ETV Bharat / bharat

ಆಕೆ ವಿಷ್ಣು ಪಾದ ಸೇರಿದ್ದಾಳೆ.. ಸಸ್ಯಾಹಾರಿ ಬಬಿಯಾ ಸಾವಿಗೆ ಕಂಬನಿ ಮಿಡಿದ ಶೋಭಾ ಕರಂದ್ಲಾಜೆ

author img

By

Published : Oct 10, 2022, 10:55 AM IST

Updated : Oct 12, 2022, 1:08 PM IST

Shobha Karandlaje expressed condolences to Babiya crocodile
Shobha Karandlaje expressed condolences to Babiya crocodile

ಅನಂತಪುರಂ ಅನಂತಪದ್ಮನಾಭಸ್ವಾಮಿ ದೇಗುಲದ ಅತಿ ದೊಡ್ಡ ಆಕರ್ಷಣೆಯಾದ ಬಬಿಯಾ ಮೊಸಳೆ ಭಾನುವಾರ ನಿಧನವಾಗಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದ್ದಾರೆ.

ಕಾಸರಗೋಡು(ಕೇರಳ): ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ಬಬಿಯಾ ಮೊಸಳೆ ಇನ್ನಿಲ್ಲ. ಭಾನುವಾರ ರಾತ್ರಿ ನಿಧನವಾಗಿದೆ.

ಶ್ರೀ ಅನಂತಪುರಂ ದೇವಸ್ಥಾನದ ದೇವರ ಮೊಸಳೆ ಬಬಿಯಾ ವಿಷ್ಣು ಪಾದಕ್ಕೆ ಸೇರಿದೆ. ದೈವಿಕ ಮೊಸಳೆಯು ಶ್ರೀ ಅನಂತಪದ್ಮನಾಭ ಸ್ವಾಮಿಯ ಅನ್ನ ಮತ್ತು ಬೆಲ್ಲದ ಪ್ರಸಾದವನ್ನು ಸೇವಿಸಿ 75ಕ್ಕೂ ಹೆಚ್ಚು ವರ್ಷಗಳ ಕಾಲ ದೇವಾಲಯದ ಸರೋವರದಲ್ಲಿ ವಾಸಿಸುತ್ತಿತ್ತು ಮತ್ತು ದೇವಾಲಯವನ್ನು ಕಾಪಾಡಿತ್ತಿತ್ತು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಂಬನಿ ಮಿಡಿದು ಟ್ವೀಟ್​ ಮಾಡಿದ್ದಾರೆ.

  • Babiya, the god's own crocodile of Sri Anantapura Lake temple has reached Vishnu Padam.

    The divine crocodile lived in the temple's lake for over 70years by eating the rice & jaggery prasadam of Sri Ananthapadmanabha Swamy & guarded the temple.

    May she attain Sadgati, Om Shanti! pic.twitter.com/UCLoSNDiyE

    — Shobha Karandlaje (@ShobhaBJP) October 10, 2022 " class="align-text-top noRightClick twitterSection" data=" ">

ಮೊಸಳೆ ಸುಮಾರು 75 ವರ್ಷಗಳಿಂದ ಇದೇ ಕೊಳದಲ್ಲಿದೆ ಎಂಬ ನಂಬಿಕೆ ಇದೆ. ಬಬಿಯಾದಿಂದ ಇದುವರೆಗೆ ಯಾರೂ ತೊಂದರೆಗೊಳಗಾದ ಉದಾಹರಣೆಯೇ ಇಲ್ಲ. ಪೂಜೆ ಬಳಿಕ ಅರ್ಚಕರು ಕರೆದಾಗ ಹೊರಬರುತ್ತಿದ್ದ ಬಬಿಯಾ ನೈವೇದ್ಯ ತಿಂದು ಮತ್ತೆ ನೀರಿನೊಳಗೆ ಹೋಗುತ್ತಿತ್ತು. ಪ್ರತಿದಿನ ಎರಡು ಬಾರಿ ಬಬಿಯಾ ನೈವೇದ್ಯ ಸ್ವೀಕರಿಸುತ್ತಿತ್ತು.

ಈ ಹಿಂದೆ 2019ರಲ್ಲಿ ಬಬಿಯಾ ಬದುಕಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ, ದೇವಸ್ಥಾನದ ಅಧಿಕಾರಿಗಳು ಸುಳ್ಳು ಈ ಪ್ರಚಾರವನ್ನು ನಿರಾಕರಿಸಿದ್ದರು. ಇದಕ್ಕೆ ಯಾವುದೇ ಆಧಾರವಿಲ್ಲ ಮತ್ತು ಮೊಸಳೆ ಇನ್ನೂ ಆರೋಗ್ಯವಾಗಿದೆ ಎಂದು ಹೇಳಿದ್ದರು. ಬಬಿಯಾ ಸಾವಿನ ಪ್ರಚಾರದ ನಂತರವೂ ಮೊಸಳೆ ದೇವಸ್ಥಾನದ ಅಂಗಳವನ್ನು ತಲುಪಿತ್ತು. ಈಗ ಬಬಿಯಾ ನಿಧನ ಹೊಂದಿದ ಸುದ್ದಿ ತಿಳಿದ ಭಕ್ತರು ಸೇರಿದಂತೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.

ಓದಿ: ಅನಂತಪದ್ಮನಾಭಸ್ವಾಮಿ ದೇಗುಲದ ಸಸ್ಯಾಹಾರಿ ಮೊಸಳೆ ಬಬಿಯಾ ಇನ್ನಿಲ್ಲ..

Last Updated :Oct 12, 2022, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.