ETV Bharat / bharat

ಜಗತ್ತಿನ ಬಲು ಕಷ್ಟದ ಮ್ಯಾರಥಾನ್​ ಗೆದ್ದ ಆಂಧ್ರದ​ ಮಹಿಳೆ; ದಕ್ಷಿಣ ಆಫ್ರಿಕಾದ ಈ ಓಟದಲ್ಲಿ ಮಾಧುರಿ ಸಾಧನೆ

author img

By

Published : Jun 22, 2023, 3:14 PM IST

ಎಷ್ಟೇ ಮ್ಯಾರಥಾನ್​ಗಳಲ್ಲಿ ಪಾಲ್ಗೊಂಡವರೂ ಸಹ ದಕ್ಷಿಣ ಅಫ್ರಿಕಾದ ವಾರ್ಷಿಕ ಕಾಮ್ರೇಡ್ಸ್​ ಮ್ಯಾರಥಾನ್​​ನಲ್ಲಿ ಭಾಗಿಯಾಗುವ ಮುನ್ನ 10 ಬಾರಿ ಯೋಚಿಸದೇ ಇರಲಾರರು.

that-marathon-is-not-that-easy-but-the-46-year-old-woman-from-visakhapatnam-completed-it-and-became-an-inspiration-to-many
that-marathon-is-not-that-easy-but-the-46-year-old-woman-from-visakhapatnam-completed-it-and-became-an-inspiration-to-many

ಹೈದರಾಬಾದ್​: ನೀವು ಅನೇಕ ಮ್ಯಾರಥಾನ್​ಗಳಲ್ಲಿ ಓಡಿರಬಹುದು. ಆದರೆ, ದಕ್ಷಿಣ ಅಫ್ರಿಕಾದ ಮ್ಯಾರಥಾನ್​​ ನೀವು ಅಂದುಕೊಂಡಷ್ಟು ಸುಲಭವಲ್ಲ. ಕಾರಣ, ಇಲ್ಲಿ ನೆತ್ತಿಯ ಮೇಲೆ ಸುಡುವ ಸೂರ್ಯ ಒಂದು ಕಡೆಯಾದರೆ, ಕೆಳಗೆ ಬಿಸಿಲಿಗೆ ಕಾದ ಕಲ್ಲುಗಳು ನಿಮ್ಮ ಹಾದಿಯನ್ನು ಕಠಿಣವಾಗಿಸುತ್ತವೆ. ಈ ಸವಾಲುಗಳ ನಡುವೆಯೂ ಈ ಜಗತ್ತಿನ ಹಳೆಯ ಕಾಮ್ರೇಡ್ಸ್​​​ ಮ್ಯಾರಥಾನ್​​ನಲ್ಲಿ ಸಾವಿರಾರು ಮಂದಿ ಭಾಗಿಯಾದರೂ ಗುರಿ ತಲುಪುವುದು ಕೆಲವೇ ಮಂದಿ. ಅದರಲ್ಲಿ ವಿಶಾಖಪಟ್ಟಣಂನ 46ವರ್ಷದ ಮಾಧುರಿ ಪಲ್ಲಿ ಕೂಡ ಒಬ್ಬರಾಗಿದ್ದಾರೆ. ತಮ್ಮ ಈ ಮ್ಯಾರಥಾನ್​​ ಪ್ರಯಾಣದ ಕುರಿತು ಅವರು ಈಟಿವಿ ಭಾರತ​​ ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಎಷ್ಟೇ ಮ್ಯಾರಥಾನ್​​​ಗಳಲ್ಲಿ ಓಡಿದರೂ ದಕ್ಷಿಣ ಅಫ್ರಿಕಾದ ವಾರ್ಷಿಕ ಕಾಮ್ರೇಡ್ಸ್​ ಮ್ಯಾರಥಾನ್​​ನಲ್ಲಿ ಭಾಗಿಯಾಗುವ ಮುನ್ನ 10 ಬಾರಿ ಯೋಚಿಸದೇ ಇರಲಾರರು. ಕಾರಣ ಇದರ ಸವಾಲು. 88.47 ಕಿಲೋ ಮೀಟರ್​ ಹಾದಿಯನ್ನು 12 ಗಂಟೆಯೊಳಗೆ ತಲುಪಬೇಕು. ಅಷ್ಟೇ ಅಲ್ಲದೇ, ಸುಡುವ ಸೂರ್ಯ ನೆತ್ತಿಯ ಮೇಲೆ ಇದ್ದರೂ ವಿರಾಮ ನೀಡದೇ ಓಡುತ್ತಿರಬೇಕಿದೆ. ಜೊತೆಗೆ ಈ ಹಾದಿ ಗಿರಿ ಶಿಖರದ ಗಾಳಿ ಪ್ರದೇಶವಾಗಿದೆ.

