ETV Bharat / bharat

ಗುಜರಾತ್​​ನ ಭುಜ್​ ಭೂಕಂಪನ ಸ್ಮೃತಿ ವನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

author img

By

Published : Aug 28, 2022, 12:20 PM IST

ಗುಜರಾತ್​ನ ಭುಜ್​ನಲ್ಲಿ 11 ವರ್ಷಗಳ ಹಿಂದೆ ನಡೆದ ಭೂಕಂಪದಲ್ಲಿ ಮಡಿದವರ ನೆನಪಿಗಾಗಿ ಸ್ಮೃತಿ ವನ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ. ಇಲ್ಲಿ ಮೃತಪಟ್ಟ 1,300 ಜನರ ಹೆಸರನ್ನು ಕೆತ್ತಲಾಗಿದೆ.

smritivan-earthquake
ಗುಜರಾತ್​​ನ ಭುಜ್​ ಭೂಕಂಪನ ಸ್ಮೃತಿ ವನ

ಭುಜ್​(ಗುಜರಾತ್​): ಗುಜರಾತ್​ನ ಭುಜ್​ನಲ್ಲಿ 2001 ರಲ್ಲಿ ಉಂಟಾದ ಭಾರಿ ಭೂಕಂಪನದಿಂದ 1,300 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದರು. ಭೂಕಂಪನ ಕೇಂದ್ರವಾಗಿದ್ದ ಭುಜ್​ನಲ್ಲುಂಟಾದ ಅನಾಹುತವನ್ನು ಧೈರ್ಯವಾಗಿ ಎದುರಿಸಿ ಬದುಕಲು ಮತ್ತು ಜೀವ ಕಳೆದುಕೊಂಡವರಿಗೆ ಗೌರವ ಸಲ್ಲಿಸಲು ಸ್ಮೃತಿ ವನ ಹೆಸರಿನಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಿದರು.

ಈ ಭವ್ಯ ಸ್ಮಾರಕವನ್ನು 470 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಮೃತಿ ವನದಲ್ಲಿ ಭೂಕಂಪ ದುರಂತದಲ್ಲಿ ಮಡಿದವರ ಹೆಸರುಗಳನ್ನು ಹೆಸರನ್ನು ಇದು ಹೊಂದಿದೆ. ಇದರಲ್ಲಿ ಅತ್ಯಾಧುನಿಕ ಭೂಕಂಪ ವಸ್ತುಸಂಗ್ರಹಾಲಯವೂ ಇದೆ.

ಇದರಲ್ಲಿ ಗುಜರಾತ್‌ನ ಮಾಹಿತಿ, ಭೂಕಂಪನದಿಂದಾದ ಅನಾಹುತಗಳು, ಭುಜ್​ ಪ್ರದೇಶದ ಪುನರ್​ನಿರ್ಮಾಣ, ದುರಂತದಲ್ಲಿ ಮಡಿದವರ ಕಣ್ಣೀರ ಕತೆಗಳು, ಪ್ರಕೃತಿ ವಿಕೋಪಗಳ ಬಗ್ಗೆ ಮಾಹಿತಿ, ಅವುಗಳನ್ನು ಎದುರಿಸುವ ಬಗೆಯ ಕುರಿತು ಚಿತ್ರಿಸಲಾಗಿದೆ. 5D ಸಿಮ್ಯುಲೇಟರ್‌ನ ಸಹಾಯದಿಂದ ಭೂಕಂಪದ ಅನುಭವವನ್ನು ಮರುಕಳಿಸುವ ವ್ಯವಸ್ಥೆಯೂ ಇಲ್ಲಿದೆ.

  • Prime Minister Narendra Modi along with CM Bhupendra Patel at the 'Smritivan'- 2001 earthquake memorial and museum, in Gujarat's Bhuj pic.twitter.com/OavMZy2OJl

    — ANI (@ANI) August 28, 2022 " class="align-text-top noRightClick twitterSection" data=" ">

ಇದರ ವಿಶೇಷತೆಗಳೇನು?: ಈ ಸ್ಮೃತಿವನ ಸ್ಮಾರಕದಲ್ಲಿನ ಭೂಕಂಪ ವಸ್ತುಸಂಗ್ರಹಾಲಯ ಏಳು ಹಂತಗಳಲ್ಲಿ ರೂಪಿಸಲಾಗಿದೆ. ಮೊದಲನೆಯದು ರೀಬರ್ತ್​(ಮರುಜನ್ಮ), ಮರು ಹುಡುಕಾಟ(ರಿಡಿಸ್ಕವರ್​), ರೀಸ್ಟೋರ್​(ಸರಿಪಡಿಸು), ರೀಬಿಲ್ಟ್​(ಮರುಸೃಷ್ಟಿ), ಮತ್ತೆ ಯೋಚಿಸು(ರಿಥಿಂಕ್​), ಮತ್ತೆ ಜೀವಿಸು (ರಿಲೀವ್​), ಹೊಸದಾಗಿ ಬಳಸುವುದು(ರಿನ್ಯೂ) ಎಂಬ ಏಳು ಆಶಯಗಳ ಥೀಂ ಅನ್ನು ಇಲ್ಲಿ ಸೃಜಿಸಲಾಗಿದೆ.

ಇದನ್ನೂ ಓದಿ: ಸ್ಪೆಷಲ್‌ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ: ಈ ರೀತಿಯ ಸುರಂಗ ನಿರ್ಮಿಸಲು ಗಡ್ಕರಿಗೆ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.