ETV Bharat / bharat

ಆರು ವಾರಗಳಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಸುಬ್ರಮಣಿಯನ್ ಸ್ವಾಮಿಗೆ ದೆಹಲಿ ಹೈಕೋರ್ಟ್ ಆದೇಶ

author img

By

Published : Sep 14, 2022, 6:13 PM IST

DOC Title *  subramanian-swamy-ordered-to-vacate-government-bungalow-within-six-weeks
ಆರು ವಾರಗಳಲ್ಲಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ಸುಬ್ರಮಣಿಯನ್ ಸ್ವಾಮಿಗೆ ದೆಹಲಿ ಹೈಕೋರ್ಟ್ ಆದೇಶ

ಸುಬ್ರಮಣಿಯನ್ ಸ್ವಾಮಿ ಅವರಿಗೆ ಭದ್ರತೆ ಕಡಿತಗೊಳಿಸದಿದ್ದರೂ, ಬಂಗಲೆ ಒದಗಿಸುವ ಯಾವುದೇ ಜವಾಬ್ದಾರಿ ಸರ್ಕಾರದ ಮೇಲೆ ಇಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಕೀಲ ಸಂಜಯ್‌ ಜೈನ್‌ ಹೇಳಿದರು.

ನವದೆಹಲಿ: ಸರ್ಕಾರಿ ಬಂಗಲೆಯನ್ನು ಆರು ವಾರಗಳಲ್ಲಿ ಆಸ್ತಿ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಆದೇಶಿಸಿದೆ.

ಭದ್ರತಾ ದೃಷ್ಟಿಯಿಂದ ಸರ್ಕಾರಿ ಬಂಗಲೆ ಮರು ಹಂಚಿಕೆ ಮಾಡುವಂತೆ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಲೇವಾರಿ ಸಂದರ್ಭದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು 2016ರಿಂದ ಈ ಬಂಗಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ವಾಸಿಸುತ್ತಿದ್ದಾರೆ. ಅವರಿಗೆ 5 ವರ್ಷಗಳ ಕಾಲ ಬಂಗಲೆ ಮಂಜೂರು ಮಾಡಲಾಗಿದ್ದು, ಅದರ ಅವಧಿ ಮುಗಿದಿದೆ. ಝಡ್ ಕೆಟಗರಿ ಭದ್ರತೆ ಹೊಂದಿರುವ ವ್ಯಕ್ತಿಗೆ ಸರ್ಕಾರಿ ವಸತಿಯನ್ನು ಕಡ್ಡಾಯಗೊಳಿಸಲು ನ್ಯಾಯಾಲಯಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದರು.

2016ರ ಜನವರಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆ ಮಂಜೂರು ಮಾಡಿತ್ತು. ರಾಜ್ಯಸಭೆಯ ಸಂಪೂರ್ಣ ಅವಧಿಯಲ್ಲೂ ಅವರು ಅಲ್ಲೇ ವಾಸವಿದ್ದರು. ಇದೇ ಏಪ್ರಿಲ್‌ನಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತ್ತು. ಹೀಗಾಗಿ ಅವರು ವಸತಿ ಬಂಗಲೆವನ್ನು ಖಾಲಿ ಮಾಡಬೇಕಾಗಿತ್ತು. ಆದರೆ, ಅವರು ನಿರಂತರ ಭದ್ರತಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಬಂಗಲೆಯನ್ನು ತನಗೆ ಮರುಹಂಚಿಕೆ ಮಾಡುವಂತೆ ಕೋರಿ ಹೈಕೋರ್ಟ್​ ಮೊರೆ ಹೋಗಿದ್ದರು.

ಸ್ವಾಮಿ ಬೇಡಿಕೆಗೆ ಕೇಂದ್ರದ ವಿರೋಧ: ಬುಧವಾರ ನ್ಯಾಯಾಲಯದ ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಕೀಲ ಸಂಜಯ್‌ ಜೈನ್‌ ವಾದ ಮಂಡಿಸಿ, ಸುಬ್ರಮಣಿಯನ್ ಸ್ವಾಮಿ ಅವರಿಗೆ ಭದ್ರತೆ ಕಡಿತಗೊಳಿಸದಿದ್ದರೂ, ಬಂಗಲೆ ಒದಗಿಸುವ ಯಾವುದೇ ಜವಾಬ್ದಾರಿ ಸರ್ಕಾರದ ಮೇಲೆ ಇಲ್ಲ ಎಂದರು. ಅಲ್ಲದೇ, ಕಾಲಕಾಲಕ್ಕೆ ಪರಿಶೀಲನೆಗೆ ಒಳಪಟ್ಟು ಹಿರಿಯ ನಾಯಕನಿಗೆ ಸರ್ಕಾರ ಭದ್ರತೆ ನೀಡುವುದನ್ನು ಮುಂದುವರಿಸಲಿದೆ. ಆದರೆ ಮತ್ತೆ ಬಂಗಲೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇಷ್ಟೇ ಅಲ್ಲ, ದೆಹಲಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಮನೆಯನ್ನು ಹೊಂದಿದ್ದು ಅಲ್ಲಿ ಅವರು ಸ್ಥಳಾಂತರಗೊಳ್ಳಬಹುದು. ಅಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಏಜೆನ್ಸಿಗಳು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ: ಅಧಿಕಾರಿ ಮೇಲೆ ಹಲ್ಲೆ ಕೇಸ್​: ಮಹಾರಾಷ್ಟ್ರ ಮಾಜಿ ಸಚಿವನಿಗೆ ಬೇಲ್​ ತಿರಸ್ಕಾರ​, ನ್ಯಾಯಾಂಗ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.