ಮ್ಯಾರಥಾನ್​ ತಮ್ಮ ಜೀವನದ ಗುರಿ ಹೇಗೆ ಆಯಿತು ಎಂದು ಮಾತು ಆರಂಭಿಸಿದ ಮಾಧುರಿ, ನಮ್ಮೂರು ವೈಜಾಕ್​. ನಮ್ಮ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದಲೇ ಫಿಟ್ನೆಸ್​ನಲ್ಲಿ ಆಸಕ್ತಿ ಹೊಂದಿದ್ದೆ. ಎಂಬಿಬಿಎಸ್​ ಮತ್ತು ಪಿಜಿ ಮಾಡುವಾಗಲೂ ನಾನು ಯೋಗ, ವಾಕಿಂಗ್​ ಬಿಡಲಿಲ್ಲ. ಇದಾದ ಬಳಿಕ ನಾನು ಮಹಾತ್ಮ ಗಾಂಧಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್​​ ಆಗಿ ಸೇರಿದೆ. ಡಾ. ಸುರೇಂದ್ರ ಕುಮಾರ್​ ಅವರನ್ನು ಮದುವೆಯಾದ ನನಗೆ ಈಗ ಇಬ್ಬರು ಮಕ್ಕಳು. ನನ್ನ ಕುಟುಂಬದ ಜವಾಬ್ದಾರಿ ಹೆಚ್ಚಾದಾಗ ನಾನು ವ್ಯಾಯಾಮವನ್ನು ಮಿಸ್​ ಮಾಡಿಕೊಳ್ಳಲಾರಂಭಿಸಿದೆ.

ಮ್ಯಾರಥಾನ್​ ಗೆದ್ದ ವೈಜಾಕ್​ ಮಹಿಳೆ
ಮ್ಯಾರಥಾನ್​ ಗೆದ್ದ ವೈಜಾಕ್​ ಮಹಿಳೆ

ಫಿಟ್ನೆಸ್​ ಸಲುವಾಗಿ ನಾನು ಜಿಮ್​ ಸೇರಿದೆ. ಇದಾದ ಬಳಿಕ ಕೊಂಚ ಆತ್ಮವಿಶ್ವಾಸ ಬೆಳೆಯುತು. 37ನೇ ವಯಸ್ಸಿನಲ್ಲಿ ವೈಜಾಕ್​ನಲ್ಲಿ ನಡೆದ 5 ಕಿ.ಮೀ ನೌಕಾ ಮ್ಯಾರಥಾನ್​ನಲ್ಲಿ ಭಾಗಿಯಾಗಿ ಮೊದಲ ಸ್ಥಾನ ಪಡೆದೆ. ಇದರಿಂದ ಪಡೆದ ವಿಶ್ವಾಸದಿಂದ ಬಳಿಕ 25 ಮತ್ತು 50 ಕಿ.ಮೀ ಮ್ಯಾರಥಾನ್​ನಲ್ಲಿ ಓಡಿ, ಮತ್ತೆ ಮೊದಲ ಸ್ಥಾನ ಪಡೆದೆ. ಈ ವೇಳೆ ಅನೇಕ ಜನರಿಗೆ ಓಟದಲ್ಲಿ ಆಸಕ್ತಿ ಇಲ್ಲದಿರುವುದನ್ನು ಗಮನಿಸಿ, 2021ರಲ್ಲಿ ವೈಜಾಕ್​ ರನ್ನರ್​ ಸೊಸೈಟಿ ಸ್ಥಾಪಿಸಿದೆ. ಆರಂಭದಲ್ಲಿ ಸೊಸೈಟಿಯಲ್ಲಿ 45 ಮಂದಿಯಿದ್ದ ಜನರ ಸಂಖ್ಯೆ ಇದೀಗ 500 ಆಗಿದೆ.

ಅರ್ಹತೆ: ಪ್ರತಿಷ್ಠಿತ ದಕ್ಷಿಣ ಆಫ್ರಿಕಾದ ಕಾಮ್ರೇಡ್ಸ್​​ ಮ್ಯಾರಥಾನ್​ ಮಾನವ ಓಟದ ಉತ್ತುಂಗ ಎಂದೇ ಖ್ಯಾತಿ ಪಡೆದಿದೆ. ಇದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ. ನೀವು ಎಷ್ಟೇ ಫಿಟ್​ ಇದ್ದರೂ, ಇಲ್ಲಿ ನಿಮ್ಮ ಕಾಲುಗಳು ಸ್ವಲ್ಪ ದೂರಕ್ಕೇ ದಣಿಯುತ್ತವೆ. ಇದಕ್ಕಾಗಿ ಅಗತ್ಯವಾದ ಕೋಚಿಂಗ್​​ಗೆ ಸೇರಿದೆ. ಇಲ್ಲಿ ಅರ್ಹತೆ ಪಡೆಯಲು ಅರ್ಹತಾ ಓಟದಲ್ಲಿ ಭಾಗಿಯಾಗಬೇಕು. ವೈಜಾಕ್​ ಪರೀಕ್ಷೆಯಲ್ಲಿ ಸೋತೆನಾದರೂ ಕೋಲ್ಕತ್ತಾದಲ್ಲಿ ಪ್ರಯತ್ನಿಸಿ ಯಶಸ್ಸು ಪಡೆದೆ ಎಂದು ಮಾಧುರಿ ವಿವರಿಸಿದರು.

