ETV Bharat / bharat

ಓದಿ ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದ ಯುವತಿಗೆ ಬಲವಂತದ ಮದುವೆ; ಮೂರೇ ದಿನಕ್ಕೆ ಆತ್ಮಹತ್ಯೆ

author img

By

Published : Nov 19, 2021, 6:01 PM IST

ತನ್ನಿಚ್ಛೆಗೆ ವಿರುದ್ಧವಾಗಿ ಬಲವಂತದ ಮದುವೆ ಮಾಡಿಸಿದ್ದಕ್ಕಾಗಿ ನೊಂದ ನವವಿವಾಹಿತೆ (Newly married girl committed suicide in Vellore) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆಯಿತು.

Forced marriage
Forced marriage

ವೆಲ್ಲೂರು(ತಮಿಳುನಾಡು): ಕುಟುಂಬಸ್ಥರೆಲ್ಲರೂ ಸೇರಿ ಬಲವಂತದ ಮದುವೆ (Forced marriage) ಮಾಡಿದ್ದಕ್ಕಾಗಿ ತೀವ್ರವಾಗಿ ಮನನೊಂದು ಯುವತಿಯೋರ್ವಳು ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.

Bride killed herself
ಆತ್ಮಹತ್ಯೆಗೆ ಶರಣಾಗಿರುವ ನವವಿವಾಹಿತೆ ಭುವನೇಶ್ವರಿ

ಮೂರನೇ ವರ್ಷದ ನರ್ಸಿಂಗ್​​​ ವ್ಯಾಸಂಗ ಮಾಡುತ್ತಿದ್ದ ಮುತ್ತು ಮಂಟಪಂ ಪ್ರದೇಶದ ಭುವನೇಶ್ವರಿ (21) ನವೆಂಬರ್​​​ 15ರಂದು ರಾಣಿಪೆಟ್ಟೈ ಜಿಲ್ಲೆಯ ಕಾವೇರಿಪಾಕ್ಕಂನ ಮಣಿಕಂದನ್ ​(27) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನವೆಂಬರ್​​​ 17ರಂದು ಮದುವೆಯ ನಂತರದ ಸಮಾರಂಭದಲ್ಲಿ ಭಾಗಿಯಾಗಲು ತನ್ನ ಮನೆಗೆ ವಾಪಸ್​ ಬಂದಿದ್ದಳು. ಈ ವೇಳೆ ಮುಂಜಾನೆ ಸ್ನಾನದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ವೆಲ್ಲೂರು ಪೊಲೀಸರು (Vellore Police) ಭುವನೇಶ್ವರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: ವಿಡಿಯೋ ನೋಡಿ: ಗಾಯಕಿಯ ಕಂಠಸಿರಿಗೆ ಮನಸೋತು ಬಕೆಟ್‌ಗಟ್ಟಲೆ ನೋಟು ಸುರಿದ ಅಭಿಮಾನಿ!

ಬಲವಂತದ ಮದುವೆಯಿಂದ ಆತ್ಮಹತ್ಯೆ:

ಲಭ್ಯವಾಗಿರುವ ಮಾಹಿತಿ ಪ್ರಕಾರ, ಭುವನೇಶ್ವರಿ ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯೋಗ ಪಡೆಯುವ ಕನಸು ಹೊತ್ತಿದ್ದರು. ಆದರೆ ಪೋಷಕರು ಆಕೆಯ ಒಪ್ಪಿಗೆ ಪಡೆದುಕೊಳ್ಳದೇ ಮದುವೆ ನಿಶ್ಚಯಿಸಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆಕೆಯ ನಿಶ್ಚಿತಾರ್ಥವಾಗಿತ್ತು. ಈ ಐದು ತಿಂಗಳಲ್ಲಿ ಭುವನೇಶ್ವರಿ ತನ್ನ ಪತಿ ಮಣಿಕಂದನ್​ ಜೊತೆ ಕೇವಲ ಮೂರು ಸಲ ಮಾತ್ರ ಮಾತನಾಡಿದ್ದರು ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.