ETV Bharat / state

ಯುಪಿಎಸ್​ಸಿ ಫಲಿತಾಂಶ - 2023: 390ನೇ ರ‍್ಯಾಂಕ್ ಪಡೆದ ಮೈಸೂರಿನ ಪೂಜಾ ಈಟಿವಿ ಭಾರತ್​ನೊಂದಿಗೆ ಸಂದರ್ಶನ

author img

By

Published : May 23, 2023, 8:01 PM IST

ಯುಪಿಎಸ್​ಸಿ ಎರಡನೇ ಪ್ರಯತ್ನದಲ್ಲಿ ಮೈಸೂರಿನ ಪೂಜಾ 390ನೇ ರ‍್ಯಾಂಕ್ ಪಡೆಯುವ ಮೂಲಕ ತೇರ್ಗಡೆಯಾಗಿದ್ದಾರೆ.

ಯುಪಿಎಸ್​ಸಿಯಲ್ಲಿ ತೇರ್ಗಡೆಯಾದ ಯುವತಿ
ಯುಪಿಎಸ್​ಸಿಯಲ್ಲಿ ತೇರ್ಗಡೆಯಾದ ಯುವತಿ

ಯುಪಿಎಸ್​ಸಿ ಎರಡನೇ ಪ್ರಯತ್ನದಲ್ಲಿ ಮೈಸೂರಿನ ಪೂಜಾ 390ನೇ ರ‍್ಯಾಂಕ್ .

ಮೈಸೂರು : ಬಹು ನಿರೀಕ್ಷಿತ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಇಂದು ಹೊರಬಿದ್ದಿದೆ. ಯುಪಿಎಸ್​ಸಿ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಫೇಲಾಗಿದ್ದ ಮೈಸೂರಿನ ಪೂಜಾ ಎಂಬ ಯುವತಿ, ಎರಡನೇ ಪ್ರಯತ್ನದಲ್ಲಿ 390ನೇ ರ‍್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ. ತಾನು ಯಾವ ರೀತಿ ಯುಪಿಎಸ್​ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೇ ಎಂಬ ಬಗ್ಗೆ ಈಟಿವಿ ಭಾರತ್​ಗೆ ವಿಶೇಷ ಸಂದರ್ಶನ ನೀಡಿದ್ದು, ಇದರಲ್ಲಿ ತನ್ನ ಪರೀಕ್ಷೆ ತಯಾರಿ ಕುರಿತು ವಿವರಿಸಿದ್ದಾರೆ.

ಮೈಸೂರಿನ ಮಧ್ಯಮ ವರ್ಗದ ಕುಟುಂಬದ ಪೂಜಾ ಅವರು, ನಗರ ವಿದ್ಯಾವರ್ಧಕ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಬಳಿಕ ಎಲ್​ಎನ್​ಟಿ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಆದರೆ ಡಿಸೆಂಬರ್​ 2022 ರಲ್ಲಿ ಸಿವಿಲ್​ ಸರ್ವೀಸ್​ ತೆಗೆದುಕೊಳ್ಳಬೇಕು ಎಂದು ಧೃಡ ನಿರ್ಧಾರ ಮಾಡಿ ಕೆಲಸ ಬಿಟ್ಟಿದ್ದರು. ಬಳಿಕ ತನ್ನ ಮೊದಲ ಯುಪಿಎಸ್​ಸಿ ಪರೀಕ್ಷೆ ಬರೆದಾಗ, ಪ್ರಿಲಿಮ್ಸ್ ಪರೀಕ್ಷೆ ಕೂಡ ಪಾಸಾಗಿರಲಿಲ್ಲ. ಆದರೆ ತನ್ನ ಎರಡನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್ ಪಡೆದಿದ್ದಾರೆ.

