ETV Bharat / bharat

PM Modi at Sydney Dialogue: 'ಡಿಜಿಟಲ್ ಯುಗ'ದಲ್ಲಿ ಡೇಟಾ, ತಂತ್ರಜ್ಞಾನವೇ ಹೊಸ ಅಸ್ತ್ರ: ಪ್ರಧಾನಿ ಮೋದಿ

author img

By

Published : Nov 18, 2021, 10:38 AM IST

'ಭಾರತದ ತಂತ್ರಜ್ಞಾನ: ವಿಕಾಸ ಮತ್ತು ಕ್ರಾಂತಿ' ಎಂಬ ವಿಷಯದ ಕುರಿತು 'ಸಿಡ್ನಿ ಸಂವಾದ'ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ರೂಪಿಸುವ 5 'ಡಿಜಿಟಲ್ ಪರಿವರ್ತನೆ'ಗಳನ್ನು ಪಟ್ಟಿ ಮಾಡಿದ್ದಾರೆ.

PM Modi at Sydney Dialogue
PM Modi at Sydney Dialogue

ನವದೆಹಲಿ: ನಾವು ಬದಲಾವಣೆಯ ಸಮಯದಲ್ಲಿ ಇದ್ದೇವೆ. ಬದಲಾವಣೆಯು ಒಂದು ಯುಗದಲ್ಲಿ ಒಮ್ಮೆ ಮಾತ್ರ ಆಗುತ್ತದೆ. ಈ 'ಡಿಜಿಟಲ್ ಯುಗ'ದಲ್ಲಿ (Digital Age) ತಂತ್ರಜ್ಞಾನ ಮತ್ತು ಡೇಟಾ ಹೊಸ ಅಸ್ತ್ರಗಳಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು.

'ಸಿಡ್ನಿ ಸಂವಾದ' ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ​ ಮಾತನಾಡಿದ ಪಿಎಂ ಮೋದಿ (PM Modi addresses Sydney Dialogue) ಡಿಜಿಟಲ್ ಯುಗದ ಮಹತ್ವ ಒತ್ತಿ ಹೇಳಿದರು. 'ಭಾರತದ ತಂತ್ರಜ್ಞಾನ: ವಿಕಾಸ ಮತ್ತು ಕ್ರಾಂತಿ' ಎಂಬ ವಿಷಯದ ಕುರಿತು ಮಾತನಾಡುತ್ತಾ, ಡಿಜಿಟಲ್ ಯುಗವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ.

ರಾಜಕೀಯ, ಆರ್ಥಿಕತೆ ಮತ್ತು ಸಮಾಜನ್ನು ಮರು ವ್ಯಾಖ್ಯಾನಿಸಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ. ಇದು ಅಂತಾರಾಷ್ಟ್ರೀಯ ಸ್ಪರ್ಧೆ, ಶಕ್ತಿ ಮತ್ತು ನಾಯಕತ್ವವನ್ನು ಮರುರೂಪಿಸುತ್ತಿದೆ ಎಂದು ಹೇಳಿದರು.

ಪ್ರಗತಿ ಮತ್ತು ಸಮೃದ್ಧಿಯ ಅವಕಾಶಗಳ ಹೊಸ ಯುಗಕ್ಕೆ ಜಗತ್ತು ನಾಂದಿ ಹಾಡಿದೆ. ತಂತ್ರಜ್ಞಾನವು ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ. ಆದರೆ, ನಾವು ಸಮುದ್ರದ ತಳದಿಂದ ಹಿಡಿದು ಸೈಬರ್‌ ವರೆಗೆ, ಸೈಬರ್‌ನಿಂದ ಬಾಹ್ಯಾಕಾಶದ ವರೆಗೆ ವಿವಿಧ ಬೆದರಿಕೆ, ಅಪಾಯಗಳನ್ನು ಎದುರಿಸುತ್ತೇವೆ.

ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದರೆ ಮುಕ್ತವಾಗಿರುವುದು. ಪಟ್ಟಭದ್ರ ಹಿತಾಸಕ್ತಿಗಳಿಗೆ ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅನುಮತಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತವನ್ನು ರೂಪಿಸುವ 5 'ಡಿಜಿಟಲ್ ಪರಿವರ್ತನೆ'ಗಳು:

ಭಾರತವನ್ನು ರೂಪಿಸುವ 5 'ಡಿಜಿಟಲ್ ಪರಿವರ್ತನೆ'ಗಳನ್ನು ಪ್ರಧಾನಿ ಮೋದಿ ಪಟ್ಟಿ ಮಾಡಿದ್ದಾರೆ (PM Modi lists 5 'digital transitions' shaping India). ಒಂದು, ನಾವು ವಿಶ್ವದ ಅತ್ಯಂತ ವ್ಯಾಪಕವಾದ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ.

1.3 ಬಿಲಿಯನ್ ಭಾರತೀಯರು ವಿಶಿಷ್ಟ ಡಿಜಿಟಲ್ ಗುರುತನ್ನು ಹೊಂದಿದ್ದಾರೆ. 60 ಲಕ್ಷ ಹಳ್ಳಿಗಳನ್ನು ಬ್ರಾಡ್‌ಬ್ಯಾಂಡ್‌ನೊಂದಿಗೆ ಸಂಪರ್ಕಿಸುವ ಹಾದಿಯಲ್ಲಿದ್ದೇವೆ. ವಿಶ್ವದ ಅತ್ಯಂತ ಪರಿಣಾಮಕಾರಿ ಪಾವತಿ ಮೂಲಸೌಕರ್ಯವಾದ UPI ಅನ್ನು ನಿರ್ಮಿಸಿದ್ದೇವೆ. 800 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇಂಟರ್ನೆಟ್ ಬಳಸುತ್ತಾರೆ, 750 ಮಿಲಿಯನ್ ಜನರು ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಾರೆ ಎಂದು ನಮೋ ತಿಳಿಸಿದರು.

ಭಾರತ ವಿಶ್ವದ ಮೂರನೇ ಶಕ್ತಿಯಾಗಿ ಬೆಳವಣಿಗೆ

ಎರಡನೇಯದು, ಸಬಲೀಕರಣ, ಸಂಪರ್ಕ, ಸೌಲಭ್ಯಗಳ ವಿತರಣೆ ಮತ್ತು ಕಲ್ಯಾಣ ಸೇರಿದಂತೆ ಆಡಳಿತಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಜೀವನವನ್ನು ಪರಿವರ್ತಿಸುತ್ತಿದ್ದೇವೆ.

ಮೂರನೇಯದಾಗಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಆರೋಗ್ಯದಿಂದ ರಾಷ್ಟ್ರೀಯ ಭದ್ರತೆಯವರೆಗೆ ಎಲ್ಲದಕ್ಕೂ ಪರಿಹಾರಗಳನ್ನು ಒದಗಿಸಲು ಪ್ರತಿ ಕೆಲವು ವಾರಗಳಿಗೊಮ್ಮೆ ಹೊಸ ಯುನಿಕಾರ್ನ್‌ಗಳು ಬರುತ್ತಿವೆ ಎಂದು ಮೋದಿ ಮಾಹಿತಿ ನೀಡಿದರು.

ಇದನ್ನೂ ಓದಿ: ಆಫ್ಘನ್​​ನಲ್ಲಿ ತುರ್ತಾಗಿ ಹಸಿದವರಿಗೆ ಅನ್ನ ನೀಡಬೇಕಿದೆ: ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿಪಾದನೆ

ಕೃತಕ ಬುದ್ಧಿಮತ್ತೆ ಮತ್ತು ಭಾರತ(Artificial intelligence)

ನಾಲ್ಕನೇಯದು, ಭಾರತದ ಉದ್ಯಮ ಮತ್ತು ಸೇವಾ ವಲಯಗಳು ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ. ಐದನೇಯದಾಗಿ ನಾವು 5G ಮತ್ತು 6G ಯಂತಹ ಟೆಲಿಕಾಂ ತಂತ್ರಜ್ಞಾನದಲ್ಲಿ ಸ್ಥಳೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದ್ದೇವೆ. ಭಾರತವು ಕೃತಕ ಬುದ್ಧಿಮತ್ತೆಯಲ್ಲಿ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.