ETV Bharat / bharat

ಸೆಕ್ಸ್​ ರಾಕೆಟ್​ ಭೇದಿಸಿದ ದೆಹಲಿ ಪೊಲೀಸರು: ಮೂರು ಮಹಿಳೆಯರು, ಒಬ್ಬ ಪಿಂಪ್​ ಬಂಧನ

author img

By

Published : Mar 10, 2022, 1:00 PM IST

ಪಶ್ಚಿಮ ದೆಹಲಿಯ ಪಾಂಡವನಗರದ ವಸತಿ ಗೃಹವೊಂದರಲ್ಲಿ ನಡೆಯುತ್ತಿದ್ದ ಸೆಕ್ಸ್​ ರಾಟೆಕ್​ ದಂಧೆಯನ್ನು ಇಂದು ದೆಹಲಿ ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಪಿಂಪ್​ ಅನ್ನು ಬಂಧಿಸಿದ್ದಾರೆ. ಈ ನಾಲ್ವರು ಪಾಂಡವನಗರ ಸ್ಥಳೀಯ ನಿವಾಸಿಗಳಾಗಿದ್ದು, ಪಿಂಪ್​ ಅನ್ನು ನೌಶದ್​ ಎಂದು ಗುರುತಿಸಲಾಗಿದೆ. ದಾಳಿ ವೇಳೆ, ಸ್ಥಳದಿಂದ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
sex-racket-busted-four-arrested-in-east-delhi
ಸೆಕ್ಸ್​ ರಾಕೆಟ್​ ಭೇದಿಸಿದ ದೆಹಲಿ ಪೊಲೀಸರು

ನವದೆಹಲಿ: ಪಶ್ಚಿಮ ದೆಹಲಿಯ ಪಾಂಡವನಗರದ ವಸತಿಗೃಹವೊಂದರಲ್ಲಿ ನಡೆಯುತ್ತಿದ್ದ ಸೆಕ್ಸ್​ ರಾಟೆಕ್​ ದಂಧೆಯನ್ನು ಇಂದು ದೆಹಲಿ ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರು ಹಾಗೂ ಒಬ್ಬ ಪಿಂಪ್​ ಒಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸುಳಿವೊಂದನ್ನು ಆಧರಿಸಿ ಮಾಂಡವಾಲಿ ಪೊಲೀಸ್ ಠಾಣೆಯ ಎಸ್‌ಐ ಭಾರತೀಯ ರಾಣಿ, ಹೆಡ್ ಕಾನ್ಸ್​​ಟೇಬಲ್​​ ಯೋಗೇಶ್ ಮತ್ತು ಕಾನ್ಸ್​​​ಟೇಬಲ್​ ಪ್ರಿಯಾಂಕಾ ನೇತೃತ್ವದ ಪೊಲೀಸರ ತಂಡವು ದಾಳಿ ನಡೆಸಿದ ಸಂದರ್ಭದಲ್ಲಿ ಮೂವರು ಮಹಿಳೆಯರು ಮತ್ತು ದಲ್ಲಾಳಿಯನ್ನು ಬಂಧಿಸಲಾಗಿದೆ.

ಈ ನಾಲ್ವರು ಪಾಂಡವನಗರ ಸ್ಥಳೀಯ ನಿವಾಸಿಗಳಾಗಿದ್ದು, ಪಿಂಪ್​ ಅನ್ನು ನೌಶದ್​ ಎಂದು ಗುರುತಿಸಲಾಗಿದೆ. ದಾಳಿ ವೇಳೆ, ಸ್ಥಳದಿಂದ ಅನೇಕ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಪೊಲೀಸರ ಪ್ರಕಾರ, ಕಾರ್ಯಾಚರಣೆ ವೇಳೆ ಹೆಡ್ ಕಾನ್ಸ್​​ಟೇಬಲ್​ ಯೋಗೇಶ್ ಅವರು ಸಾದಾ ಬಟ್ಟೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ಹೋಗಿದ್ದಾರೆ. ಬ್ರೋಕರ್​ ನೌಶದ್​ ಮೂರನೇ ಮಹಡಿಯಲ್ಲಿದ್ದ ಮೂವರು ಮಹಿಳೆಯರನ್ನು ಕಾನ್ಸ್​​ಟೇಬಲ್​ ಪರಿಚಯಿಸಿದರು.

ಆ ವೇಳೆ ಒಬ್ಬ ಮಹಿಳೆ 2000 ರೂ.ಗೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆ ನಡೆಸಿ ಅದನ್ನು 1,500 ರೂ.ಗೆ ಇಳಿಸಲಾಯಿತು. ನಂತರ ಆ ಮಹಿಳೆಯೊಂದಿಗೆ ಕೊಠಡಿಗೆ ಹೋಗುತ್ತಿದ್ದಂತೆ ಕಾನ್ಸ್​​ಟೇಬಲ್​ ಯೋಗೇಶ್​ ತಾವು ಕೊಂಡೊಯ್ದಿದ್ದ ಕಲ್ಲುಗಳನ್ನು ಕಿಟಕಿ ಮೂಲಕ ಹೊರಗೆ ಎಸೆದು ತಮ್ಮೊಂದಿಗೆ ಬಂದಿದ್ದ ಇತರ ಪೊಲೀಸ್​ ಸಿಬ್ಬಂದಿಗೆ ಒಳ ಬರಲು ಸೂಚನೆ ನೀಡಿದರು. ಸೂಚನೆ ಸಿಕ್ಕ ಬಳಿಕ ಒಳನುಗ್ಗಿದ ಪೊಲೀಸ್​ ತಂಡ ಮೂರು ಮಹಿಳೆ ಹಾಗೂ ಪಿಂಪ್​ ಅನ್ನು ಬಂಧಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.