ETV Bharat / bharat

ಆಫ್ಘನ್​​ನಲ್ಲಿ ತುರ್ತಾಗಿ ಹಸಿದವರಿಗೆ ಅನ್ನ ನೀಡಬೇಕಿದೆ: ಭದ್ರತಾ ಮಂಡಳಿಯಲ್ಲಿ ಭಾರತದ ಪ್ರತಿಪಾದನೆ

author img

By

Published : Nov 18, 2021, 7:57 AM IST

ಅಫಘಾನಿಸ್ತಾನ ಹೆಚ್ಚು ರಕ್ತಪಾತ ಮತ್ತು ಹಿಂಸಾಚಾರವನ್ನು ಕಂಡಿದೆ ಎಂದು ಒತ್ತಿ ಹೇಳಿರುವ ಭಾರತ, ಅಫ್ಘಾನಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಜನರು ತೀವ್ರ ಆಹಾರ ಅಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಹಸಿದವರಿಗೆ ತುರ್ತಾಗಿ ಅನ್ನ ನೀಡಬೇಕಿದ್ದು, ಅವರಿಗೀಗ ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ತಿರುಮೂರ್ತಿ ( TS Tirumurti)ಪ್ರತಿಪಾದಿಸಿದ್ದಾರೆ.

India at UNSC meet calls for inclusive dispensation in Afghanistan
India at UNSC meet calls for inclusive dispensation in Afghanistan

ನ್ಯೂಯಾರ್ಕ್​: ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳು ಪಕ್ಷಪಾತದ ಹಿತಾಸಕ್ತಿಗಳನ್ನು ಮೀರಿ ಒಗ್ಗೂಡುವಂತೆ ಭಾರತ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಿತಿ ಸಭೆಯಲ್ಲಿ(UNSC) ಮಾತನಾಡಿದ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿಎಸ್​ ತಿರುಮೂರ್ತಿ(UN TS Tirumurti ), ಆಫ್ಘನ್ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದೆ.

"ಅಫ್ಘಾನಿಸ್ತಾನದ ಜನರಿಗೆ ಹೆಚ್ಚು ಅಗತ್ಯವಿರುವ ಸಹಾಯವನ್ನು ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಕಾಲವಾಗಿದ್ದು, ಇತರರ ನೆರವಿನೊಂದಿಗೆ ಇಂತಹ ಸಹಾಯ ಮಾಡಲು ಹಾಗೂ ಅಲ್ಲಿನ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಭಾರತ ಸಿದ್ಧವಾಗಿದೆ" ಎಂದು ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ(India's Ambassador to the UN) ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ; ಖ್ಯಾತ ರಾಪರ್‌ ಯಂಗ್‌ ಡಾಲ್ಫ್‌ ಸಾವು

ಈಗಾಗಲೇ ಅಫಘಾನಿಸ್ತಾನ ಹೆಚ್ಚು ರಕ್ತಪಾತ ಮತ್ತು ಹಿಂಸಾಚಾರವನ್ನು ಕಂಡಿದೆ ಎಂದು ಒತ್ತಿ ಹೇಳಿರುವ ಅವರು, ಅಫ್ಘಾನಿಸ್ತಾನದ ಜನಸಂಖ್ಯೆಯ ಅರ್ಧದಷ್ಟು ಜನರು ತೀವ್ರ ಆಹಾರ ಅಭದ್ರತೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಹಸಿದವರಿಗೆ ತುರ್ತಾಗಿ ಅನ್ನ ನೀಡಬೇಕಿದ್ದು, ಅವರಿಗೀಗ ಮಾನವೀಯ ನೆರವಿನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಪಘಾನಿಸ್ತಾನಕ್ಕೆ ಭಾರತದ ಕೊಡುಗೆ ಗಣನೀಯ

ಕಳೆದ ಎರಡು ದಶಕಗಳಲ್ಲಿ ಭಾರತವು ಅಫ್ಘಾನಿಸ್ತಾನದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದೆ ಎಂದು ರಾಯಭಾರಿ ಇದೇ ವೇಳೆ ಒತ್ತಿ ಹೇಳಿದರು.

ಭಾರತದಲ್ಲಿ ಶಿಕ್ಷಣ ಮುಂದುವರಿಸಲು ಸಾವಿರಾರು ಆಫ್ಘನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವುದನ್ನು ಮುಂದುವರೆಸಿದೆ ಎಂದು ಇದೇ ವೇಳೆ ತಿರುಮೂರ್ತಿ ಭದ್ರತಾ ಮಂಡಳಿ ಗಮನಕ್ಕೆ ತಂದರು. ಸಿಕ್ಕಿಬಿದ್ದ ಜನರನ್ನು ಸ್ಥಳಾಂತರಿಸುವುದು ನಮ್ಮ ತಕ್ಷಣದ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಭಾರತ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.