ETV Bharat / bharat

ಒಮಿಕ್ರಾನ್ ಭೀತಿ: ಜನವರಿ 8ರಿಂದ 16ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಕೆಸಿಆರ್​

author img

By

Published : Jan 4, 2022, 2:34 AM IST

Updated : Jan 4, 2022, 7:03 AM IST

​ಸೋಮವಾರ ರಾಜ್ಯದ ಆರೋಗ್ಯ ಸಚಿವ ಹರೀಶ್​ ರಾವ್​ ಮತ್ತು ಉನ್ನತ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಚಂದ್ರಶೇಖರ್​ ರಾವ್ ತಿಳಿಸಿದ್ದಾರೆ.

Chief Minister K Chandrashekhar Rao
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್

ಹೈದರಾಬಾದ್​: ಕೋವಿಡ್​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ತೆಲಂಗಾಣದಲ್ಲಿ ಶಾಲೆಗಳಿಗೆ ಜನವರಿ 8ರಿಂದ 16ರವರೆಗೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಸೋಮವಾರ ರಜೆ ಘೋಷಣೆ ಮಾಡಿದ್ದಾರೆ.

​ಸೋಮವಾರ ರಾಜ್ಯದ ಆರೋಗ್ಯ ಸಚಿವ ಹರೀಶ್​ ರಾವ್​ ಮತ್ತು ಉನ್ನತ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಚಂದ್ರಶೇಖರ್​ ರಾವ್ ತಿಳಿಸಿದ್ದಾರೆ.

ಹೌದು, ತೆಲಂಗಾಣದಲ್ಲಿ ಜನವರಿ 8 ರಿಂದ 16 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ತೆಲಂಗಾಣ ಸರ್ಕಾರ ಸೋಮವಾರ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಶಾಲೆಗಳನ್ನು ಮುಚ್ಚುವ ನಿರ್ಧಾರ ಬಂದಿದೆ. ರಾಜ್ಯದಲ್ಲಿ ಭಾನುವಾರ 274 ಪ್ರಕರಣಗಳು ಕಂಡ ಬಂದ್ರೆ, ಸೋಮವಾರ 482 ಪ್ರಕರಣಗಳು ದಾಖಲಾಗಿವೆ. ಎರಡು ತಿಂಗಳ ನಂತರ ಮೊದಲ ಬಾರಿಗೆ ಕೋವಿಡ್​ ಕೇಸ್​ಗಳು 400ರ ಗಡಿ ದಾಟಿದೆ. ರಾಜ್ಯದಲ್ಲಿ ಒಮಿಕ್ರಾನ್ ಸಂಖ್ಯೆ 84ಕ್ಕೇರಿದೆ.

"ಸದ್ಯಕ್ಕೆ ರಾಜ್ಯದಲ್ಲಿ ಲಾಕ್​ಡೌನ್​ ಬೇಡ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್​, ಟೆಸ್ಟ್​ ಕಿಟ್​, ಔಷಧಗಳನ್ನು ಒದಗಿಸಬೇಕು. ನಗರದಲ್ಲಿ ಹೆಚ್ಚುವರಿ ಔಷಾಧಾಯಲಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಮಾಸ್ಕ್​ಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು" ಈ ಸಂದರ್ಭದಲ್ಲಿ ಕೆಸಿಆರ್ ತಿಳಿಸಿದರು

ತೆಲಂಗಾಣದಲ್ಲಿ ಸೆಪ್ಟೆಂಬರ್ 1 ರಂದು ಶಾಲೆಗಳನ್ನು ತೆರೆಯಲಾಯಿತು. ಆದರೆ, ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಒಮಿಕ್ರಾನ್‌ನ ಭೀತಿ ಹೆಚ್ಚಾದ ಹಿನ್ನೆಲೆ ಸರ್ಕಾರ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವೆ ನಿರ್ಧಾರಕ್ಕೆ ಬಂದಿದೆ. ದೇಶವು ಸೋಂಕಿನ ಹೊಸ ಅಲೆಯನ್ನು ನೋಡುತ್ತಿರುವುದರಿಂದ ಉತ್ತರ ಪ್ರದೇಶ, ಮುಂಬೈ, ಪಶ್ಚಿಮ ಬಂಗಾಳ, ಗೋವಾ ಮತ್ತು ದೆಹಲಿಯಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ..

ಒಮಿಕ್ರಾನ್ ಭೀತಿಯಿರುವುದರಿಂದ ಈ ಸಂದರ್ಭದಲ್ಲಿ ಗುಂಪು ಸೇರುವುದು, ಬಹಿರಂಗ ಸಭೆ ಸೇರಬಾರದು, ಮೆರವಣಿಗೆಗಳಿಗೆ ಅವಕಾಶ ನೀಡಬಾರದೆಂದು ವೈದ್ಯಾಧಿಕಾರಿಗಳು ಸಿಎಂಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಬೆಳಿಗ್ಗೆ ಭಾರತದಲ್ಲಿ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್​ ಪ್ರಕರಣಗಳನ್ನು ವರದಿಯಾಗಿತ್ತು. ಇದು ಸೆಪ್ಟೆಂಬರ್ 17, 2021 ರಿಂದ ಅತಿ ಹೆಚ್ಚು. ಒಮಿಕ್ರಾನ್ ಪ್ರಕರಣಗಳು 1,700 ಕ್ಕೆ ಏರಿಕೆಯಾಗಿ 23 ರಾಜ್ಯಗಳಿಗೆ ಹರಡಿದೆ, ಮಹಾರಾಷ್ಟ್ರವು 510 ಪ್ರಕರಣಗಳೊಂದಿಗೆ ಹೆಚ್ಚು ಪೀಡಿತವಾಗಿದೆ. ದೆಹಲಿಯಲ್ಲಿ 351 ಪ್ರಕರಣಗಳು ಕಂಡು ಬಂದಿದ್ದು, ಎರಡನೇ ಸ್ಥಾನದಲ್ಲಿದೆ.

ಕೋವಿಡ್ ಪ್ರಕರಣಗಳು ಕಳೆದ ವಾರದಲ್ಲಿ 181 ಪ್ರತಿಶತ ಏರಿಕೆ ಕಂಡಿವೆ. ಡಿಸೆಂಬರ್ 27-ಜನವರಿ 2 ರಿಂದ, ಭಾರತವು ಸುಮಾರು 1.3 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ.

ಇದನ್ನೂ ಓದಿ:ದೆಹಲಿ, ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ಆಗಿದೆ, ರಾಜ್ಯದ ಬಗ್ಗೆ ಜ.7ರಂದು ಅಂತಿಮ ನಿರ್ಧಾರ : ಅಶೋಕ್​

Last Updated : Jan 4, 2022, 7:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.