ETV Bharat / bharat

ಒಂದು ಕೈ, ಎರಡೂ ಕಾಲು ಕಳೆದುಕೊಂಡ ಛಲದಂಕ ಮಲ್ಲನಿಗೆ UPSC ಪರೀಕ್ಷೆಯಲ್ಲಿ 917ನೇ ರ‍್ಯಾಂಕ್‌!

author img

By

Published : May 25, 2023, 10:09 AM IST

ಯುಪಿಎಸ್‌ಸಿ (ಸಿಎಸ್‌ಇ) 2022 ನೇ ಸಾಲಿನ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಪರೀಕ್ಷೆಯಲ್ಲಿ ಒಂದು ಕೈ, ಎರಡೂ ಕಾಲುಗಳನ್ನು ಕಳೆದುಕೊಂಡ ಉತ್ತರ ಪ್ರದೇಶದ ಯುವಕನೊಬ್ಬ 917 ನೇ ರ‍್ಯಾಂಕ್‌ ಪಡೆದು ವಿಶೇಷ ಸಾಧಕನಾಗಿ ಹೊರಹೊಮ್ಮಿದ್ದಾನೆ.

Suraj Tiwari
ಸೂರಜ್ ತಿವಾರಿ

ಉತ್ತರ ಪ್ರದೇಶ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆ 2022 ನೇ ಸಾಲಿನ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕಸ್ವಾ ಕುರವ್ಲಿ ಎಂಬ ಪ್ರದೇಶದ ನಿವಾಸಿ ಸೂರಜ್ ತಿವಾರಿ ಎಂಬವರು 2017 ರಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ ಎರಡೂ ಕಾಲುಗಳು ಮತ್ತು ಒಂದು ಕೈ ಕಳೆದುಕೊಂಡಿದ್ದರೂ ಸಹ ಛಲಬಿಡದೆ ಸತತ ಪರಿಶ್ರಮ ಹಾಕಿ ಓದಿ ಇದೀಗ 917 ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಅನೇಕ ಪ್ರೇರಣಾಶಕ್ತಿಯಾಗಿದ್ದಾರೆ.

ಜನವರಿ 29, 2017 ರಂದು ದೆಹಲಿಯ ತನ್ನ ಕಾಲೇಜಿನಿಂದ ಸೂರಜ್ ಹಿಂದಿರುಗುತ್ತಿದ್ದಾಗ ರೈಲು ಅಪಘಾತಕ್ಕೊಳಗಾಗಿದ್ದರು. ಈ ವೇಳೆ ತಮ್ಮ ಎರಡೂ ಕಾಲುಗಳು ಮತ್ತು ಬಲಗೈ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇದಾದ ನಂತರ ಕೆಲವು ತಿಂಗಳುಗಳ ಕಾಲ ಕುಟುಂಬ ಸದಸ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರು.

ಇದನ್ನೂ ಓದಿ : ಯುಪಿಎಸ್​ಸಿ ಫಲಿತಾಂಶ - 2023 : 390ನೇ ರ‍್ಯಾಂಕ್ ಪಡೆದ ಮೈಸೂರಿನ ಪೂಜಾ ಈಟಿವಿ ಭಾರತ್​ನೊಂದಿಗೆ ಸಂದರ್ಶನ

ಈ ಭೀಕರ ಅಪಘಾತ ನಡೆದಾಡುವ ಮತ್ತು ಬರೆಯುವ ಸಾಮರ್ಥ್ಯವನ್ನೇ ಕಸಿದುಕೊಂಡಿತ್ತು. ಆದರೂ ಇದರಿಂದ ಹೇಗಾದರೂ ಹೊರಬರಬಲೇಬೇಕೆಂದು ಯೋಚಿಸಿದ ಸೂರಜ್​ಗೆ ಕಠಿಣ ಪರಿಶ್ರಮವೊಂದೇ ಉತ್ತಮ ಮಾರ್ಗವೆಂದು ಅರ್ಥವಾಯಿತು. ಇದಾದ ಬಳಿಕ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಈಗ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆಯಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮೊದಲ ರ‍್ಯಾಂಕ್​ನ ಗುಟ್ಟು ಬಿಟ್ಟುಕೊಟ್ಟ ಇಶಿತಾ ಕಿಶೋರ್.. ಹೇಗಿತ್ತು ಗೊತ್ತಾ ಇವರ ತಯಾರಿ!

