ETV Bharat / bharat

ಸಿದ್ದು ಮೂಸೆವಾಲಾ ಹತ್ಯೆ: ಶಾರ್ಪ್‌ಶೂಟರ್‌ಗಳು ಸೇರಿ ಮೂವರ ಬಂಧನ, ಶಸ್ತ್ರಾಸ್ತ್ರ ವಶ

author img

By

Published : Jun 20, 2022, 6:24 PM IST

Updated : Jun 20, 2022, 6:30 PM IST

ಈ ಪ್ರಕರಣದಲ್ಲಿ ಜೂನ್ 19 ರಂದು ಗುಜರಾತ್‌ನ ಕಚ್‌ನಿಂದ ಮೂವರನ್ನು ಬಂಧಿಸಿ 8 ಗ್ರೆನೇಡ್‌ಗಳು, 9 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಮೂರು ಪಿಸ್ತೂಲ್‌ಗಳು ಮತ್ತು ಒಂದು ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣ: ಆರೋಪಿಗಳು ಹತ್ಯೆ ಮಾಡುವ ಮೊದಲು ಭಾರೀ ಎಚ್ಚರಿಕೆ ವಹಿಸಿದ್ದರಂತೆ!
ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣ: ಆರೋಪಿಗಳು ಹತ್ಯೆ ಮಾಡುವ ಮೊದಲು ಭಾರೀ ಎಚ್ಚರಿಕೆ ವಹಿಸಿದ್ದರಂತೆ!

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಕೇಸ್‌ನ ಆರೋಪಿಗಳು ತಮ್ಮ ಕೃತ್ಯ ಎಸಗುವ ಮೊದಲು ರಹಸ್ಯವಾಗಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿ ಎಚ್‌ಜಿಎಸ್ ಧಲಿವಾಲ್ ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಜೂನ್ 19ರಂದು ಗುಜರಾತ್‌ನ ಕಚ್‌ನಲ್ಲಿ ಬಂಧಿಸಲಾಗಿದೆ. ಗಾಯಕನ ಹತ್ಯೆಗೂ ಮುನ್ನ ಆರೋಪಿಗಳು ಹಲವು ಬಾರಿ ಸ್ಥಳ ಪರಿಶೀಲನೆ ಮತ್ತು ಸಾಕಷ್ಟು ಕಸರತ್ತು ನಡೆಸಿದ್ದರು ಎಂದು ಅವರು ವಿವರಿಸಿದರು. ಬಂಧಿತರಿಂದ ಎಂಟು ಗ್ರೆನೇಡ್‌ಗಳು, ಒಂಬತ್ತು ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಮೂರು ಪಿಸ್ತೂಲ್‌ಗಳು ಮತ್ತು ಒಂದು ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

  • A large number of arms & explosives including 8 grenades, 3 pistols and around 50 bullets recovered from the possession of the three persons including two main shooters arrested in the Sidhu Moose Wala murder case: Delhi Police pic.twitter.com/QTRkLC2nv6

    — ANI (@ANI) June 20, 2022 " class="align-text-top noRightClick twitterSection" data=" ">

ಹರಿಯಾಣದ ಸೋನಿಪತ್ ನಿವಾಸಿ ಪ್ರಿಯವ್ರತ್ ಅಲಿಯಾಸ್ ಫೌಜಿ (26), ಜಜ್ಜರ್ ಜಿಲ್ಲೆಯ ಕಾಶಿಶ್ (24) ಮತ್ತು ಪಂಜಾಬ್‌ನ ಭಟಿಂಡಾ ನಿವಾಸಿ ಕೇಶವ್ ಕುಮಾರ್ (29) ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಶಾರ್ಪ್​ ಶೂಟರ್​ಗಳಾಗಿದ್ದಾರೆ.

ಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಸಿಧು ಮೂಸೆವಾಲಾ ಎಂದು ಕರೆಯಲ್ಪಡುವ ಶುಭದೀಪ್ ಸಿಂಗ್ ಸಿಧುವನ್ನು ಗುಂಡಿಕ್ಕಿ ಕೊಂದಿದ್ದರು. ಇದರಲ್ಲಿ ಪ್ರಿಯವ್ರತ್ ಎಂಬಾತ ಶೂಟರ್‌ಗಳ ತಂಡ ಮುನ್ನಡೆಸಿದ್ದ ಮತ್ತು ಘಟನೆಯ ಸಮಯದಲ್ಲಿ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಜತೆ ನೇರ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ಘಟನೆಗೂ ಮುನ್ನ ಪೆಟ್ರೋಲ್ ಪಂಪ್‌ನ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರಿಯವ್ರತ್ ಕಾಣಿಸಿಕೊಂಡಿದ್ದ. ಈ ಹಿಂದೆ ನಡೆದ ಎರಡು ಕೊಲೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. 2015ರಲ್ಲಿ ಸೋನಿಪತ್‌ನಲ್ಲಿ ನಡೆದ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದು, 2021ರಲ್ಲಿ ಸೋನಿಪತ್‌ನಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲೂ ಮೋಸ್ಟ್‌​ ವಾಂಟೆಡ್​ ಆಗಿದ್ದನು.

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಪ್ರತಿಪಕ್ಷಗಳ ವಿನಂತಿ ನಿರಾಕರಿಸಿದ ಮಹಾತ್ಮ ಗಾಂಧಿ ಮೊಮ್ಮಗ!

Last Updated : Jun 20, 2022, 6:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.