ETV Bharat / bharat

ಶ್ರೀಲಂಕಾ ಸೆಂಟ್ರಲ್​ ಬ್ಯಾಂಕ್​ ಗವರ್ನರ್​ ರಾಜೀನಾಮೆ

author img

By

Published : Apr 4, 2022, 11:56 AM IST

ಸರ್ಕಾರದ ಸಂಪುಟದಲ್ಲಿದ್ದ ಎಲ್ಲಾ 26 ಸಚಿವರು ಭಾನುವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಮಹತ್ವದ ಬೆಳವಣಿಗೆಯಲ್ಲಿ ಸೆಂಟ್ರಲ್ ಬ್ಯಾಂಕ್​ ಗವರ್ನರ್​ ಅಜಿತ್​ ನಿವಾರ್ಡ್​ ಕ್ಯಾಬ್ರಾಲ್ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

sri-lanka-central-bank
ಶ್ರೀಲಂಕಾ ಸೆಂಟ್ರಲ್​ ಬ್ಯಾಂಕ್

ಶ್ರೀಲಂಕಾ: ಸರ್ಕಾರದ ಎಲ್ಲಾ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸೆಂಟ್ರಲ್​ ಬ್ಯಾಂಕ್​ ಗವರ್ನರ್​ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರಿಗೆ ಸಲ್ಲಿಸಿರುವುದಾಗಿ ಎಂದು ಸೆಂಟ್ರಲ್ ಬ್ಯಾಂಕ್​ ಗವರ್ನರ್​ ಅಜಿತ್​ ನಿವಾರ್ಡ್​ ಕ್ಯಾಬ್ರಾಲ್​ ಟ್ವೀಟ್​ ಮಾಡಿದ್ದಾರೆ.

ದೇಶದಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಸರ್ಕಾರದ ವಿರುದ್ಧ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಹೊರತುಪಡಿಸಿ ಸಂಪುಟದ ಎಲ್ಲಾ 26 ಸಚಿವರು ಭಾನುವಾರ ರಾತ್ರಿಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ. ಈ ಕುರಿತು ನಮಲ್​ ರಾಜಪಕ್ಸ ಖುದ್ದು ಟ್ವೀಟ್‌ ಮಾಡಿದ್ದರು. ಇದೀಗ ಕೇಂದ್ರ ಬ್ಯಾಂಕ್​ ಗವರ್ನರ್​ ಕೂಡ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಸಚಿವರ ಸಾಮೂಹಿಕ ರಾಜೀನಾಮೆ: ಪ್ರಧಾನಿಯಾಗಿ ಮಹಿಂದಾ ರಾಜಪಕ್ಸ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.