ETV Bharat / bharat

ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಪ್ರತಿಪಕ್ಷಗಳ ವಿನಂತಿ ನಿರಾಕರಿಸಿದ ಮಹಾತ್ಮ ಗಾಂಧಿ ಮೊಮ್ಮಗ!

author img

By

Published : Jun 20, 2022, 5:30 PM IST

ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಾಡಿದ ಪ್ರತಿಪಕ್ಷಗಳ ನಾಯಕರ ಒತ್ತಾಯವನ್ನು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ನಯವಾಗೇ ತಿರಸ್ಕರಿಸಿದ್ದಾರೆ.

ಅಧ್ಯಕ್ಷಿಯ ಚುನಾವಣೆಗೆ ಸ್ಪರ್ಧಿಸಲು ವಿರೋಧ ಪಕ್ಷಗಳ ವಿನಂತಿ ನಿರಾಕರಿಸಿದ ಮಹಾತ್ಮಾ ಗಾಂಧಿ ಮೊಮ್ಮಗ
ಅಧ್ಯಕ್ಷಿಯ ಚುನಾವಣೆಗೆ ಸ್ಪರ್ಧಿಸಲು ವಿರೋಧ ಪಕ್ಷಗಳ ವಿನಂತಿ ನಿರಾಕರಿಸಿದ ಮಹಾತ್ಮಾ ಗಾಂಧಿ ಮೊಮ್ಮಗ

ನವದೆಹಲಿ : ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮಾಡಿದ ಪ್ರತಿಪಕ್ಷಗಳ ನಾಯಕರ ಒತ್ತಾಯವನ್ನು ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ತಿರಸ್ಕರಿಸಿದ್ದಾರೆ. ಹಾಗೆ ಚುನಾವಣೆಗೆ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಹುಟ್ಟುಹಾಕುವ ಮತ್ತು ಪ್ರತಿಪಕ್ಷಗಳ ಒಗ್ಗಟ್ಟನ್ನು ಖಚಿತಪಡಿಸಿಕೊಳ್ಳುವವರಾಗಿರಬೇಕು ಎಂದು ಹೇಳಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಪಕ್ಷಗಳ ಅಭ್ಯರ್ಥಿಯಾಗಲು ಹಲವಾರು ದೊಡ್ಡ ದೊಡ್ಡ ನಾಯಕರು ನನ್ನ ಬಗ್ಗೆ ಗೌರವಯುತ ಚಿಂತನೆ ಮಾಡಿದ್ದಾರೆ. ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ, ವಿಷಯವನ್ನು ಆಳವಾಗಿ ಪರಿಗಣಿಸಿದ ನಂತರ ವಿರೋಧ ಪಕ್ಷದ ಅಭ್ಯರ್ಥಿಯು ರಾಷ್ಟ್ರೀಯ ಒಮ್ಮತವನ್ನು ಮತ್ತು ರಾಷ್ಟ್ರೀಯ ವಾತಾವರಣವನ್ನು ಸೃಷ್ಟಿಸುವವರಲ್ಲಿ ಒಬ್ಬರಾಗಿರಬೇಕು ಎಂದು ನಾನು ನಂಬುತ್ತೇನೆ. ಪ್ರತಿಪಕ್ಷಗಳ ಒಗ್ಗಟ್ಟಿನ ಜೊತೆಗೆ ಇದನ್ನು ಉತ್ತಮವಾಗಿ ಮಾಡುವ ಇತರರು ಇರುತ್ತಾರೆ ಎಂದು ಸಹ ನಾನು ಭಾವಿಸುತ್ತೇನೆ ಎಂದು ನಯವಾಗಿಯೇ ಈ ಆಫರ್​ನ್ನು ನಿಕಾಕರಿಸಿದ್ದಾರೆ.

ಅಂತಹ ಗುಣ ಇರುವ ವ್ಯಕ್ತಿಗೆ ಅವಕಾಶ ನೀಡುವಂತೆ ನಾನು ನಾಯಕರಲ್ಲಿ ವಿನಂತಿಸಿದ್ದೇನೆ. ಡಾ. ರಾಜೇಂದ್ರ ಪ್ರಸಾದ್ ಅವರು ನಮ್ಮ ಮೊದಲ ರಾಷ್ಟ್ರಪತಿಯಾಗಿ ಉದ್ಘಾಟಿಸಿದ ಕಚೇರಿಗೆ ಯೋಗ್ಯವಾದ ರಾಷ್ಟ್ರಪತಿಯನ್ನು ಭಾರತಕ್ಕೆ ಈ ಮೂಲಕ ನೀಡುವಂತಾಗಲಿ ಎಂದು ಹರಸಿದ್ದಾರೆ.

77 ವರ್ಷದ ಇವರು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾಕ್ಕೆ ಭಾರತದ ಹೈಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಇವರು ಮಹಾತ್ಮ ಗಾಂಧಿ ಮತ್ತು ಸಿ ರಾಜಗೋಪಾಲಚಾರಿಯವರ ಮೊಮ್ಮಗ.

ಇದನ್ನೂ ಓದಿ: 16 ವರ್ಷದ ಹುಡುಗಿ ಮದುವೆಯಾಗಲು ಏನೂ ತೊಂದರೆ ಇಲ್ಲ ಎಂದ ಪಂಜಾಬ್ - ಹರಿಯಾಣ ಹೈಕೋರ್ಟ್!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.