ತರಬೇತಿ: ಮ್ಯಾರಥಾನ್​ ತರಬೇತಿ ಭಾಗವಾಗಿ ಆರು ವಾರಗಳ ಕಾಲ ಕಡಿಮೆ ವೇತದಲ್ಲಿ ಹೆಚ್ಚಿನ ದೂರದ ಓಟದ ತರಬೇತಿ ನಡೆಸಲಾಯಿತು. ಬಳಿಕ ಅವರು ವೇಗವನ್ನು ಹೆಚ್ಚಿಸಿ, ದೂರವನ್ನು ಕಡಿಮೆ ಮಾಡಿದರು. ನಿಧಾನವಾಗಿ ವೇಗ ಮತ್ತು ದೂರವನ್ನು ಹೆಚ್ಚಿಸಿದರು. ಬಳಿಕ ನಾನು ಪರ್ವತಗಳನ್ನು ಮಧ್ಯಾಹ್ನದ ಹೊತ್ತು ನಡೆಯುವ ಈ 12 ಗಂಟೆಯ ಮ್ಯಾರಥಾನ್​ ಅನ್ನು 10.25 ಗಂಟೆಗಳಲ್ಲಿ ಮುಗಿಸಿದೆ. ಈ ಸ್ಪರ್ಧೆಯಲ್ಲಿ ಅಮೆರಿಕ, ಬ್ರಿಟನ್​, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಹಲವು ಕಡೆಯ 27 ಸಾವಿರ ಮಂದಿ ಭಾಗಿಯಾಗಿದ್ದರು. ನಮ್ಮ ದೇಶದ 40 ಮಹಿಳೆಯರಲ್ಲಿ 20 ಜನ ಮಾತ್ರ ಈ ರೇಸ್​ ಗೆದ್ದೆವು.

ಫಿಟ್​ನೆಸ್​ ರಹಸ್ಯ: ನಾನು ದೆಹಲಿಯಲ್ಲಿ ಮ್ಯಾರಥಾನ್​ ತರಬೇತಿ ಪಡೆದಿದ್ದೇನೆ. ಆ ದಿನದಲ್ಲಿ ನನ್ನ ಕಾಲುಗಳನ್ನು ಸರಿಸಲು ಆಗುತ್ತಿರಲಿಲ್ಲ. ಮ್ಯಾರಥಾನ್​ ಮುಗಿದ ಬಳಿಕವೂ ನಾನು ಐದು ತಿಂಗಳು ಮನೆಯಲ್ಲಿಯೇ ಇದ್ದೆ. ಕಾರಣ ಕಾಲಿಗೆ ವಿಶ್ರಾಂತಿ ಬೇಕಿತ್ತು. ಇಲ್ಲದೆ, ಹೋದಲ್ಲಿ ಕಾಲು ಮುರಿತ, ಗಾಯಗಳಾಗುವ ಸಂಭವ ಇರುತ್ತದೆ. ಬೆಳಗ್ಗೆ 4 ಗಂಟೆಗೆ ಎದ್ದು, ಓಟ, ವರ್ಕ್​ಔಟ್​​, ಪೂಜೆ, ಅಡುಗೆ ಬಳಿಕ ನಾನು ಕೆಲಸಕ್ಕೆ ಹೋಗುತ್ತೇನೆ. ಬೇಗ ಮಲಗುತ್ತೇನೆ. ನನ್ನ ಮಗಳು ಇಂಜಿನಿಯರಿಂಗ್​ ಓದುತ್ತಿದ್ದು, ಮಗ ಇಂಟರ್ (ಪಿಯುಸಿ) ​ನಲ್ಲಿದ್ದಾನೆ. ಅವರು ಕೂಡ ನನ್ನ ಸಾಧನೆಗೆ ಸ್ಫೂರ್ತಿಯಾಗಿದ್ದಾರೆ ಎನ್ನುತ್ತಾರೆ ಸಾಧಕಿ ಮಾಧುರಿ.

ಇದೆ ವೇಳೆ ಹೆಚ್ಚಿನ ತೂಕ ಮತ್ತು ಹೃದಯ ಸಮಸ್ಯೆಗಳನ್ನು ಓಟ ತಡೆಯುತ್ತದೆ. 40ರ ಬಳಿಕ ಮಹಿಳೆಯರ ಸ್ನಾಯು ದುರ್ಬಲಗೊಂಡು ಮೂಳೆ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ವ್ಯಾಯಾಮ ಅವಶ್ಯ ಎನ್ನುತ್ತಾರೆ ಮಾಧುರಿ.

ಇದನ್ನೂ ಓದಿ: ಶ್ರೀನಗರದಲ್ಲಿ ದಾಖಲೆಯ ತಾಪಮಾನ ದಾಖಲು.. ಶೀತದ ನಾಡಲ್ಲಿ 34 ಡಿಗ್ರಿ ಸೆಲ್ಸಿಯಸ್​​​​​​​​​​​​​​​​​.. ಉತ್ತರ ಭಾರತದಲ್ಲಿ ಬಿಸಿಗಾಳಿಯ ಅಬ್ಬರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.