಳಗ್ಗೆ ಲಡ್ಡು ಗೋಪಾಲ್​​ನ ವಿಗ್ರಹಕ್ಕೆ ಸ್ನಾನ ಮಾಡಿಸುವಾಗ ಕೈಯಿಂದ ಜಾರಿ ನೆಲಕ್ಕೆ ಬಿದ್ದಿದೆ. ಈ ವೇಳೆ ಅದರ ಕೈ ಮುರಿದು ಹೋಗಿದೆ.

ತಕ್ಷಣವೇ ಆಗ್ರಾದ ಜಿಲ್ಲಾಸ್ಪತ್ರೆ(district hospital of Agra)ಗೆ ವಿಗ್ರಹದೊಂದಿಗೆ ಆಗಮಿಸಿರುವ ಆತ, ಅದಕ್ಕೆ ಬೆಸುಗೆ ಹಾಕಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದ. ಈ ವೇಳೆ ವೈದ್ಯರು ನಿರಾಕರಣೆ ಮಾಡಿದ್ದರಿಂದ ಆತ ಕೋಪಗೊಂಡಿದ್ದಾನೆ.

ವಿಗ್ರಹಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಅರ್ಚಕನಿಗೆ ವೈದ್ಯರು ಮನವರಿಕೆ ಮಾಡಿದ್ದಾರೆ. ಆದರೆ, ಈ ಮಾತು ಕೇಳಲು ಸಿದ್ಧನಿಲ್ಲದ ಅರ್ಚಕ ತಕ್ಷಣವೇ ಕೋಪದಲ್ಲಿ ತಲೆಯನ್ನ ಗೋಡೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದಾನೆ.

Devotee got Laddu Gopal idol plastered
ವಿಗ್ರಹ ಆಸ್ಪತ್ರೆಗೆ ತೆಗೆದುಕೊಂಡ ಬಂದ ಅರ್ಚಕ

ಇದನ್ನೂ ಓದಿರಿ: ಓದಿ ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದ ಯುವತಿಗೆ ಬಲವಂತದ ಮದುವೆ; ಮೂರೇ ದಿನಕ್ಕೆ ಆತ್ಮಹತ್ಯೆ

ಈ ವೇಳೆ ಹಿಂದೂ ಮಹಾಸಭಾ ಸದಸ್ಯರು, ಮುಖ್ಯ ವೈದ್ಯಾಧಿಕಾರಿ ಅಶೋಕ್​ ಅಗರ್ವಾಲ್​​ ವಿಗ್ರಹಕ್ಕೆ ಪ್ಲಾಸ್ಟರ್​ ಮಾಡಿ ಅರ್ಚಕನ ಮನಗೆದ್ದಿದ್ದಾರೆ. ವಿಗ್ರಹಕ್ಕೆ ಅರವಳಿಕೆ ನೀಡಿದಾಗ ದೇವರಿಗೆ ತುಂಬಾ ನೋವಾಗಿದೆ ಎಂದು ಅರ್ಚಕ ಹೇಳಿದ್ದಾನೆ.

ಇದು ಬೆಳಗ್ಗೆ 8 ಗಂಟೆಯಿಂದಲೇ ಲಡ್ಡು ಗೋಪಾಲನ ಕೈಗೆ ಪ್ಲಾಸ್ಟರ್ ಹಾಕಿಸಲು ಅರ್ಚಕ ಜಿಲ್ಲಾಸ್ಪತ್ರೆಯಲ್ಲಿ ಅಲೆದಾಡುತ್ತಿದ್ದ. ಈ ವೇಳೆ ವೈದ್ಯರು ಆತನನ್ನ ಹುಚ್ಚ ಎಂದು ಓಡಿಸಿದ್ದರು.

ಆದರೆ, ಅರ್ಚಕನ ಅವಸ್ಥೆ ತಿಳಿದು ಸ್ಥಳಕ್ಕೆ ತಲುಪಿದ ಹಿಂದೂ ಮಹಾಸಭಾದ ಸದಸ್ಯ ಅಶೋಕ್​ ಅಗರ್ವಾಲ್​, ವೈದ್ಯರ ಸಹಾಯದಿಂದ ವಿಗ್ರಹಕ್ಕೆ ಪ್ಲಾಸ್ಟರ್(Devotee got Laddu Gopal idol plastered) ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.