ಇದನ್ನೂ ಓದಿ : ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್​ ಈ ವರ್ಷದ ಟಾಪರ್​

ಈ ಸಂದರ್ಭದಲ್ಲಿ ಪೂಜಾ ಈಟಿವಿ ಭಾರತ್ ಜೊತೆ ಮಾತನಾಡಿ, ನನಗೆ ಯುಪಿಎಸ್​ಸಿ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್ ಪಡೆದಿರುವುದು ತುಂಬಾ ಖುಷಿಯಾಗಿದೆ. ಮೊದಲ ಪ್ರಯತ್ನದಲ್ಲಿ ನಾನು ಗಾಬರಿಯಾಗಿದ್ದೆ. ಅದು ಫೆಲ್ಯೂರ್ ಆಯಿತು. ಆನಂತರ ಎಲ್ಲಿ ತಪ್ಪು ಮಾಡಿದೆ ಎಂಬುದನ್ನು ತಿದ್ದುಕೊಂಡು ಎರಡನೇ ಪ್ರಯತ್ನದಲ್ಲಿ ಎಲ್ಲೂ ಕೋಚಿಂಗ್​ಗೆ ಹೋಗದೇ ಗಟ್ಟಿ ನಿರ್ಧಾರ ಮಾಡಿ ಸತತವಾಗಿ ಓದಿ ಪಾಸಾದೆ.

ಬಳಿಕ ಮೇನ್ ಎಕ್ಸಾಮ್ ಪಾಸಾದಾಗ ಇಂಟರ್​ವ್ಯೂಗೆ ಮೂರು ಜನರ ಬಳಿ ತರಬೇತಿ ತೆಗೆದುಕೊಂಡೆ, ಅದು ನನಗೆ ತುಂಬಾ ಸಹಾಯವಾಯಿತು. ನನಗೆ ಐಎಎಸ್ ಅಥವಾ ಐಪಿಎಸ್ ಸಿಗುವ ಸಾಧ್ಯತೆ ಇದೆ. ಯಾವುದೇ ಕೆಲಸ ಸಿಕ್ಕರೂ ನಿಷ್ಠೆಯಿಂದ ಮಾಡುತ್ತೇನೆ. ನನ್ನ ಈ ಸಾಧನೆಗೆ ತಾಯಿ ಮತ್ತು ಕುಟುಂಬದವರ ಸಹಕಾರ ತುಂಬಾ ಸಹಾಯವಾಯಿತು ಎನ್ನುವ ಮೂಲಕ ಪರೀಕ್ಷೆ ಎದುರಿಸಿದ್ದನ್ನು ತಿಳಿಸಿದರು.

ಭಯಬೇಡ, ಧೃಡ ನಿರ್ಧಾರ ಮಾಡಿ : ಯಾರು ಕೂಡ ಬಡತನ, ಕನ್ನಡ ಮೀಡಿಯಂ ಎಂಬ ಹಿಂಜರಿಕೆ ಬೇಡ. ಸರಿಯಾದ ಧೃಡ ನಿರ್ಧಾರ ತೆಗೆದುಕೊಂಡರೆ ಏನನ್ನಾದರೂ ಸಾಧಿಸಬಹುದು. ಇದಕ್ಕೆ ಮಧ್ಯಮ ವರ್ಗದ ಕುಟುಂಬದ ನಾನೇ ಸಾಕ್ಷಿ. ಎಲ್ಲದಕ್ಕೂ ಕಠಿಣ ಪರಿಶ್ರಮ ಪಡಬೇಕು. ನಾನು ಮೊದಲ ಸಲ ಪ್ರಿಲಿಮ್ಸ್ ಫೇಲಾದರೂ, ಎರಡನೇ ಬಾರಿ ನನಗೆ ಸಾಧಿಸುವ ಛಲದಿಂದ ಈ ಸಾಧನೆ ಮಾಡಿದ್ದೇನೆ ಎಂದು ಮುಂದೆ ಯುಪಿಎಸ್​ಸಿ ಪರೀಕ್ಷೆ ಬರುಯುವವರಿಗೆ ಕಿವಿ ಮಾತನ್ನು ಪೂಜಾ ಅವರು ಹೇಳಿದರು.

ಇದನ್ನೂ ಓದಿ : UPSC Results 2023.. ರಾಜ್ಯಕ್ಕೆ ಕೀರ್ತಿ ತಂದ 20ಕ್ಕೂ ಹೆಚ್ಚು ಸಾಧಕರ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.