ದೇಶದಲ್ಲಿ ಕೋವಿಡ್ - 19 ವೈರಸ್​ ಉಲ್ಬಣಗೊಂಡಾಗ ಸೂರಜ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ತಮ್ಮ ಮೊದಲ ಪ್ರಯತ್ನದಲ್ಲಿಯೇ ಪ್ರಿಲಿಮ್ಸ್ ಮತ್ತು ಮೇನ್ಸ್‌ನಲ್ಲಿ ಉತ್ತೀರ್ಣರಾದರು. ಆದರೆ, ಸಂದರ್ಶನದಲ್ಲಿ ಕೆಲವು ಅಂಕಗಳಿಂದ ಹಿನ್ನಡೆಯಾಯಿತು. ಇದೀಗ ಎರಡನೇ ಪ್ರಯತ್ನದಲ್ಲಿ ದೇಶದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ದಿಗ್ವಿಜಯ ಸಾಧಿಸಿದ್ದಾರೆ. ಫಲಿತಾಂಶ ಪ್ರಕಟವಾದಾಗಿನಿಂದ ಇವರ ಕುಟುಂಬ ಮತ್ತು ಸ್ನೇಹಿತರಲ್ಲಿ ಸಂತಸದ ಹೊನಲು ಮನೆ ಮಾಡಿದೆ.

"ಇಂದು ನಾವು ತುಂಬಾ ಸಂತೋಷವಾಗಿದ್ದೇನೆ. ನನ್ನ ಮಗ ತುಂಬಾ ಧೈರ್ಯಶಾಲಿ. ಆತ ಎಂದಿಗೂ ಛಲ ಬಿಡಲಿಲ್ಲ. ಜೀವನದಲ್ಲಿ ಯಶಸ್ವಿಯಾಗಲು ಅವನ ಮೂರು ಬೆರಳುಗಳೇ ಸಾಕು" ಎಂದು ಸೂರಜ್ ತಿವಾರಿ ತಂದೆ ರಮೇಶ್ ಕುಮಾರ್ ತಿವಾರಿ ಹಾಗೂ ತಾಯಿ ಆಶಾದೇವಿ ತಿವಾರಿ" ಹೆಮ್ಮೆಯಿಂದ ಹೇಳಿಕೊಂಡರು.

ಇದನ್ನೂ ಓದಿ : ತಂದೆ, ಚಿಕ್ಕಪ್ಪನನ್ನು ಕಳೆದುಕೊಂಡರೂ ಯುಪಿಎಸ್​ಸಿ ಹಠ ಬಿಡದ ಚತುರೆ : ಕರ್ನಾಟಕದ ಅಗ್ರ ರ್‍ಯಾಂಕರ್​ ಮನದಾಳವಿದು!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ಅಗ್ರಸ್ಥಾನ ಗಳಿಸಿದ್ದಾರೆ. 26 ವರ್ಷದ ಗ್ರೇಟರ್ ನೋಯ್ಡಾ ನಿವಾಸಿಯಾದ ಇವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಅರ್ಥಶಾಸ್ತ್ರ ಪದವೀಧರೆ. ಇದರ ನಂತರ, ಅರ್ನ್ಸ್ಟ್ ಮತ್ತು ಯಂಗ್ ಕಂಪನಿಯಲ್ಲಿ ರಿಸ್ಕ್‌ ಅಡ್ವೈಸರ್‌ ಆಗಿ ಕೆಲ ಕಾಲ ಕೆಲಸ ಮಾಡಿದ್ದರು. ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ.

ಇದನ್ನೂ ಓದಿ : ಬಡತನ ಮಧ್ಯೆಯೂ ಧೃತಿಗೆಡದೇ ಯಶಸ್ಸು ಸಾಧಿಸಿದ ಮುದ್ದೇಬಿಹಾಳ ತಾಂಡಾದ ಯಲಗೂರೇಶ ನಾಯಕ : ಯುಪಿಎಸ್​ಸಿಯಲ್ಲಿ 890ನೇ ರ‍್ಯಾಂಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.